ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಖರ್ಗೆ ಮತ್ತು ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಮಾಲೀಕಯ್ಯ ಗುತ್ತೇದಾರ್ ಮೇಲೆ ಪ್ರಿಯಾಂಕ ಖರ್ಗೆ ಗುಡುಗಿದ್ದಾರೆ. ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಗೆದ್ದು ತೋರಿಸಲಿ, ನಂತರ ಪುಂಖಾನು ಪುಂಖ ಭಾಷಣ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೌದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರು ಗೆದ್ದು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಒಬ್ಬ ಬಚ್ಚಾ ಎಂದು ಕರೆದಿದ್ದ ಮಾಲೀಕಯ್ಯ ಗುತ್ತೇದಾರ್ ಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಬಚ್ಚಾ ಯಾರು ಅನ್ನೋದನ್ನ ಮತದಾರರು ನಿರ್ಧರಿಸುತ್ತಾರೆ. ಅಪ್ಪ ಮಗನನ್ನು ಸೋಲಿಸುತ್ತೇನೆ ಎಂದು ಗುತ್ತೇದಾರ್ ಹೇಳುತ್ತಾರೆ. ಅಫಜಲಪುರ ಕ್ಷೇತ್ರಕ್ಕೆ ಹೋಗಿ ನಾನು ಪ್ರಚಾರ ಮಾಡಿ ಗೆದ್ದು ತೋರಿಸಲಿ ಎಂದರು.

ಇನ್ನು ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ನಿಲ್ಲುತ್ತಾರೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿದ ಅವರು, ನಾನು ಚಿತ್ತಾಪುರ ಕ್ಷೇತ್ರ ಬಿಟ್ಟು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಗಾಳಿ ಸುದ್ದಿ ಹಬ್ಬಿಸಿದೆ ಎಂದರು.

Please follow and like us:
0
http://bp9news.com/wp-content/uploads/2018/04/malikayya-guttedar-1.jpghttp://bp9news.com/wp-content/uploads/2018/04/malikayya-guttedar-1-150x150.jpgPolitical Bureauಪ್ರಮುಖಬೀದರ್ರಾಜಕೀಯI'm Not Losing !!! : Priyanka Kharge,Owner Güyderar Allಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಖರ್ಗೆ ಮತ್ತು ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಮಾಲೀಕಯ್ಯ ಗುತ್ತೇದಾರ್ ಮೇಲೆ ಪ್ರಿಯಾಂಕ ಖರ್ಗೆ ಗುಡುಗಿದ್ದಾರೆ. ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಗೆದ್ದು ತೋರಿಸಲಿ, ನಂತರ ಪುಂಖಾನು ಪುಂಖ ಭಾಷಣ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಹೌದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರು ಗೆದ್ದು ತೋರಿಸಲಿ ಎಂದು...Kannada News Portal