ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಶರೀಫ್​  ಮತ್ತು ಅವರ ಮಗಳಿಗೆ ಮರಿಯಮ್​ ನವಾಜ್​ಗೆ ನ್ಯಾಯಾಲಯದಿಂದ  ಬಿಡಿಗಡೆ ಭಾಗ್ಯ​ ಸಿಕ್ಕಿದೆ. ಪಾಕಿಸ್ತಾನದ ಇಸ್ಲಾಮಾಬಾದ್​ ಹೈಕೋರ್ಟ್​ ನವಾಜ್​ ಶರೀಫ್​ ಮತ್ತ ಮರಿಯಮ್​ರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದೆ.

ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಅಕ್ರಮ ಹಣಗಳಿಸಿ ಲಂಡನ್​ನಲ್ಲಿ ಐಷಾರಾಮಿ ಬಂಗಲೆಗಳು ಮತ್ತು ಆಸ್ತಿಯನ್ನು ಮಾಡಿರುವ ಬಗ್ಗೆ ವರದಿಯಾಗಿತ್ತು. ದಾಖಲೆಗಳ ಸಮೇತ ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಸೇರಿದಂತೆ ವಿಶ್ವದ ಹಲವು ಗಣ್ಯರ ಭ್ರಷ್ಟಾಚಾರವನ್ನು ಬೆಳಕಿಗೆ ತರಲಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಸುಪ್ರೀಂ ಕೋರ್ಟ್​ ನವಾಜ್​ ಶರೀಫ್​ರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ಐತಿಹಾಸಿಕ ತೀರ್ಪುನ್ನು ನೀಡಿತ್ತು.

ಪಾಕಿಸ್ತಾನ ಚುನಾವಣೆ ಇನ್ನೇನು ಹತ್ತಿರವಿದೆ ಎಂಬಾಗ ಶರೀಫ್​ರಿಗೆ 10 ವರ್ಷ​, ಮಗಳು ಮರಿಯಮ್​ರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕೋರ್ಟ್​ ಆದೇಶಿಸಿತ್ತು. ಆದರೆ ಇದೀಗ ನವಾಜ್​ ಶರೀಫ್​ ಪರ ವಕೀಲರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡ ಇಸ್ಲಾಮಾಬಾದ್​ ನ್ಯಾಯಾಲಯವು ಆರ್ಥಿಕ ಅಪರಾಧಗಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿದೆ.
Please follow and like us:
0
http://bp9news.com/wp-content/uploads/2018/09/nawaz-sharif.pnghttp://bp9news.com/wp-content/uploads/2018/09/nawaz-sharif-150x150.pngBP9 Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಶರೀಫ್​  ಮತ್ತು ಅವರ ಮಗಳಿಗೆ ಮರಿಯಮ್​ ನವಾಜ್​ಗೆ ನ್ಯಾಯಾಲಯದಿಂದ  ಬಿಡಿಗಡೆ ಭಾಗ್ಯ​ ಸಿಕ್ಕಿದೆ. ಪಾಕಿಸ್ತಾನದ ಇಸ್ಲಾಮಾಬಾದ್​ ಹೈಕೋರ್ಟ್​ ನವಾಜ್​ ಶರೀಫ್​ ಮತ್ತ ಮರಿಯಮ್​ರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದೆ. ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಅಕ್ರಮ ಹಣಗಳಿಸಿ ಲಂಡನ್​ನಲ್ಲಿ ಐಷಾರಾಮಿ ಬಂಗಲೆಗಳು ಮತ್ತು ಆಸ್ತಿಯನ್ನು ಮಾಡಿರುವ ಬಗ್ಗೆ ವರದಿಯಾಗಿತ್ತು. ದಾಖಲೆಗಳ ಸಮೇತ ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಸೇರಿದಂತೆ ವಿಶ್ವದ ಹಲವು...Kannada News Portal