ಸ್ಯಾಂಡಲ್​ವುಡ್​ನಲ್ಲಿ  ಬಾಕ್ಸ್​ ಆಫೀಸ್​ ಸುಲ್ತಾನರು ಎಂದರೆ ಸದ್ಯ ಸುದೀಪ್​ ಮತ್ತು ದರ್ಶನ್​ ಮೊದಲ ಸಾಲಲ್ಲಿ ನಿಲ್ತಾರೆ.ಈ ಇಬ್ಬರು ಹೆಚ್ಚು –ಕಡಿಮೆ ಒಂದೇ ಕಾಲಘಟ್ಟದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ವವರು.  ಕ್ಲಾಸ್​-ಮಾಸ್​ ಗೆ ಇಬ್ಬರೂ ಸೈ ಎಂದೇ ಕರೆಸಿಕೊಳ್ಳುತ್ತಿದ್ದ ಚಂದನವನದ  ಬ್ರೈಟಿಂಗ್​ ಸ್ಟಾರ್​ಗಳು. ಇಂಡಸ್ಟ್ರಿಯಲ್ಲಿ ಇವರಿಬ್ಬರ ಜುಗಲ್​( ಸ್ನೇಹ) ವಾಹ್ವ್​ ಎನಿಸುವಷ್ಟು ಚೆನ್ನಾಗಿತ್ತು. ವೇದಿಕೆ  ಮೇಲೆ ಇವರಿಬ್ಬರು ಬಂದು ನಿಂತರೇ, ಅದು ವಿಷ್ಣು-ಅಂಬಿ ನೋಡಿದಂತೇ ಭಾಸವಾಗುತ್ತಿತ್ತು. ಆದರೆ ಕೆಲ ಚಿತ್ರರಂಗದ ಬೆಳವಣಿಗೆಗಳಿಂದ ಇಬ್ಬರ ಸ್ನೇಹದಲ್ಲಿ ಅಪಸ್ವರ ಕೇಳಿ ಬಂತು. ಆ ನಂತರ ಸುದೀಪ್​ ಆಗಲೀ, ದಚ್ಚು ಆಗಲೀ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆಯೇ ಇಲ್ಲ.

ಈ ಬಗ್ಗೆ ಕೆಲ ಟಿವಿ ಕಾರ್ಯಕ್ರಮ ಅಥವಾ ಸಂದರ್ಶನಗಳಲ್ಲಿ ದಚ್ಚುಆಗಲೀ, ಕಿಚ್ಚನಾಗಲೀ ಕೇಳಿದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.  ಇಬ್ಬರ ಸ್ನೇಹ ಬ್ರೇಕ್​ಅಪ್​ ಆಗಿದೆ ಎಂಬುದು ಮಾತ್ರ ಇಡೀ ಗಾಂಧಿನಗರಕ್ಕೆ ಗೊತ್ತಿತ್ತು. ಇದಕ್ಕೆ ನಿಖರ ಕಾರಣ ಮಾತ್ರ  ಯಾರಿಗೂ ಗೊತ್ತೇ ಇರಲಿಲ್ಲ. ಆದರೆ ದತ್ತ ಮತ್ತು ದೀಪು ಅಭಿಮಾನಿಗಳಲ್ಲಿ ಮಾತ್ರ ಈ ಬಗ್ಗೆ   ದೊಡ್ಡ ಬೇಸರವೇ ಇತ್ತು. ಮತ್ತೆ ಇವರಿಬ್ಬರೂ ಒಂದಾಗಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಅಭಿಯಾನವನ್ನೇ  ಸೃಷ್ಟಿ ಮಾಡಿದ್ದರು.

ಆ ನಂತರ ಸುದೀಪ್​ ಮತ್ತು ದಚ್ಚು ಪ್ರತ್ಯೇಕವಾಗಿ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಅವಕಾಶ ಸಿಕ್ಕರೆ ನಾವಿಬ್ಬರೂ ಒಟ್ಟಿಗೆ  ತೆರೆ ಹಂಚಿಕೊಳ್ಳುತ್ತೇವೆ ಎಂದಿದ್ದರು. ನಮ್ಮಿಬ್ಬರ ನಡುವೆ ಏನೋ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಅದೇನು ದೊಡ್ಡ ವಿಚಾರವಲ್ಲ, ಇಬ್ಬರು ಒಬ್ಬರನೊಬ್ಬರು ಪರಸ್ಪರ ಭೇಟಿಯಾಗಲೂ ಆಗುತ್ತಿರಲಿಲ್ಲ ಅಷ್ಟೆ, ಅದು  ಸಿನಿಮಾ ಬ್ಯುಸಿಯಿಂದಾಗಿ ಎಂದಷ್ಟೇ ಹೇಳಿ ಸುಮ್ಮನಾಗಿಬಿಟ್ಟಿದ್ರು. ಆದರೆ ಅಭಿಮಾನಿಗಳಿಗೆ ಇದ್ದಕಿದ್ದಾಗೇ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಸದ್ಯ ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. ಅಭಿಮಾನಿಗಳಿಗೆ ಈ ವಿಚಾರ ತಿಳಿಯುತ್ತಿದ್ದಂತೇ  ದಚ್ಚು-ಕಿಚ್ಚ  ಒಟ್ಟಿಗೆ ಎಂಬ ಸಂದೇಶಗಳನ್ನು ಕಳುಹಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ದಚ್ಚು-ದೀಪು ಎಂಬ ಹೆಸರಿನ ಮೂಲಕ ಸಿನಿಮಾ ಸೆಟ್ಟೇರುತ್ತಿದ್ಯಂತೆ.  ಅಲ್ಲದೇ ಈ ಸಿನಿಮಾ  ಟೈಟಲ್​  ಕೇಳಿದ್ರೆ  ನಿಮಗೆ ಆಶ್ಚರ್ಯ ಆಗಬಹುದೇನೋ…ಅಭಿಮಾನಿಗಳೇ ನೀವು ಅನ್ಕೊಂಡಗಲ್ಲ ನಾವು ಎಂಬ ಅಡಿ ಶೀರ್ಷಿಕೆಯಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರಂತೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸ್ಯಾಂಡಲ್​ವುಡ್​ನ ಗೆಲ್ಲೋ ಕುದುರೆಗಳ ಸವಾರಿ ಮಾಡಿಸಲಾಗುತ್ತಿದೆ ಈ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್​ಗಳ ನಡುವಿನ ಸಂಬಂಧದ ಬಗ್ಗೆ ಕಥೆ ಹೇಳೋಕೆ ಹೊರಟಿದ್ಯಂತೆ.

ಒಂದು ಕಾಲದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಊಟ ಮಾಡುತ್ತಿದ್ದವರು. ಒಬ್ಬರ ಸಿನಿಮಾಗೆ ಮತ್ತೊಬ್ಬರು ಶಹಬ್ಬಾಸ್ ಹೇಳುತ್ತಿದ್ದವರು. ಅಷ್ಟೇ ಯಾಕೆ ತಮ್ಮ ಸ್ನೇಹದಿಂದ ಸ್ಯಾಂಡಲ್‍ವುಡ್‍ನ ಭವಿಷ್ಯದ ವಿಷ್ಣು-ಅಂಬಿಯಂತಹ ಕುಚುಕು ಗೆಳೆಯರೂ ಅಂತಲೇ ಕರೆಸಿಕೊಂಡ ಸ್ಟಾರ್ ನಟರಾದ ದರ್ಶನ್-ಸುದೀಪ್ ಸಂಬಂಧ ಹಳಸಿ ಬಹಳ ದಿನಗಳೇ ಆಗಿದೆ. ಆಗಾಗ ಅಭಿಮಾನಿಗಳ ತಿಕ್ಕಾಟವೂ ನಡೀತಾನೇ ಇರುತ್ತೆ. ಈಗ ಅಂತಹ ಅಭಿಮಾನಿಗಳು ಸಿನಿಮಾವನ್ನೇ ಮಾಡೋಕೆ ಹೊರಟಿದ್ದಾರೆ.

ಸದ್ಯ ದಚ್ಚು-ದೀಪು ಹೆಸರಿನಲ್ಲಿ  ಪೋಸ್ಟರ್​ವೊಂದು ಬಿಡುಗಡೆಯಾಗಿದೆ. ಇದರಲ್ಲಿ ದರ್ಶನ್​ ಫೋಟೋ ತುಂಬಾ ಕ್ಲಾರಿಟಿಯಿಂದ ಕೂಡಿದ್ದು, ಸುದೀಪ್​ ಇಮೇಜ್​ಅಷ್ಟು ಚೆನ್ನಾಗಿ ಮೂಡಿ ಬಂದಿಲ್ಲ. ಮತ್ತೊಮ್ಮೆ  ಪೋಸ್ಟರ್​ ಮೂಲಕ ಅಭಿಮಾನಿಗಳಲ್ಲಿ ತಿಕ್ಕಾಟ ಶುರುವಾಗಲಿದೆ ಎಂಬುದು ಲೆಕ್ಕಾಚಾರ.

ಏನೇ ಇರಲೀ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಹೆಸರು ಕೇಳಿ ಬಂತು. ಆದರೆ ಆ ಬಗ್ಗೆ ಬೆಳವಣಿಗೆ ಆಗಿರಲಿಲ್ಲ. ಈ ದಚ್ಚು ದೀಪು ಸಿನಿಮಾ ಯಾರು ನಿರ್ದೇಶನ ಮಾಡುತ್ತಿದ್ದಾರೆ, ಇದರ ಕಥೆ ಏನು, ಯಾರೆಲ್ಲಾ ನಟಿಸ್ತಾ ಇದ್ದಾರೆ ಎಂಬುದು ಮಾತ್ರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  ಬಚ್ಚಿಟ್ಟ  ಸತ್ಯ ಹೊರ ಬರಲೇಬೇಕು. ಅಲ್ಲವೇ ಸದ್ಯ ಪೋಸ್ಟರ್​ವೊಂದರಲ್ಲಿ ಕಾಣಿಸಿಕೊಂಡಿರುವ ಇವರಿಬ್ಬ ಸ್ಟಾರ್​ಗಳ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Please follow and like us:
0
http://bp9news.com/wp-content/uploads/2018/07/kichasudeep-darshan.jpghttp://bp9news.com/wp-content/uploads/2018/07/kichasudeep-darshan-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನಲ್ಲಿ  ಬಾಕ್ಸ್​ ಆಫೀಸ್​ ಸುಲ್ತಾನರು ಎಂದರೆ ಸದ್ಯ ಸುದೀಪ್​ ಮತ್ತು ದರ್ಶನ್​ ಮೊದಲ ಸಾಲಲ್ಲಿ ನಿಲ್ತಾರೆ.ಈ ಇಬ್ಬರು ಹೆಚ್ಚು –ಕಡಿಮೆ ಒಂದೇ ಕಾಲಘಟ್ಟದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ವವರು.  ಕ್ಲಾಸ್​-ಮಾಸ್​ ಗೆ ಇಬ್ಬರೂ ಸೈ ಎಂದೇ ಕರೆಸಿಕೊಳ್ಳುತ್ತಿದ್ದ ಚಂದನವನದ  ಬ್ರೈಟಿಂಗ್​ ಸ್ಟಾರ್​ಗಳು. ಇಂಡಸ್ಟ್ರಿಯಲ್ಲಿ ಇವರಿಬ್ಬರ ಜುಗಲ್​( ಸ್ನೇಹ) ವಾಹ್ವ್​ ಎನಿಸುವಷ್ಟು ಚೆನ್ನಾಗಿತ್ತು. ವೇದಿಕೆ  ಮೇಲೆ ಇವರಿಬ್ಬರು ಬಂದು ನಿಂತರೇ, ಅದು ವಿಷ್ಣು-ಅಂಬಿ ನೋಡಿದಂತೇ ಭಾಸವಾಗುತ್ತಿತ್ತು. ಆದರೆ ಕೆಲ ಚಿತ್ರರಂಗದ...Kannada News Portal