ಅಂದು ಕಪ್ಪು  ಬಿಳುಪಿನ ಪುಟ್ಟಣ್ಣ ಕಣಗಾಲ್​ ಅವರ ”ನಾಗರಹಾವು” ಸಿನಿಮಾ ಒಂದು ಮೈಲಿಗಲ್ಲನ್ನೇ ಸಾಧಿಸಿತು. ವಿಷ್ಣುವರ್ಧನ್​ ಅವರ ಅಭಿನಯಕ್ಕೆ  ತಲೆ ಬಾಗಿದ ಅಭಿಮಾನಿಗಳು, ಪುಟ್ಟಣ್ಣ ಕಣಗಾಲ್ ಅವರನ್ನು ಮೆಚ್ಚಿ ಕೊಂಡಾಡಿದ್ದರು.  ಅಂದಿಗೆ ದೊಡ್ಡ ಮಟ್ಟ ಗೆಲುವುನ್ನ  ಸಾಧಿಸಿದ ಹೆಮ್ಮೆಯನ್ನು ಪಡೆದುಕೊಂಡಿತ್ತು.  ಇಂದಿಗೂ ಮರೆಯಲಾಗದ, ಸೋಲದ ಸಿನಿಮಾ ಅಂದ್ರೆ ಅದೂ ನಾಗರಹಾವು.

ಸದ್ಯ ಮತ್ತೆ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಬರುತ್ತಿದೆ ನಾಗರಹಾವು. ಆದರೆ ಈ ಬಾರಿ ಕಲರ್​ಫುಲ್​ ಲುಕ್​ನಲ್ಲಿ ಡಿಜಿಟಲ್​​  ಆಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ  ನಾಗರಹಾವು ಟ್ರೈಲರ್​ ಬಿಡುಗಡೆಯಾಗಿದ್ದು ಅನೇಕ ಹಿರಿಯ ಕಲಾವಿದರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ನಾಗರಾಹವು ಸಿನಿಮಾ ರೀ ರಿಲೀಸ್​ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಚಂದನವನಕ್ಕೆ ಇಬ್ಬರು ದೊಡ್ಡ ನಟರನ್ನು ಕೊಟ್ಟ ನಾಗರಹಾವು ಎಂದೆಂದಿಗೂ ಎವರ್ ಗ್ರೀನ್ ಚಿತ್ರ. ಈ ಬಾರಿ ಬೆಳ್ಳಿತೆರೆ ಮೇಲೆ ಹೈ ಗ್ರೇಡ್ ಕಲರ್ ಫುಲ್ ರಾಮಾಚಾರಿಯನ್ನು ಎಲ್ಲರೂ ನೋಡಬಹುದಾಗಿದೆ.

7.1 ಡಿಜಿಟಲ್​ ನಾಗರಹಾವನ್ನ ರೆಡಿ ಮಾಡಿದ್ದು, ಮ್ಯೂಸಿಕ್‍ನ ರಿ-ಕ್ರಿಯೇಟ್ ಮಾಡಲಾಗಿದೆ. ಡಿಜಿಟಲ್ ಸೌಂಡಿಂಗ್ ಎಫೆಕ್ಟ್ ನಲ್ಲಿ ಬರುತ್ತದೆ.ಈ ಗಾಗಲೇ ರಿಲೀಸ್ ಆಗಿರುವ ನಾಗರಹಾವು ಟೀಸರ್ ಭಾರೀ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲ್‍ಚಲ್ ಎಬ್ಬಿಸಿದೆ.

ಡಿಜಿಟಲ್​ ತಂತ್ರಜ್ಞಾನದಲ್ಲಿ ಮೂಡಿ ಬರುತ್ತಿರುವ ನಾಗರಹಾವು ಮೂಲ  ಪ್ರತಿಗೆ ಯಾವುದೇ ಧಕ್ಕೆಯಾಗದಂತೆ ಸರಿ ಹೊಂದಿಸಿದ್ದು,

ಇನ್ನೂ ವಿಶೇಷ ಅಂದ್ರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಮೂಡಿ ಬರುತ್ತಿರುವ ನಾಗರಹಾವು ಸಿನಿಮಾ ನೋಡೋದಕ್ಕೆ ಸಿನಿಪ್ರಿಯರು ಮಾತ್ರವಲ್ಲ ಸಿನಿಮಾ ಮಂದಿ ಕೂಡ ಕಾದು ಕುಳಿತಿದ್ದಾರೆ. ಹೊಸ ರಾಮಾಚಾರಿಯ ಬಗ್ಗೆ ಮಾತನಾಡೋದಕ್ಕೆ ಸ್ಯಾಂಡಲ್‍ವುಡ್‍ನ ಹಲವು ಗಣ್ಯರು ಆಗಮಿಸಿದ್ರು.

ಭಾರತಿ ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಅಂಬರೀಷ್, ಲೀಲಾವತಿ, ಜಯಂತಿ,  ಲೋಕನಾಥ್​, ಶಿವರಾಂ, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹೊಸ ನಾಗರಹಾವಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಗಳು ಆಗಿವೆ. ಜುಲೈ 20 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.

Please follow and like us:
0
http://bp9news.com/wp-content/uploads/2018/07/NAGARAHAAVU-TEASER-Dr.Vishnuvardhana-S.R.Puttanna-Kanagal-Eshwari-Productions-1024x576.jpeghttp://bp9news.com/wp-content/uploads/2018/07/NAGARAHAAVU-TEASER-Dr.Vishnuvardhana-S.R.Puttanna-Kanagal-Eshwari-Productions-150x150.jpegBP9 Bureauಸಿನಿಮಾಅಂದು ಕಪ್ಪು  ಬಿಳುಪಿನ ಪುಟ್ಟಣ್ಣ ಕಣಗಾಲ್​ ಅವರ ''ನಾಗರಹಾವು'' ಸಿನಿಮಾ ಒಂದು ಮೈಲಿಗಲ್ಲನ್ನೇ ಸಾಧಿಸಿತು. ವಿಷ್ಣುವರ್ಧನ್​ ಅವರ ಅಭಿನಯಕ್ಕೆ  ತಲೆ ಬಾಗಿದ ಅಭಿಮಾನಿಗಳು, ಪುಟ್ಟಣ್ಣ ಕಣಗಾಲ್ ಅವರನ್ನು ಮೆಚ್ಚಿ ಕೊಂಡಾಡಿದ್ದರು.  ಅಂದಿಗೆ ದೊಡ್ಡ ಮಟ್ಟ ಗೆಲುವುನ್ನ  ಸಾಧಿಸಿದ ಹೆಮ್ಮೆಯನ್ನು ಪಡೆದುಕೊಂಡಿತ್ತು.  ಇಂದಿಗೂ ಮರೆಯಲಾಗದ, ಸೋಲದ ಸಿನಿಮಾ ಅಂದ್ರೆ ಅದೂ ನಾಗರಹಾವು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal