ಬೆಂಗಳೂರು : ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ  ಪ್ರತಿಭಟನೆ ಮಾಡುತ್ತಿದ್ದ ಉಭಯ ಪಕ್ಷಗಳ ಸದಸ್ಯರು ಮತ್ತೆ ರೆಸಾರ್ಟ್​ನತ್ತ  ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ. ಶಿವಕುಮಾರ್​  ಮುಂದಿನ  ನಡೆ ಬಗ್ಗೆ ಏನನ್ನೂ ಹೇಳಲ್ಲ, ನಮಗೆ ಯಾವುದೇ  ಭದ್ರತೆ ಬೇಕಿಲ್ಲ. ನಮ್ಮ ಕಾಂಗ್ರೆಸ್​ ಶಾಸಕರು ನಮ್ಮೊಂದಿಗೇ ಇರುತ್ತಾರೆ, ಸದ್ಯ  ಮತ್ತೆ  ನಾವು ರೆಸಾರ್ಟ್​ಗೆ  ಹೋಗುತ್ತಿದ್ದೇವೆ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಸಿದ್ದ ಜೆಡಿಎಸ್​ ಕಾರ್ಯಕರ್ತಶ್ರೀನಿವಾಸ್​ ಎಂಬುವವರು ಮುಖ್ಯಮಂತ್ರಿ ಬಿಎಸ್ ವೈ ಕಾರು ಅಡ್ಡಗಟ್ಟಿ, ಅವಾಜ್​ ಹಾಕಿದ ಪ್ರಸಂಗ ನಡೆಯಿತು. ಇನ್ನು ಜೆಡಿಎಸ್​ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗೆ  ಧಿಕ್ಕಾರ  ಕೂಗಿ,ಬಿಎಸ್​ವೈ ಅಧಿಕಾರ ಕೇವಲ ಕೆಲವೇ ಕೆಲವು ದಿನ ಎಂಬ ಕೂಗು ಕೇಳಿ ಬರುತ್ತಿತ್ತು. ಜೆಡಿಎಸ್​ ಕಾರ್ಯಕರ್ತ ಶ್ರೀನಿವಾಸ್​ ಅವಾಜ್​ಗೆ ಬಿಎಸ್​ವೈ ಕಕ್ಕಾಬಿಕ್ಕಿಯಾದರು.  ಆದರೆ ಜೆಡಿಎಸ್​ ಕಾರ್ಯಕರ್ತರು ಎಲ್ಲರೂ ಒಟ್ಟು ಸೇರಿಕೊಂಡು   ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಬೇಕು ಎಂದು ಏರುದನಿಯಲ್ಲಿ  ಕೂಗುತ್ತಿದ್ದರು.

Please follow and like us:
0
http://bp9news.com/wp-content/uploads/2018/05/Yeddyurappajpg-1.jpghttp://bp9news.com/wp-content/uploads/2018/05/Yeddyurappajpg-1-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು : ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ  ಪ್ರತಿಭಟನೆ ಮಾಡುತ್ತಿದ್ದ ಉಭಯ ಪಕ್ಷಗಳ ಸದಸ್ಯರು ಮತ್ತೆ ರೆಸಾರ್ಟ್​ನತ್ತ  ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ. ಶಿವಕುಮಾರ್​  ಮುಂದಿನ  ನಡೆ ಬಗ್ಗೆ ಏನನ್ನೂ ಹೇಳಲ್ಲ, ನಮಗೆ ಯಾವುದೇ  ಭದ್ರತೆ ಬೇಕಿಲ್ಲ. ನಮ್ಮ ಕಾಂಗ್ರೆಸ್​ ಶಾಸಕರು ನಮ್ಮೊಂದಿಗೇ ಇರುತ್ತಾರೆ, ಸದ್ಯ  ಮತ್ತೆ  ನಾವು ರೆಸಾರ್ಟ್​ಗೆ  ಹೋಗುತ್ತಿದ್ದೇವೆ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಸಿದ್ದ ಜೆಡಿಎಸ್​ ಕಾರ್ಯಕರ್ತಶ್ರೀನಿವಾಸ್​ ಎಂಬುವವರು ಮುಖ್ಯಮಂತ್ರಿ...Kannada News Portal