ನವದೆಹಲಿ :  ಮುಂಗಾರು ಅಧಿವೇಶನದ ಕೊನೆ ದಿನವಾದ ಇಂದು ಕಾಂಗ್ರಸ್ ಪಕ್ಷದ ನೇತೃತ್ವದಲ್ಲಿ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಸರ್ಕಾರವು ಫ್ರಾನ್ಸ್ ರಾಷ್ಟ್ರದ ಜೊತೆ ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿದೆ. ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಹುಕೋಟಿ ಒಪ್ಪಂದದ ಕುರಿತು ಮಾತನಾಡಬೇಕು ಮತ್ತು ಸಂಸತ್ ನಲ್ಲಿ ಇದರ ಬಗ್ಗೆ ಚರ್ಚಿಸುವಲ್ಲಿ ವಿಫಲವಾಗಿದೆ. ಈ ಸಂಬಂಧ ಎದ್ದಿರುವ ಪ್ರಶ್ನೆಗಳಿಗ ಉತ್ತರವನ್ನು ನೀಡುವಲ್ಲಿ ಪ್ರಧಾನಿ ಮೋದಿ ಅವರು ಸೋತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ನವದೆಹಲಿಯ ಗಾಂಧಿ ಪ್ರತಿಮೆ ಎದುರು ಇತರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸೋನಿಯಾ ಗಾಂಧಿ ಜೊತೆ ಸಂಸದರಾದ ರಾಜ್ ಬಬ್ಬರ್, ಗುಲಾಂ ನಬಿ ಅಜಾದ್, ಆನಂದ ಶರ್ಮ, ಅಂಭಿಕ ಸೋನಿ, ಸಿ.ಪಿ.ಐ ಡಿ. ಡಿ ರಾಜ, ಆಪ್ ಸಂಸದೆ ಶುಶಿಲ್ ಗುಪ್ತ ಮತ್ತು ಹಲವಾರು ರಾಜಕೀಯ ನಾಯಕರು ಮತ್ತು ಸಂಸದರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇನ್ನು ನಿನ್ನೇ ಅಧಿವೇಶನದ ವೇಳೆ ಕಾಂಗ್ರಸ್ ನಾಯಕರು ಅಧಿವೇಶವನ್ನು ಮುಂದುವರಿಸದಂತೆ ಸಭಾಧ್ಯಕ್ಷರನ್ನು ಪಟ್ಟು ಹಿಡಿದರು ಹಾಗೂ ಅಧಿವೇಶನದಲ್ಲಿ ವಿಪಕ್ಷಗಳ ನಾಯಕರು ಸಭಾಪತಿ ಅವರು ಜಂಟಿ ಸಂಸದೀಯ ಸಮಿತಿಯನ್ನು ರಚಿಸಿಬೇಕು ಮತ್ತು ಕೇಂದ್ರಸರ್ಕಾರವು ಇದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು, ಪ್ರಧಾನಿ ಮೋದಿ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸದನದಲ್ಲಿ ಸರಕಾರದ ಗಮನ ಸಳೆದಿದ್ದರು.

Please follow and like us:
0
http://bp9news.com/wp-content/uploads/2018/08/sonia-1.jpghttp://bp9news.com/wp-content/uploads/2018/08/sonia-1-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ :  ಮುಂಗಾರು ಅಧಿವೇಶನದ ಕೊನೆ ದಿನವಾದ ಇಂದು ಕಾಂಗ್ರಸ್ ಪಕ್ಷದ ನೇತೃತ್ವದಲ್ಲಿ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಸರ್ಕಾರವು ಫ್ರಾನ್ಸ್ ರಾಷ್ಟ್ರದ ಜೊತೆ ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿದೆ. ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಹುಕೋಟಿ ಒಪ್ಪಂದದ ಕುರಿತು ಮಾತನಾಡಬೇಕು ಮತ್ತು ಸಂಸತ್ ನಲ್ಲಿ ಇದರ ಬಗ್ಗೆ ಚರ್ಚಿಸುವಲ್ಲಿ ವಿಫಲವಾಗಿದೆ. ಈ ಸಂಬಂಧ ಎದ್ದಿರುವ ಪ್ರಶ್ನೆಗಳಿಗ ಉತ್ತರವನ್ನು...Kannada News Portal