ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು ಸಮಾವೇಶ ಮುಗಿಸಿ ಬೆಳಗಾವಿಗೆ ಆಗಮಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮೋದಿ ಅವರು ಮಾತನಾಡುತ್ತಿದ್ದಾರೆ.

ಮಾಮೂಲಿನಂತೆ ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಬೆಳಗಾವಿಯನ್ನು ಕುಂದಾನಗರಿ ಎಂದು ಕರೆದರು. ರಾಣಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಛತ್ರಪತಿ ಶಿವಾಜಿಯನ್ನು ನೆನೆದರು.

ಜನರು ಮೋದಿ ಭಾಷಣದ ಕನ್ನಡ ಅನುವಾದ ಬೇಡವೆಂದರು. ‘ಜನರೇ ನಮ್ಮ ಹೈಕಮಾಂಡ್ ನೀವು ಏನು ಹೇಳುತ್ತೀರೋ ಅದನ್ನೇ ನಾವು ಮಾಡುತ್ತೇವೆ’ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಪಕ್ಷ ಭಾರತದ ಎಲ್ಲ ಭಾಗಗಳಲ್ಲೂ ಮುಗಿದುಹೋಗಿದೆ. ಇದು ಕೇವಲ ರಾಜ್ಯಗಳಿಂದ ಮಾತ್ರವಷ್ಟೆ ಅಲ್ಲ ಜನರ ಹೃದಯದಿಂದಲೂ ಕಾಂಗ್ರೆಸ್ ನಿರ್ಗಮಿಸಿಬಿಟ್ಟಿದೆ.

ಕಾಂಗ್ರೆಸ್‌ನವರು ತಾವು ಈ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಹೇಳುತ್ತಿಲ್ಲ ಬದಲಿಗೆ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲೂ ಮೋದಿ.. ಮೋದಿ ಎನ್ನುತ್ತಿದ್ದಾರೆ. ನಿನ್ನೆ ಯಾರೊ ನರೇಂದ್ರ ಎನ್ನುವ ಅಭ್ಯರ್ಥಿ ಪರ ಮತ ಕೇಳುತ್ತಿದ್ದ ಸಿದ್ದರಾಮಯ್ಯ ನರೇಂದ್ರ ಮೋದಿಗೆ ಮತ ಹಾಕಿ ಎಂದರಂತೆ ಎಂದು ಮೋದಿ ನಕ್ಕರು.

ಚುನಾವಣೆಯಲ್ಲಿ ಸೋಲು ಖಂಡಿತ ಎಂಬುದು ಕಾಂಗ್ರೆಸ್‌ಗೆ ಗೊತ್ತಾಗಿಬಿಟ್ಟಿದೆ ಹಾಗಾಗಿ ಅವರು ಪ್ರಚಾರವನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ. ಹಾಗಾಗಿ ಅವರು ಗೆಲ್ಲಲು ಅಡ್ಡಹಾದಿ ಹಿಡಿದಿದ್ದಾರೆ.

ನೀವೆಲ್ಲಾ ನೋಡುತ್ತಿದ್ದೀರಾ ಬೆಂಗಳೂರಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕಿದೆ. ಇದು ಬೆಂಗಳೂರಲ್ಲಿ ಮಾತ್ರವೇ ಅಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಈ ರೀತಿಯ ಕುಕೃತ ಮಾಡುತ್ತಿದೆ.

ಬಾದಾಮಿ ಬಳಿ ರೆಸಾರ್ಟ್‌ ಮೇಲೆ ಐಟಿ ದಾಳಿ ನಡೆದ ಬಗ್ಗೆ ಉಲ್ಲೇಖಿಸಿದ ಮೋದಿ ಅವರು, ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್‌ನಲ್ಲಿ ಐಟಿ ದಾಳಿ ನಡೆದು ಹಣ ಸಿಕ್ಕಿದೆ ಇದಕ್ಕಿಂತಲೂ ಅವಮಾನ ಏನಿದೆ ಎಂದು ಪ್ರಶ್ನಿಸಿದರು.

Please follow and like us:
0
http://bp9news.com/wp-content/uploads/2018/05/modi-karnataka-3.jpghttp://bp9news.com/wp-content/uploads/2018/05/modi-karnataka-3-150x150.jpgPolitical Bureauಪ್ರಮುಖಬೆಳಗಾವಿರಾಜಕೀಯ"People Our High Command We Do What You Say": Modi is in a hurryಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು ಸಮಾವೇಶ ಮುಗಿಸಿ ಬೆಳಗಾವಿಗೆ ಆಗಮಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮೋದಿ ಅವರು ಮಾತನಾಡುತ್ತಿದ್ದಾರೆ. ಮಾಮೂಲಿನಂತೆ ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಬೆಳಗಾವಿಯನ್ನು ಕುಂದಾನಗರಿ ಎಂದು ಕರೆದರು. ರಾಣಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಛತ್ರಪತಿ ಶಿವಾಜಿಯನ್ನು ನೆನೆದರು. ಜನರು ಮೋದಿ ಭಾಷಣದ ಕನ್ನಡ ಅನುವಾದ ಬೇಡವೆಂದರು. 'ಜನರೇ ನಮ್ಮ ಹೈಕಮಾಂಡ್ ನೀವು ಏನು...Kannada News Portal