ಬೆಂಗಳೂರು:  ಐಫೋನ್‌ ಬಳಕೆದಾರರಿಗೆ ವಾಟ್ಸ್​​​ ಅಪ್‌ನಲ್ಲಿ ಒಂದು ಹೊಸದಾದ ಫೀಚರ್‌ ಆರಂಭವಾಗಿದೆ. ಈ ಹೊಸ ಫೀಚರ್‌ನಲ್ಲಿ ವಾಟ್ಸ್​​​ ಅಪ್‌ನಲ್ಲಿ ಕಳುಹಿಸಲಾಗುವ ಯಾವುದೆ ವಿಡಿಯೋ ನೋಡಲು ಯೂಟ್ಯೂಬ್‌ ಓಪನ್‌ ಮಾಡಬೇಕಾಗಿಲ್ಲ. ಈ ಆ್ಯಪ್‌ ಮೂಲಕ ನೀವು ವಾಟ್ಸ್‌ಅಪ್‌ಗೆ ಬರುವಂತಹ ಯಾವುದೆ ವಿಡಿಯೋ ಲಿಂಕ್‌ನ್ನು ಅಲ್ಲೆ ನೋಡಬಹುದು.

ಯೂಟ್ಯೂಬ್‌ ವಿಡಿಯೋ ನಿಮ್ಮ ಚಾಟ್‌ ವಿಂಡೋದಲ್ಲಿ ಓಪನ್‌ ಆಗುತ್ತದೆ. ವಾಟ್ಸ್​​​ ಅಪ್‌ನ ಬೀಟಾ ಪ್ರೋಗ್ರಾಂನ್ನು ನೋಡಿಕೊಳ್ಳುವ ಒಂದು ವೆಬ್‌ಸೈಟ್‌ ಅನುಸಾರ ಈ ಸೌಲಭ್ಯ ಪಡೆಯಲು ಬಳಕೆದಾರರು ಆ್ಯಪಲ್‌ ಪ್ಲೇ ಸ್ಟೋರ್‌ನಲ್ಲಿ ವಾಟ್ಸ್​​​ ಅಪ್‌ ಅಪ್‌ಡೇಟ್‌ ಮಾಡಬೇಕು. ಇದರಲ್ಲಿ ಬೇರೆ ಸೌಲಭ್ಯಗಳೂ ಇವೆ.

ಬಳಕೆದಾರರು ವಾಟ್ಸ್​​​ ಅಪ್‌ನಲ್ಲಿ ಯೂಟ್ಯೂಬ್‌ ವಿಡಿಯೋ ನೋಡಲು ವಿಡಿಯೋ ಬಂದಾಗ ಅಲ್ಲಿ ಒಂದು ಪ್ಲೇ ಆಕ್ಷನ್‌ ಕಾಣಿಸುತ್ತದೆ. ಇದಕ್ಕೂ ಮೊದಲು ವಾಟ್ಸ್‌ಅಪ್‌ನಲ್ಲಿ ಬಂದಿರುವ ಯೂಟ್ಯೂಬ್ ಲಿಂಕ್‌ ಓಪನ್‌ ಮಾಡಿದಾಗ ಬೇರೆ ವಿಂಡೋದಲ್ಲಿ ನೋಡಬೇಕಾಗಿತ್ತು. ಆದರೆ ಈಗ ನೇರವಾಗಿ ಚಾಟ್‌‌ ವಿಂಡೋದಲ್ಲಿ ಯೂಟ್ಯೂಬ್‌ ನೋಡಬಹುದು.

ವೆಬ್‌ಸೈಟ್‌ನ ಅನುಸಾರ ವಾಟ್ಸ್​​​ ಅಪ್‌ಚಾಟ್‌‌ ವಿಂಡೋನಲ್ಲಿ ವಿಡಿಯೋ ಆನ್‌ ಆಗಿದ್ದರೆ, ಅದು ಬೇರೆ ಚಾಟ್‌ ವಿಂಡೋಗೆ ಹೋಗುವಾಗಲು ಬಂದ್‌ ಆಗೋದಿಲ್ಲ. ಆ್ಯಂಡ್ರಾಯ್ಡ್‌‌ ಮತ್ತು ವಿಂಡೋ ಮೊಬೈಲ್‌ನಲ್ಲಿ ಈ ಸೌಲಭ್ಯ ಇನ್ನೂ ಬಂದಿಲ್ಲ.

Please follow and like us:
0
http://bp9news.com/wp-content/uploads/2018/01/collage-2018-01-21-1-2.jpghttp://bp9news.com/wp-content/uploads/2018/01/collage-2018-01-21-1-2-150x150.jpgPolitical Bureauತಂತ್ರಜ್ಞಾನಪ್ರಮುಖಬೆಂಗಳೂರು:  ಐಫೋನ್‌ ಬಳಕೆದಾರರಿಗೆ ವಾಟ್ಸ್​​​ ಅಪ್‌ನಲ್ಲಿ ಒಂದು ಹೊಸದಾದ ಫೀಚರ್‌ ಆರಂಭವಾಗಿದೆ. ಈ ಹೊಸ ಫೀಚರ್‌ನಲ್ಲಿ ವಾಟ್ಸ್​​​ ಅಪ್‌ನಲ್ಲಿ ಕಳುಹಿಸಲಾಗುವ ಯಾವುದೆ ವಿಡಿಯೋ ನೋಡಲು ಯೂಟ್ಯೂಬ್‌ ಓಪನ್‌ ಮಾಡಬೇಕಾಗಿಲ್ಲ. ಈ ಆ್ಯಪ್‌ ಮೂಲಕ ನೀವು ವಾಟ್ಸ್‌ಅಪ್‌ಗೆ ಬರುವಂತಹ ಯಾವುದೆ ವಿಡಿಯೋ ಲಿಂಕ್‌ನ್ನು ಅಲ್ಲೆ ನೋಡಬಹುದು. ಯೂಟ್ಯೂಬ್‌ ವಿಡಿಯೋ ನಿಮ್ಮ ಚಾಟ್‌ ವಿಂಡೋದಲ್ಲಿ ಓಪನ್‌ ಆಗುತ್ತದೆ. ವಾಟ್ಸ್​​​ ಅಪ್‌ನ ಬೀಟಾ ಪ್ರೋಗ್ರಾಂನ್ನು ನೋಡಿಕೊಳ್ಳುವ ಒಂದು ವೆಬ್‌ಸೈಟ್‌ ಅನುಸಾರ ಈ ಸೌಲಭ್ಯ ಪಡೆಯಲು ಬಳಕೆದಾರರು...Kannada News Portal