ಬೆಂಗಳೂರು : ದನ ಮತ್ತು ಹಂದಿ ಮಾಂಸ ತಿನ್ನುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್‌ ನೆಹರೂ ಅವರು ‘ಪಂಡಿತ’ ಕುಲಕ್ಕೆ ಸೇರಿದವರಲ್ಲ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್‌ ಅಹುಜಾ ಹೇಳಿದ್ದಾರೆ.

ನೆಹರೂ ಅವರ ಹೆಸರಿನ ಮುಂದೆ ‘ಪಂಡಿತ’ ಎಂಬ ವಿಶೇಷಣವನ್ನು ಕಾಂಗ್ರೆಸ್ ಸೇರಿಸಿದೆ ಎಂದು ಹೇಳಿದ್ದಾರೆ. ದೇಶದಲ್ಲಿರುವ ಎಲ್ಲ ಕೆಟ್ಟ ಸಾಮಾಜಿಕ ಸಂಪ್ರದಾಯಗಳಿಗೆ ನೆಹರೂ ಕುಟುಂಬವೇ ಕಾರಣ ಎಂದು ಅಹುಜಾ ಆರೋಪಿಸಿದ್ದಾರೆ.

ಅಲ್ವಾರ್‌ ಜಿಲ್ಲೆಯ ರಾಮಗಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಹುಜಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುವ ಗುಣವನ್ನು ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರಿಂದ ಮೈಗೂಡಿಸಿಕೊಂಡಿದ್ದಾರೆ ಎಂಬ ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಹೇಳಿಕೆಗೆ ಅಹುಜಾ ಈ ರೀತಿ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ಎಂದಿಗೂ ಇಂದಿರಾ ಗಾಂಧಿ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿದ ನಿದರ್ಶನಗಳಿಲ್ಲ ಎಂದು ಇದೇ ವೇಳೆ ಗ್ಯಾನ್‌ದೇವ್‌ ಆರೋಪಿಸಿದರು.

Please follow and like us:
0
http://bp9news.com/wp-content/uploads/2018/08/neharu.jpghttp://bp9news.com/wp-content/uploads/2018/08/neharu-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯbeef',Nehru's 'pandit' is not descended from 'porkಬೆಂಗಳೂರು : ದನ ಮತ್ತು ಹಂದಿ ಮಾಂಸ ತಿನ್ನುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್‌ ನೆಹರೂ ಅವರು ‘ಪಂಡಿತ’ ಕುಲಕ್ಕೆ ಸೇರಿದವರಲ್ಲ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್‌ ಅಹುಜಾ ಹೇಳಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180801100541'); document.getElementById('div_1520180801100541').appendChild(scpt); ನೆಹರೂ...Kannada News Portal