ಬೆಂಗಳೂರು : ಅಂತರರಾಷ್ಟ್ರೀಯ ಗಡಿಯ (ಐಬಿ) ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಮಂಗಳವಾರ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿವೆ. ಈ ಘಟನೆ ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

ಈ ಬರ್ಬರ ಘಟನೆಯ ಬಳಿಕ ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಾಕಿಸ್ತಾನ ರೇಂಜರ್ಸ್‌ಗೆ ದೂರು ದಾಖಲಿಸಿದೆ.

‘ಹೆಡ್‌ಕಾನ್‌ಸ್ಟೆಬಲ್ ನರೇಂದ್ರ ಸಿಂಗ್ ಅವರ ದೇಹವನ್ನು ಮೂರು ಗುಂಡುಗಳು ಹೊಕ್ಕಿವೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ. ಈ ಕ್ರೂರ ಕೃತ್ಯದ ಹಿಂದೆ ಪಾಕಿಸ್ತಾನದ ಸೇನೆ ಇದೆ. ಬಿಎಸ್‌ಎಫ್ ಹಾಗೂ ಇತರೆ ರಕ್ಷಣಾ ಪಡೆಗಳು ಸೂಕ್ತ ಸಮಯದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ–ಪಾಕಿಸ್ತಾನ ಗಡಿಯ ಜಮ್ಮುವಿನಲ್ಲಿ ಗೃಹಸಚಿವ ರಾಜನಾಥ ಸಿಂಗ್ ‘ಸ್ಮಾರ್ಟ್ ಬೇಲಿ’ಯನ್ನು ಉದ್ಘಾಟಿಸಿದ ಮುರುದಿನವೇ ಈ ಘಟನೆ ನಡೆದಿದೆ.

Please follow and like us:
0
http://bp9news.com/wp-content/uploads/2018/09/file71ys03pjufondnru89p-1024x782.jpghttp://bp9news.com/wp-content/uploads/2018/09/file71ys03pjufondnru89p-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯPakistani soldier strangled to death More crisis between the two countriesಬೆಂಗಳೂರು : ಅಂತರರಾಷ್ಟ್ರೀಯ ಗಡಿಯ (ಐಬಿ) ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಮಂಗಳವಾರ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿವೆ. ಈ ಘಟನೆ ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal