ಬೆಂಗಳೂರು : ಮೊಬೈಲ್ ಮತ್ತು ಇಂಟರ್​ನೆಟ್ ಎಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್ ನಿಂದಲೇ ನಿರ್ವಹಿಸುವಂತೆ ಆಗಿದೆ.

ಈ ಮೊಬೈಲ್ ಮತ್ತು ಇಂಟರ್​ನೆಟ್ ಈಗ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಅದರಲ್ಲೂ  ಸಾವಯವ ಕೃಷಿಯ ಕುರಿತು ಮಾಹಿತಿ ನೀಡುವ ಆ್ಯಪ್ ಬಂದಿದೆ. ಸಾವಯವ ಕೃಷಿಯ ಬೆಳವಣಿಗೆ, ಅದರ ಅವಶ್ಯಕತೆ, ಮೂಲತತ್ವಗಳು, ಸಿದ್ಧಾಂತಗಳು ಸೇರಿದಂತೆ ಹತ್ತಾರು ಮಾಹಿತಿಗಳು ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.ಇತ್ತೀಚೆಗೆ ಸಾವಯವ ಕೃಷಿಯತ್ತ ಸಾಕಷ್ಟು ಯುವಜನರು ವಾಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಆ್ಯಪ್ ಹೆಚ್ಚು ಸಹಕಾರಿ ಆಗಲಿದ್ದು, ಈ ಆ್ಯಪ್ ನ ಹೆಸರು Organic farming ಎಂದು.

ಬಳಸುವ ಕ್ರಮ..?

ಇನ್ನು ಈ ಆ್ಯಪ್ ನ್ನ ನಿಮ್ಮ ಸಾರ್ಟ್ ಮೊಬೈಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ನ ಗೂಗಲ್ ಪ್ಲೇಯಿಂದ Organic farming ಅಂಥ ಟೈಪ್ ಮಾಡಬೇಕು. ನಂತರ ಅದರ ಮೇಲೆ ಕ್ಲಿಕ್​​ ಮಾಡಿ ಇನ್​​ಸ್ಟಾಲ್ ಮಾಡಿಕೊಂಡರೆ ಆಯಿತು.  ಇದನ್ನ ನೀವು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು …

ರಾಸಾಯನಿಕ ಕೃಷಿಯಿಂದ ಬೇಸತ್ತಿದ್ದ ರೈತರು ಈಗ ಸಾವಯವ ಕೃಷಿಯತ್ತ ಮುಖ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಕೃಷಿಯ ಬಗ್ಗೆ ತಿಳಿಸುವ ಈ Organic farming ಆ್ಯಪ್ ಸಾಕಷ್ಟು ಉಪಯೋಗವಾಗುತ್ತೆ. ಇನ್ನು ಸರಿಯಾದ ಮಳೆಯಾಗಿಲ್ಲ ಅಂದ್ರೂ ಕಷ್ಟ, ಹೆಚ್ಚಿಗೆ ಮಳೆ ಬಂದ್ರೂ ಕಷ್ಟ ಎನ್ನುವಂತಾಗಿದೆ. ಹೀಗಾಗಿ ಯಾವ ಸಮಯದಲ್ಲಿ ಯಾವುದನ್ನ ಬಿತ್ತನೆ ಮಾಡಿದ್ರೆ ಒಳಿತು ಎಂಬುದನ್ನು ಇದ್ರಿಂದ ತಿಳಿಯಬಹುದಾಗಿದೆ. ಇನ್ನು ರೈತಿಗೆ ಕೆಲವು ಆ್ಯಪ್ ಗಳು ಬಂದಿದೆ. ಈಗ ಅದೇ ಸಾಲಿಗೆ ಈ Organic farming ಆ್ಯಪ್ ರೈತರಿಗೆ ಮತ್ತು ಕೃಷಿಯಲ್ಲಿ ಆಸಕ್ತಿ ಇರುವವರು ಇದ್ರ ಸದುಪಯೋಗ ಪಡೆದುಕೊಳ್ಳಬಹುದು..

Organic farming ಆ್ಯಪ್ ನಿಂದ ಲಭ್ಯವಾಗುವ ಮಾಹಿತಿ..?

ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ, ರೋಗದ ಬಗ್ಗೆ ಅಭಿಪ್ರಾಯ ಪಡೆಯಬಹುದಾಗಿದೆ. ತಮ್ಮ ಸಮಸ್ಯೆಗಳಿಗೆ ಒಂದೇ ಒಂದು ಕ್ಲಿಕ್​ ಮೂಲಕ ಪರಿಹಾರ ಪಡೆಯಬಹುದಾಗಿದೆ. ಏನು ಮಾಹಿತಿ ಬೇಕೋ ಆ ಬೆಳೆಯ ಪೋಟೋ ಅಥವಾ ವಿಡಿಯೋ ತೆಗೆದು ಕಳುಹಿಸಿದ್ರೆ,ಅದಕ್ಕೆ ಉತ್ತರ ಸಿಗುತ್ತೆ. ಬಿತ್ತನೆ/ನಾಟಿ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು, ಅದಕ್ಕೆ ಯಾವ ರೀತಿಯ ರೋಗ ಕೀಟ (ಸಂಬಂಧಿಸಿದ ಕೀಟಗಳ ಚಿತ್ರಗಳನ್ನು ನೀಡಲಾಗಿರುತ್ತದೆ) ಬಾಧಿಸಬಹುದಾದ ಸಾಧ್ಯತೆ ಇರುತ್ತದೆ, ಇಂಥ ತೊಂದರೆ ಉಂಟಾಗದಿರಲು ಮುಂಜಾಗ್ರತೆಯಾಗಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ರೀತಿಯ ಪೋಷಕಾಂಶಗಳನ್ನು ಹಾಕಬೇಕು, ಯಾವ ಪ್ರಮಾಣದಲ್ಲಿ ನೀಡಿದರೆ ಅನುಕೂಲ ಇತ್ಯಾದಿ ವಿವರಗಳು ಇರುತ್ತವೆ.

Please follow and like us:
0
http://bp9news.com/wp-content/uploads/2018/05/App-grotere.jpghttp://bp9news.com/wp-content/uploads/2018/05/App-grotere-150x150.jpgBP9 Bureauಕೃಷಿಪ್ರಮುಖಬೆಂಗಳೂರು : ಮೊಬೈಲ್ ಮತ್ತು ಇಂಟರ್​ನೆಟ್ ಎಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್ ನಿಂದಲೇ ನಿರ್ವಹಿಸುವಂತೆ ಆಗಿದೆ. ಈ ಮೊಬೈಲ್ ಮತ್ತು ಇಂಟರ್​ನೆಟ್ ಈಗ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಅದರಲ್ಲೂ  ಸಾವಯವ ಕೃಷಿಯ ಕುರಿತು ಮಾಹಿತಿ ನೀಡುವ ಆ್ಯಪ್ ಬಂದಿದೆ. ಸಾವಯವ ಕೃಷಿಯ ಬೆಳವಣಿಗೆ, ಅದರ ಅವಶ್ಯಕತೆ, ಮೂಲತತ್ವಗಳು, ಸಿದ್ಧಾಂತಗಳು ಸೇರಿದಂತೆ ಹತ್ತಾರು ಮಾಹಿತಿಗಳು ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.ಇತ್ತೀಚೆಗೆ ಸಾವಯವ ಕೃಷಿಯತ್ತ ಸಾಕಷ್ಟು ಯುವಜನರು...Kannada News Portal