ನವದೆಹಲಿ : ವಿಶ್ವಾದ್ಯಂತ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ಕೇವಲ 10 ವರ್ಷದೊಳಗಾಗಿ ನಮ್ಮ ಸುತ್ತಲಿನ  ಪರಿಸರದ ಬಗ್ಗೆ ಕಾಳಜಿ ವಹಿಸಿಲ್ಲಾ ಎಂದರೆ ಇಡೀ ಭೂಮಂಡಲವೇ ಪರಿತಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಲಿದೆ ಎಂದು  ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪರಿಸರ ತಜ್ಞರು ಹಾಗೂ ವಿಜ್ಞಾನಿಗಳು ವರದಿ ಸಲ್ಲಿಸಿದ ಆಧಾರದ ಮೇಲೆ ಈ  ಎಚ್ಚರಿಕೆಯ ಸಂದೇಶವನ್ನು ಎಲ್ಲಾ ರಾಷ್ಟ್ರಗಳಿಗೂ ತಿಳಿಸಿದೆ.

ಇಲ್ಲಿ ನಾನಾ ವಿಚಾರಗಳ ಬಗ್ಗೆ ಗಮನವಹಿಸಿದ್ದು ಗ್ಲೋಬಲ್ ವಾರ್ಮಿಂಗ್​ ಕುರಿತಂತೆ ಹಾಗೂ ಇಂಡಸ್ಟ್ರೀಯಲ್ ತಾಪಮಾನಗಳ ಬಗ್ಗೆ ತಿಳಿಸಿದೆ.

ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಇರುವ ಭಾರತ  ಹಾಗೂ ಪ್ರಪಂಚದಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿದ್ದು . ಈಗಾಗಲೆ ಜಾಗತಿಕ ತಾಪಮಾನದಿಂದಗಾಗಿ ಸಾಕಷ್ಟು  ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದಾಗುವ ಅನಾಹುತಗಳ ಬಗ್ಗೆ  ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ.

ಬಿಸಿಲಿನ ತಾಪಕ್ಕೆ 2015ರಲ್ಲಿ ದೇಶದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಜಾಗತಿಕ ತಾಪಮಾನವೇನಾದರೂ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್​ ಹೆಚ್ಚಾದರೆ ಅದೇ ರೀತಿಯ ಬಿಸಿಗಾಳಿ ಮತ್ತೆ ನಮ್ಮ ದೇಶದ ಹಲವು ಭಾಗಗಳನ್ನು ಆವರಿಸುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ  ತಿಳಿಸಿದೆ.

ಒಂದುವೇಳೆ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್​ ಹೆಚ್ಚಾದರೆ ಉರಿಬಿಸಿಲಿನ ತಾಪದ ಪರಿಣಾಮವನ್ನು ಎದುರಿಸುವ ರಾಷ್ಟ್ರಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಥಮ ಸ್ಥಾನದಲ್ಲಿವೆ ಎಂದು ಯುನಿವರ್ಸಿಟಿ ಆಫ್​ ವಾಷಿಂಗ್​ಟನ್​, ವಿಶ್ವ ಆರೋಗ್ಯ ಸಂಸ್ಥೆ, ಕ್ಲೈಮೇಟ್​ ಟ್ರ್ಯಾಕರ್​ ತಜ್ಞರು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‌ನಲ್ಲಿ ನಡೆಯಲಿರುವ ಕಟೋವೈಸ್ ಸಮಾವೇಶದಲ್ಲಿ ಹವಾಮಾನ ಬದಲಾವಣೆಗಳನ್ನು ಎದುರಿಸಲು ಪ್ಯಾರಿಸ್ ಒಪ್ಪಂದದ ಪರಿಶೀಲನೆ ನಡೆಯಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾದ ಭಾರತ ದೇಶ ಈ ಜಾಗತಿಕ ಸಮಾವೇಶದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಒಂದುವೇಳೆ ಅತಿಯಾದ ಬಿಸಿಲಿನಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾದರೆ ಆಹಾರದ ಅಭದ್ರತೆ, ಆಹಾರ ಉತ್ಪನ್ನಗಳ ಬೆಲೆ ಏರಿಕೆ, ಜನರ ವಲಸೆ, ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರಲಿದೆ. ಹಾಗೂ  ಮುಂದಿನ 10 ವರ್ಷದೊಳಗೆ ಇತಿಹಾಸದಲ್ಲಿ ಬಹಳ ಮುಖ್ಯವಗಿದೆ ಎಂದು ಇಂಟರ್ ಗೋರ್ವನ್ ಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟಿಕ್  ಚೇಂಜ್ (ಐಪಿಸಿಸಿಸಿ) 2018ರ ನೀಡಿರುವ  ವರದಿಯಲ್ಲಿ ಈ ಎಲ್ಲ ಆಂಶಗಳನ್ನು ಹೈಲೈಟ್ ಮಾಡಿದೆ.

Please follow and like us:
0
http://bp9news.com/wp-content/uploads/2018/10/natural-disaster-1024x576.jpghttp://bp9news.com/wp-content/uploads/2018/10/natural-disaster-150x150.jpgBP9 Bureauಅಂತಾರಾಷ್ಟ್ರೀಯಪ್ರಮುಖರಾಷ್ಟ್ರೀಯನವದೆಹಲಿ : ವಿಶ್ವಾದ್ಯಂತ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ಕೇವಲ 10 ವರ್ಷದೊಳಗಾಗಿ ನಮ್ಮ ಸುತ್ತಲಿನ  ಪರಿಸರದ ಬಗ್ಗೆ ಕಾಳಜಿ ವಹಿಸಿಲ್ಲಾ ಎಂದರೆ ಇಡೀ ಭೂಮಂಡಲವೇ ಪರಿತಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಲಿದೆ ಎಂದು  ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ವಿಶ್ವ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪರಿಸರ ತಜ್ಞರು ಹಾಗೂ ವಿಜ್ಞಾನಿಗಳು ವರದಿ ಸಲ್ಲಿಸಿದ ಆಧಾರದ ಮೇಲೆ ಈ  ಎಚ್ಚರಿಕೆಯ ಸಂದೇಶವನ್ನು ಎಲ್ಲಾ ರಾಷ್ಟ್ರಗಳಿಗೂ ತಿಳಿಸಿದೆ. ಇಲ್ಲಿ ನಾನಾ ವಿಚಾರಗಳ ಬಗ್ಗೆ ಗಮನವಹಿಸಿದ್ದು...Kannada News Portal