ಬೆಂಗಳೂರು : ಅಧಿವೇಶನದಲ್ಲಿ ಯಾರೊಬ್ಬರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಿದರೆ ಪೀಠ ಸಹಿಸುವುದಿಲ್ಲ. ಎಸ್.ಎ.ರಾಮದಾಸ್ ಅವರೇ ಚಾರಿತ್ರ್ಯ ವಧೆ ನೋವನ್ನು ನಮ್ಮ ಇಡೀ ಕುಟುಂಬ ಅನುಭವಿಸಿದೆ. ಅದರ ನೋವು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಆದ ಕಾರಣ ನಿಮ್ಮ ಬಳಿ ಅಗತ್ಯ ಸಾಕ್ಷಾಧಾರಗಳು ಇದ್ದರೆ. ನಿಯಮಾವಳಿಗಳ ಪ್ರಕಾರ ನೋಟಿಸ್ ಕೊಟ್ಟರೆ ಅವಕಾಶ ನೀಡಲಾಗುವುದು. ಆದರೆ, ಸದನದಲ್ಲಿ ಹಿಟ್ ಅಂಡ್ ರನ್‍ ಗೆ ಅವಕಾಶವಿಲ್ಲ ಎಂದು ಸಭಾಧ್ಯಕ್ಷ ಕೆ.ಆರ್.ರಮೇಶ್​​ ಕುಮಾರ್ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಇಂದಿರಾಕ್ಯಾಂಟಿನ್ ಅವ್ಯವಹಾರಕ್ಕೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಮಾಡಿದ್ದು, ಆ ಸಂದರ್ಭದಲ್ಲಿ ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿ ಮಾಡಲಾಗಿತ್ತು. ಈ ಬಗ್ಗೆ ಚರ್ಚೆ ಅಪೂರ್ಣವಾಗಿದ್ದು, ಚರ್ಚೆಗೆ ಅವಕಾಶ ಕೊಡಬೇಕು ಎಂದರು.

ಇಂದಿರಾಕ್ಯಾಂಟಿನ್​​​ ನಲ್ಲಿ ಕಳಪೆ ಆಹಾರ ನೀಡಲಾಗಿದೆ. ಕೇವಲ 120 ಮಂದಿಗಷ್ಟೇ ತಿಂಡಿ ನೀಡಿ 500 ಮಂದಿಗೆ ನೀಡಿದ ದಾಖಲೆ ಸೃಷ್ಟಿಸಲಾಗಿದೆ ಎಂದು ರಾಮದಾಸ್ ಆರೋಪಿಸಿದರು.

ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಇಂದಿರಾಕ್ಯಾಂಟಿನ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ ಪ್ರಸ್ತಾಪಿಸಿದ್ದನ್ನು ಇಂದು ಮತ್ತೆ ಸದನದ ಗಮನಕ್ಕೆ ತಂದ ಸಂದರ್ಭದಲ್ಲಿ ಸಭಾಧ್ಯಕ್ಷರು ಈ ಎಚ್ಚರಿಕೆ ನೀಡಿದರು.

ಈ ಹಂತದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು, ನಿರ್ದಿಷ್ಟ ಆರೋಪ ಮಾಡುವಾಗ ದಾಖಲೆಗಳನ್ನು ವಿಧಾನಸಭೆ ಕಾರ್ಯದರ್ಶಿಗಳಿಗೆ ಒದಗಿಸಿ ನಿಯಮಾವಳಿಗಳ ಪ್ರಕಾರ ಚರ್ಚೆ ಮಾಡುವುದಾದರೆ ಸರ್ಕಾರ ಸಿದ್ದವಿದೆ. ಎಷ್ಟೇ ಆಳವಾಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಸಿದ್ಧ. ಒಂದು ವೇಳೆ ಶಾಸಕರು ಮಾಡಿದ ಆರೋಪ ಸಾಬೀತಾದರೆ ಆರೋಪಿತರಿಗೆ ಶಿಕ್ಷೆಯಾದರೆ ನಿಮಗೇ ರಾಜಕೀಯ ಲಾಭವಾಗಲಿದೆ ಎಂದು ರಾಮದಾಸ್​​ ಅವರನ್ನು ಉದ್ದೇಶಿಸಿ ನುಡಿದರು. ಮುಂದಿನ ಕಾರ್ಯಕಲಾಪಗಳನ್ನು ನಡೆಸಲು ಶಾಸಕರು ಸಹಕಾರ ನೀಡಬೇಕೆಂದು ಕೃಷ್ಣಬೈರೇಗೌಡ ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/07/ರಾಮದಾಸ್_.jpghttp://bp9news.com/wp-content/uploads/2018/07/ರಾಮದಾಸ್_-150x150.jpgPolitical Bureauಪ್ರಮುಖರಾಜಕೀಯ"Our entire family has suffered the death of Ramdas and the charity" !!!ಬೆಂಗಳೂರು : ಅಧಿವೇಶನದಲ್ಲಿ ಯಾರೊಬ್ಬರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಿದರೆ ಪೀಠ ಸಹಿಸುವುದಿಲ್ಲ. ಎಸ್.ಎ.ರಾಮದಾಸ್ ಅವರೇ ಚಾರಿತ್ರ್ಯ ವಧೆ ನೋವನ್ನು ನಮ್ಮ ಇಡೀ ಕುಟುಂಬ ಅನುಭವಿಸಿದೆ. ಅದರ ನೋವು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಆದ ಕಾರಣ ನಿಮ್ಮ ಬಳಿ ಅಗತ್ಯ ಸಾಕ್ಷಾಧಾರಗಳು ಇದ್ದರೆ. ನಿಯಮಾವಳಿಗಳ ಪ್ರಕಾರ ನೋಟಿಸ್ ಕೊಟ್ಟರೆ ಅವಕಾಶ ನೀಡಲಾಗುವುದು. ಆದರೆ, ಸದನದಲ್ಲಿ ಹಿಟ್ ಅಂಡ್ ರನ್‍ ಗೆ ಅವಕಾಶವಿಲ್ಲ ಎಂದು ಸಭಾಧ್ಯಕ್ಷ ಕೆ.ಆರ್.ರಮೇಶ್​​ ಕುಮಾರ್ ವಿಧಾನಸಭೆಯಲ್ಲಿ...Kannada News Portal