ಸುಳ್ಯ : ಸುಳ್ಯ ಪೇಟೆಯ ಬಸ್ ನಿಲ್ದಾಣದ ಬಳಿ ಅಲೆಮಾರಿ ಮಕ್ಕಳು ಚರಂಡಿ ನೀರು ಕುಡಿದು ಹೊಟ್ಟೆ ತುಂಬಿಸುವ ಚಿತ್ರಣವೊಂದು ಹವ್ಯಾಸಿ ಪೋಟೋಗ್ರಾಫರ್ ಕ್ಲಿಕ್ಕಿಸಿದ್ದಾರೆ. ನೋಡಲು ಚೆನ್ನಾಗಿದ್ರು, ಆಳವಾಗಿ ನೋಡಿದಾಗ ಮನಸ್ಸಲ್ಲಿ ಎಷ್ಟೋ ಪ್ರಶ್ನೆಗಳು ಮೂಡುವುದು ಸಹಜ .ಹಾಗಾದರೆ ಅದು ಏನಿರಬಹುದು ಎಂಬ ಪ್ರಶ್ನೆಗಳು ಕಾಡುತ್ತೆ!! ಅಲ್ಲವೇ…ಬನ್ನಿ ಕಥೆ ಹೇಳುತ್ತಿವೆ

ಬಡವ, ಮಧ್ಯಮ, ಶ್ರೀಮಂತ ಇವರಲ್ಲಿ ಈ ಮಕ್ಕಳು ಯಾವುದಕ್ಕೆ ಸೇರುತ್ತಾರೆ ಅಂತಾ? ಯಾಕೆಂದರೆ ಬಡವರು ತಮ್ಮ ಮಕ್ಕಳನ್ನು ಸೋರುವ ಮನೆ ಇದ್ರು ತಮ್ಮ ಮಕ್ಕಳಿಗೆ ಬೆಚ್ಚಗೆ ಮಲಗಲು ಹಾಸಿಗೆ ಇಲ್ಲಂದ್ರು ಹಳೆಯ ಬಟ್ಟೆಯನ್ನು ಹಾಸಿಗೆ ತರ ಮಾಡಿ ಸುಖ ನಿದ್ರೆ ನೀಡುತ್ತಾರೆ.

ಮಧ್ಯಮ ವರ್ಗದವರು ಸ್ವಲ್ಪ ನೆಲದಲ್ಲಿ ಮಲಗಿದ್ರೆ ಕೆಮ್ಮು ಅದೀತು ಎನ್ನುವ ಎಚ್ಚರಿಕೆಯಿಂದ ಸ್ವಲ್ಪ ಹಣ ಕೊಟ್ಟು ಒಳ್ಳೆಯ ಹಾಸಿಗೆ ತೆಗೆದುಕೊಳ್ಳುತ್ತಾರೆ, ಶ್ರೀಮಂತನದ್ದು ಹೇಳೋದೇ ಬೇಡ.ಅದ್ರೆ ಈ ಮಕ್ಕಳು  ನಡು ರಸ್ತೆ ದಾಟಿ ಬಲೂನ್ ಮಾರುತ್ತಾರೆ, ಪೋಟೋದಲ್ಲಿ ಕಾಣುವ ಚಡ್ಡಿ ಹಾಕದ ಪುಟ್ಟ ಮಗು ದಾಹ ನೀಗಿಸಲು ಚರಂಡಿ ನೀರು ಕುಡಿದು ಅಣ್ಣನದಾರಿಗಾಗಿ  ಕಾಯುತ್ತಾನೆ. ಅದ್ರೆ ನಾವು ನಮ್ಮ ಚಡ್ಡಿನಾ ನಾವೇ ಹಾಕೋ ಟೈಮ್ ಬಂದ್ರು ಬೇರೆಯವರ ಸಹಾಯಕ್ಕೆ ಕಾಯುತ್ತೇವೆ, ಅಷ್ಟಕ್ಕೂ ಈ ಮಕ್ಕಳಿಗೆ ಬಲೂನ್ ಮಾರಿ ಅದರಲ್ಲಿ ಬರೋ ಹಣದಿಂದ ತಮ್ಮ ಹೊಟ್ಟೆ ತುಂಬಿಸಿಕೋಳ್ಳುತ್ತಾರೆ ಅನ್ನೊದು ನಿಜ.

ಆದ್ರೆ ಇಷ್ಟು ವ್ಯವಸ್ಥೆ ಇರುವ ನಮ್ಮ ಸಮಾಜದಲ್ಲಿ ಈ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ನೀಡಿದ್ರೆ ಮುಂದೆ ಒಂದು ದಿನ ಇವರು ಈ ತರ ಕಷ್ಟ ಪಡಬೇಕಿಲ್ಲಾ, ಹಾಗೂ ೨೦ ವರ್ಷದ ಬಳಿಕ ಈ ತರದ ಚಿತ್ರಣವನ್ನು ನಾವು ಕಣ್ಣಾರೆ ನೋಡುವ ಪರಿಸ್ಥಿತಿಯು ಇರಲ್ಲ ಅಂತಾ ಅನ್ನಿಸುತ್ತೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-16-at-2.29.29-PM.jpeghttp://bp9news.com/wp-content/uploads/2018/07/WhatsApp-Image-2018-07-16-at-2.29.29-PM-150x150.jpegBP9 Bureauಟೈಮ್ ಪಾಸ್ಪ್ರಮುಖಸುಳ್ಯ : ಸುಳ್ಯ ಪೇಟೆಯ ಬಸ್ ನಿಲ್ದಾಣದ ಬಳಿ ಅಲೆಮಾರಿ ಮಕ್ಕಳು ಚರಂಡಿ ನೀರು ಕುಡಿದು ಹೊಟ್ಟೆ ತುಂಬಿಸುವ ಚಿತ್ರಣವೊಂದು ಹವ್ಯಾಸಿ ಪೋಟೋಗ್ರಾಫರ್ ಕ್ಲಿಕ್ಕಿಸಿದ್ದಾರೆ. ನೋಡಲು ಚೆನ್ನಾಗಿದ್ರು, ಆಳವಾಗಿ ನೋಡಿದಾಗ ಮನಸ್ಸಲ್ಲಿ ಎಷ್ಟೋ ಪ್ರಶ್ನೆಗಳು ಮೂಡುವುದು ಸಹಜ .ಹಾಗಾದರೆ ಅದು ಏನಿರಬಹುದು ಎಂಬ ಪ್ರಶ್ನೆಗಳು ಕಾಡುತ್ತೆ!! ಅಲ್ಲವೇ...ಬನ್ನಿ ಕಥೆ ಹೇಳುತ್ತಿವೆ ಬಡವ, ಮಧ್ಯಮ, ಶ್ರೀಮಂತ ಇವರಲ್ಲಿ ಈ ಮಕ್ಕಳು ಯಾವುದಕ್ಕೆ ಸೇರುತ್ತಾರೆ ಅಂತಾ? ಯಾಕೆಂದರೆ ಬಡವರು ತಮ್ಮ ಮಕ್ಕಳನ್ನು ಸೋರುವ ಮನೆ...Kannada News Portal