ಬೆಂಗಳೂರು :  ಐಟಿ ದಾಳಿ ಪ್ರಕರಣದ ನೋಟೀಸ್‍ಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ನನಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಎದುರಿಸುವ ಧೈರ್ಯ ನನಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನು ಏನನ್ನೂ ಹೇಳುವುದಿಲ್ಲ. ಇಲ್ಲದಿದ್ದರೆ ನಾನೇನು ಎಂಬುದನ್ನು ತೋರಿಸುತ್ತಿದ್ದೆ. ಐಟಿ ಕೇಸ್‍ನಲ್ಲಿ ನನ್ನನ್ನು ದುರುದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ಐಟಿ ದಾಳಿ ಪ್ರಕರಣದಲ್ಲಿ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಆದರೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿದೆ. ವಿಚಾರಣೆ ಎದುರಿಸುತ್ತೇವೆ, ದೇಶದ ಕಾನೂನಿಗೆ ಗೌರವ ಕೊಡುತ್ತೇವೆ ಎಂದು ಅವರು ಹೇಳಿದರು.

ಐಟಿ ಪ್ರಕರಣದಲ್ಲಿ ನನಗಷ್ಟೇ ಅಲ್ಲ, ನನ್ನ ಸಂಬಂಧಿಕರಿಗೆ, ಆಪ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಯಾರು ಮಾಡಿಸುತ್ತಿದ್ದಾರೆ, ಅವರ ಹಿನ್ನೆಲೆ ಏನೆಂದು ನನಗೆ ಗೊತ್ತು.  ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ, ಕಾಲ ಬಂದಾಗ ಬಹಿರಂಗ ಪಡಿಸುತ್ತೇನೆ…ಎಂದು ಹೇಳಿದರು. ಅಲ್ದೇ ಈ ರೀತಿ ಐಟಿ ರೇಡ್​ಗಳಿಂದ ಡಿ.ಕೆ.ಶಿವಕುಮಾರ್ ಧೃತಿಗೆಡುವುದಿಲ್ಲ. ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

ಏನೋ ಪ್ರಮಾದವಾಗಿದೆ ಎಂದು ಮಾಧ್ಯಮಗಳು ನೀವು ಬಿಂಬಿಸುತ್ತೀರ. ನಿಮಗೆ ಹೇಗೆ ಸಂತೋಷವಾಗುತ್ತದೋ ಹಾಗೆ ಮಾಡಿ. ಅವರಿಗೆ ಹೇಗೆ ಸಂತೋಷವಾಗುತ್ತದೆಯೋ ಹಾಗೆ ಮಾಡಲಿ. ಕೇಸು ಕೋರ್ಟ್​ನಲ್ಲಿ ಇಲ್ಲ ಅಂದಿದ್ರೇ ನಾನೇನು ಅಂಥ ತೋರಿಸ್ತಾ ಇದ್ದೆ ಎಂದು ಸಚಿವ ಡಿಕೆಶಿ ಗುಡುಗಿದ್ದಾರೆ.

Please follow and like us:
0
http://bp9news.com/wp-content/uploads/2018/06/627179.jpghttp://bp9news.com/wp-content/uploads/2018/06/627179-150x150.jpgPolitical Bureauಪ್ರಮುಖರಾಜಕೀಯNo matter what's going on in the case court! : DKಬೆಂಗಳೂರು :  ಐಟಿ ದಾಳಿ ಪ್ರಕರಣದ ನೋಟೀಸ್‍ಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ನನಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಎದುರಿಸುವ ಧೈರ್ಯ ನನಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನು ಏನನ್ನೂ ಹೇಳುವುದಿಲ್ಲ. ಇಲ್ಲದಿದ್ದರೆ ನಾನೇನು ಎಂಬುದನ್ನು ತೋರಿಸುತ್ತಿದ್ದೆ. ಐಟಿ ಕೇಸ್‍ನಲ್ಲಿ ನನ್ನನ್ನು ದುರುದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ಐಟಿ ದಾಳಿ ಪ್ರಕರಣದಲ್ಲಿ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಆದರೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿದೆ. ವಿಚಾರಣೆ...Kannada News Portal