ಬೆಂಗಳೂರು : ಕೇರಳ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ನಿಫಾ ಸೋಂಕು ಕರ್ನಾಟಕಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ ಪಿ ಎಲ್ ನಟರಾಜ್ ಬಿಪಿ9 ನ್ಯೂಸ್ಗೆ ತಿಳಿಸಿದ್ದಾರೆ.

ಇನ್ನೂ ಈ ಸೋಂಕಿನ ಬಗ್ಗೆ ಕೇಂದ್ರ ಸರ್ಕಾರದ ಸೆಂಟ್ರಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ವಿಭಾಗದಿಂದ ಯಾವುದೇ ಸೂಚನೆಗಳು ಬಂದಿಲ್ಲ. ಆದರೂ ನೆರೆ ರಾಜ್ಯ ಕೇರಳದಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳ ಗಡಿ ಪ್ರದೇಶದಲ್ಲಿ ಇರುವ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ಕೊಡಗಿನ ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರವಹಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಅತ್ತ ಕೇರಳಾದಲ್ಲಿ ನಿಫಾ ಸೋಂಕಿನಿಂದ ಮೃತಪಟ್ಟಿರುವುದನ್ನು ಪುಣೆಯ ವೈರಾಲಜಿ ಸಂಸ್ಥೆಯುವರದಿ ನೀಡಿದ್ದು, ಇಲ್ಲಿಯ ವರೆವಿಗೆ ಈ ಸೋಂಕಿಗೆ 11 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Please follow and like us:
0
http://bp9news.com/wp-content/uploads/2018/05/Karnataka-State-Health-and-Family-Welfare-Department.gifhttp://bp9news.com/wp-content/uploads/2018/05/Karnataka-State-Health-and-Family-Welfare-Department-150x150.gifPolitical Bureauಕೊಡಗುಚಾಮರಾಜನಗರಪ್ರಮುಖಬೆಂಗಳೂರುಮಂಡ್ಯಮೈಸೂರುbangalore,kodagu,mandya,mysore,Nifa Infection: In Chamarajanagarಬೆಂಗಳೂರು : ಕೇರಳ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ನಿಫಾ ಸೋಂಕು ಕರ್ನಾಟಕಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ ಪಿ ಎಲ್ ನಟರಾಜ್ ಬಿಪಿ9 ನ್ಯೂಸ್ಗೆ ತಿಳಿಸಿದ್ದಾರೆ. ಇನ್ನೂ ಈ ಸೋಂಕಿನ ಬಗ್ಗೆ ಕೇಂದ್ರ ಸರ್ಕಾರದ ಸೆಂಟ್ರಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ವಿಭಾಗದಿಂದ ಯಾವುದೇ ಸೂಚನೆಗಳು ಬಂದಿಲ್ಲ. ಆದರೂ ನೆರೆ ರಾಜ್ಯ...Kannada News Portal