ಸ್ಯಾಂಡಲ್​ವುಡ್​ನಲ್ಲಿ ಕಾಮಿಡಿ ಸ್ಟಾರ್​ ಸಾಧು ಕೋಕಿಲ ಇತ್ತೀಚೆಗೆ ಕನ್ನಡದ ಕೋಗಿಲೆ ಎಂಬ ರಿಯಾಲಿಟಿ ಶೋವೊಂದರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಸಾಧು ನಟನಾಗಿ,  ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಚಂದನವನದಲ್ಲಿ ನೆಲೆ ಕಂಡು ಕೊಂಡ ನಟ. ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಾಧು ಕೋಕಿಲ ಹಾಸ್ಯ ಚಕ್ರವರ್ತಿ ಎಂದೇ ಹೆಸರು ಪಡೆದಿದ್ದಾರೆ. ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ಸಾಧು ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸಾಧು ಅವರ ರಿಯಲ್​ ನೇಮ್ ಸಹಾಯ ಶೀಲನ್​  ಶಾದ್ರ ಎಂಬುದಾಗಿತ್ತು. ಆ ನಂತರ ಚಿತ್ರರಂಗದಲ್ಲಿ  ರಿಯಲ್​ ಸ್ಟಾರ್​ ಉಪೇಂದ್ರ ನಾಮಕಾರಣ ಮಾಡಿರುವ ಹೆಸರು ಸಾಧು  ಕೋಕಿಲ ಎಂಬುದಾಗಿದೆ. ಅವರೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಹಾಗೇ ನನಗೆ ಇಂಡಸ್ಟ್ರಿಯಲ್ಲಿ ಒಂದು ದೊಡ್ಡ ಮಟ್ಟದ ಹೆಸರು ಬರಲು ಕಾರಣ ಅದು ಉಪ್ಪಿ. ಅವರ ಅವಕಾಶಗಳು, ಅವರ ಗೈಡ್​ನಲ್ಲಿ ಕೆಲಸ ಮಾಡುತ್ತಿದ್ದು  ನಾನು ಈ ಮಟ್ಟಿಗೆ ಬೆಳೆದು ಬಂದಿದ್ದೇನೆ ಎಂದಿದ್ದಾರೆ.

ನಥೇಶ್​-ಮಂಗಳ ದಂಪತಿಯ ಮಗನಾಗಿ ಬೆಳೆದ ಸಾಧು ಅದ್ಭುತ ಗಾಯಕರು   ಕೂಡ  ಹೌದು. ಅವರ ಸಿನಿಮಾ ಕೆರಿಯರ್​ ಆರಂಭವಾಗಿದ್ದೇ ಮ್ಯೂಸಿಯನ್​ ಆಗಿ,  ಸಾಧು ಅವರು ಬೆಂಗಳೂರಿನ ಸೆಂಟ್​ ಜೋಸೆಫ್​ ಹೈ ಸ್ಕೂಲ್​ನಲ್ಲಿ  ವಿದ್ಯಾಭ್ಯಾಸ   ನಡೆಸಿದ್ದಾರೆ. ಚಿತ್ರರಂಗಕ್ಕೆ ಕರೆ ತಂದವರು ರಿಯಲ್​ ಸ್ಟಾರ್​ ಉಪೇಂದ್ರ.ಅ ವರ ಬಗ್ಗೆ ಹೇಳಲು ಯಾವ ಪದಗಳು ಸಿಗುತ್ತಿಲ್ಲ. ಕನ್ನಡ  ಚಲನಚಿತ್ರ ಕಂಡ  ಅತ್ಯದ್ಭುತ ನಟ, ನಿರ್ದೇಶಕ ಅಂದ್ರೆ ಒನ್​ಅಂಡ್​ ಓನ್ಲಿ ಉಪ್ಪಿ ಎನ್ನುತ್ತಾರೆ  ಗುಂಗುರು ಕೂದಲಿನ ನಟ.

ಆರಂಭದಲ್ಲಿ ನನ್ನನ್ನು ನಟನಾಗಿ ಒಪ್ಪಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಗುಂಗುರು ಕೂದಲಿನ, ಎತ್ತರ ಕಡಿಮೆ ಇರುವ, ನಾನು ಸ್ಕ್ರೀನ್​ಗೆ ಒಗ್ಗದ ಪರ್ಸನಾಲಿಟಿ ಎಂದೇ ಭಾವಿಸಿದ್ದರು. ಆದರೆ ನನ್ನ ಪರ್ಫಾರ್ಮೆನ್ಸ್​ನಿಂದ ನಿಜಕ್ಕೂ ಕನ್ನಡಿಗರ ಮನ ಗೆದ್ದಿದ್ದೇನೆ ಎನ್ನುತ್ತಾರೆ.

1993 ರಲ್ಲಿ ಸಾಧು  ಸಲೀನ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಒಬ್ಬ ಮಗ ಇದ್ದಾನೆ. ಆರಂಭದಲ್ಲಿ ಉಪೇಂದ್ರ ಅವರ ನಿರ್ದೇಶನದ ಶ್….​ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಚಲನಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು.  ಸಾಧು ಅವರು ರಕ್ತ ಕಣ್ಣೀರು, ರಾಕ್ಷಸ, ಭಲೇ ಜೋಡಿ ಸಿನಿಮಾಗಳನ್ನು ನಿರ್ದೇಶನ  ಮಾಡಿದ್ದಾರೆ. ಅಲ್ಲದೇ ಸಂಗೀತಗಾರರಾಗಿ  ಮೆಜೆಸ್ಟಿಕ್​,  ರಥಾವರ ,ಮಾಸ್ತಿಗುಡಿ ಅಂತಹ ದೊಡ್ಡ ಸಿನಿಮಾಗಳಲ್ಲಿ  ಕೆಲಸ ಮಾಡಿದ್ದಾರೆ. ಅಲ್ಲದೇ  ಇವರಿಗೆ ಮಿ. ಅಂಡ್​ ಮಿ. ರಾಮಚಾರಿ ಸಿನಮಾದಲ್ಲಿ ಬೆಸ್ಟ್​  ಕಮೇಡಿಯನ್​ ಆಗಿ ಐಐಎಫ್​ಎ  ನಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಂದಹಾಗೇ ಇಂಡಸ್ಟ್ರಿಯಲ್ಲಿ ಸಾಧು ಒಂದು ದಿನದ ಸಂಪಾದನೆ ಐದರಿಂದ ಹತ್ತು ಲಕ್ಷ ಗಳಿಕೆ ಎನ್ನಲಾಗಿದೆ.. ಅಲ್ಲದೇ ಇವರಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸ್ವಂತ ಮನೆ ಇದ್ದು ಅದರ  ಬೆಲೆ ಐದು ಕೋಟಿ ಎಂದು ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ಹಾಸ್ಯ ಕಲಾವಿದರಲ್ಲಿ ಸಾಧು ಶ್ರೀಮಂತ ಕಲಾವಿದ ಎಂಬ ಹೆಸರು ಮಾತ್ರ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ.

Please follow and like us:
0
http://bp9news.com/wp-content/uploads/2018/07/Sadhu_Kokila.jpghttp://bp9news.com/wp-content/uploads/2018/07/Sadhu_Kokila-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನಲ್ಲಿ ಕಾಮಿಡಿ ಸ್ಟಾರ್​ ಸಾಧು ಕೋಕಿಲ ಇತ್ತೀಚೆಗೆ ಕನ್ನಡದ ಕೋಗಿಲೆ ಎಂಬ ರಿಯಾಲಿಟಿ ಶೋವೊಂದರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಸಾಧು ನಟನಾಗಿ,  ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಚಂದನವನದಲ್ಲಿ ನೆಲೆ ಕಂಡು ಕೊಂಡ ನಟ. ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಾಧು ಕೋಕಿಲ ಹಾಸ್ಯ ಚಕ್ರವರ್ತಿ ಎಂದೇ ಹೆಸರು ಪಡೆದಿದ್ದಾರೆ. ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ಸಾಧು ಬಗ್ಗೆ ನಿಮಗೆಷ್ಟು ಗೊತ್ತು...? var domain = (window.location !=...Kannada News Portal