agricultureನ್ಯೂಯಾರ್ಕ್​: ಅಮೇರಿಕಾದಲ್ಲಿ ಹೊಸಾ ರೀತಿಯ ಬೇಸಾಯ ಪದ್ಧತಿ ಸದ್ದು ಮಾಡುತ್ತಿದೆ. ನಗರೀಕರಣದಿಂದ ಒಳಾಂಗಣ ಬೇಸಾಯ ಪದ್ಧತಿಯ ಬಗ್ಗೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ.

ಇದಕ್ಕೆ ಇತ್ತೀಚೆಗೆ ಒಳಾಂಗಣ ಬೇಸಾಯ ಪದ್ದತಿಯ ಬಗ್ಗೆ ಸಂಶೊಧನೆ ನಡೆದಿದ್ದು ಈ ಸಂಶೋಧನೆಯಲ್ಲಿ ಎಲ್​ಇಡಿ ಲೈಟ್​ಗಳನ್ನು ಬಳಸಿಕೊಂಡು ಕಡಿಮೆ ನೀರಿನಲ್ಲಿ ಬೇಸಾಯ ಪದ್ಧತಿಯು ಯಶಸ್ವಿಯಾಗಿದೆ. ಸಂಶೋಧಕರ ಪ್ರಕಾರ ಮುಂದಿನ ಪೀಳಿಗೆಗೆ ಈ ಬೇಸಾಯ ಪದ್ಧತಿಯೂ ಅನಿವಾರ್ಯವಾಗುತ್ತದೆ. ಏಕೆಂದರೆ ಬೆಳೆಯುತ್ತಿರುವ ನಗರೀಕರಣ ಮತ್ತು ತಾಂತ್ರಿಕರಣದಿಂದಾಗಿ ಈ ಬೇಸಾಯ ಪದ್ದತಿಅತಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿದೆ ಎಂದು ಸಂಶೋಧಕರ ಅಭಿಪ್ರಾಯವಾಗಿದೆ.

agriculture

ಈ ಬೇಸಾಯ ಪದ್ಧತಿಯನ್ನು ಚಿಕ್ಕ ಚಿಕ್ಕ ಮನೆಯಲ್ಲಿಯೂ ಮಾಡಬಹುದಾಗಿರುವುದರಿಂದ ಕೆಲವು ಕಂಪೆನಿಗಳು ಜನರಿಗೆ ಈ ಬೇಸಾಯ ಪದ್ಧತಿಯಲ್ಲಿ ಹಣ್ಣು, ತರಕಾರಿ, ಮತ್ತಿತರ ಬೆಳೆಗಳನ್ನು ಬೆಳೆದುಕೊಟ್ಟರೆ ಅಂತಹವರಿಗೆ ಸಹಾಯ ಮಾಡಲು ಮುಂದೆ ಬಂದಿವೆ.

ಈ ಹೊಳಾಂಗಣ ಬೇಸಾಯ ಪದ್ಧತಿಯು ಅತಿ ಕಡಿಮೆ ಶ್ರಮ ಮತ್ತು ನೀರನ್ನು ಬೇಡುವುದರಿಂದ ಹೆಚ್ಚು ಜನಮನ್ನಣೆಗೆ ಕಾರಣವಾಗಿದ್ದು ಕೆಲವು ಉತ್ಸಾಹಿ ಯುವಕರು ಈ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಇನ್ನು ಮುಂದೆ ನಾವು ತಿನ್ನುವ ತರಕಾರಿ ಹಣ್ಣುಗಳು ಫ್ಯಾಕ್ಟರಿಯಲ್ಲಿ ತಯಾರಾದಂತೆ ಹೊಳಾಂಗಣ ಬೇಸಾಯ ಪದ್ಧತಿಯಲ್ಲಿ ಲಭಿಸಲಿದೆ.

Please follow and like us:
0
http://bp9news.com/wp-content/uploads/2018/04/5760.jpghttp://bp9news.com/wp-content/uploads/2018/04/5760-150x150.jpgBP9 News Bureauಕೃಷಿನ್ಯೂಯಾರ್ಕ್​: ಅಮೇರಿಕಾದಲ್ಲಿ ಹೊಸಾ ರೀತಿಯ ಬೇಸಾಯ ಪದ್ಧತಿ ಸದ್ದು ಮಾಡುತ್ತಿದೆ. ನಗರೀಕರಣದಿಂದ ಒಳಾಂಗಣ ಬೇಸಾಯ ಪದ್ಧತಿಯ ಬಗ್ಗೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ಇತ್ತೀಚೆಗೆ ಒಳಾಂಗಣ ಬೇಸಾಯ ಪದ್ದತಿಯ ಬಗ್ಗೆ ಸಂಶೊಧನೆ ನಡೆದಿದ್ದು ಈ ಸಂಶೋಧನೆಯಲ್ಲಿ ಎಲ್​ಇಡಿ ಲೈಟ್​ಗಳನ್ನು ಬಳಸಿಕೊಂಡು ಕಡಿಮೆ ನೀರಿನಲ್ಲಿ ಬೇಸಾಯ ಪದ್ಧತಿಯು ಯಶಸ್ವಿಯಾಗಿದೆ. ಸಂಶೋಧಕರ ಪ್ರಕಾರ ಮುಂದಿನ ಪೀಳಿಗೆಗೆ ಈ ಬೇಸಾಯ ಪದ್ಧತಿಯೂ ಅನಿವಾರ್ಯವಾಗುತ್ತದೆ. ಏಕೆಂದರೆ ಬೆಳೆಯುತ್ತಿರುವ ನಗರೀಕರಣ ಮತ್ತು ತಾಂತ್ರಿಕರಣದಿಂದಾಗಿ ಈ ಬೇಸಾಯ...Kannada News Portal