ಬೆಂಗಳೂರು : ಬರದ ನಾಡು ಕೊಪ್ಪಳದಲ್ಲಿ ಸದಾ ಒಂದಿಲ್ಲೊಂದು ಕೃಷಿ ಸಂಬಂಧಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಮೂಲಕ ರೈತರ ಹಾಗೂ ಗ್ರಾಹಕರ ನಡುವಿನ ಸಂಪರ್ಕ ಸೇತುವೆಯಾಗಿರೋ ತೋಟಗಾರಿಕೆ ಇಲಾಖೆ ಇದೀಗ ಮತ್ತೊಂದು ಕಾರ್ಯಕ್ರಮದ ಮೂಲಕ ಜನರನ್ನ ತನ್ನತ್ತ ಸೆಳೆಯುತ್ತಿದೆ.

ಕಲರ್-ಕಲರ್ ಹೂಗಳು, ಮತ್ತೊಂದೆಡೆ ವಿವಿಧ ಬಗೆಯ ಹಣ್ಣಿನ ಗಿಡಗಳು, ಸ್ವಲ್ಪ ಮುಂದೆ ಬಂದ್ರೆ, ತರಕಾರಿ ಸಸಿಗಳು, ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಕೊಪ್ಪಳದಲ್ಲಿ. ಅಷ್ಟಕ್ಕೂ ಈ ಎಲ್ಲಾ ಸಸಿಗಳನ್ನ ನೋಡುವ ಸೌಭಾಗ್ಯವನ್ನ ಜಿಲ್ಲೆಯ ಜನತೆಗೆ ಒದಗಿಸಿದ್ದು, ತೋಟಗಾರಿಕೆ ಇಲಾಖೆ. ಸದಾ ಒಂದಿಲ್ಲೋಂದು ಮೇಳಗಳ ಆಯೋಜನೆ ಮಾಡುವ ಮೂಲಕ ರೈತರಿಗೂ ಹಾಗೂ ಗ್ರಾಹಕರಿಗೂ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸ್ತಿರೋ ತೋಟಗಾರಿಕೆ ಇಲಾಖೆ ಇದೀಗ 2ನೇ ಬಾರಿಗೆ ಹತ್ತು ದಿನಗಳ ಕಾಲ ಸಸ್ಯ ಸಂತೆಯನ್ನ ಆಯೋಜಿಸಿದೆ.

ಹತ್ತು ದಿನಗಳ ಕಾಲ ನಡೆಯುವ ಈ ಸಸ್ಯ ಸಂತೆ ಮೇಳಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಚಾಲನೆ ನೀಡಿದ್ರು. ಅಲ್ದೆ, ವಿವಿಧ ಬಗೆಯ ಸಸ್ಯಗಳನ್ನ ನೋಡಿ ತಾವೂ ಕೂಡ ಸಸಿಗಳನ್ನ ಖರೀದಿಸಿದ್ರು. ಇನ್ನೂ, ಈ ಸಸ್ಯ ಮೇಳದಲ್ಲಿ ಕರಿಬೇವು, ಕೊತ್ತಂಬರಿ, ಟಮೋಟಾ, ಮೆಣಸಿಕಾಯಿ, ನಿಂಬೆ, ಮಾವು, ನೇರಳೆ, ಪೇರಲಾ, ತೆಂಗು, ಹೂಗಳಾದ ಗುಲಾಬಿ, ದಾಸವಾಳ, ಸೇರಿದಂತೆ ಹಲವು ಬಗೆಯ ಸಸಿಗಳನ್ನ ಇಲ್ಲಿ ಮಾರಲಾಗ್ತಿದೆ. ಅಲ್ದೆ, ಮನೆಯ ತಾರಸಿ ಹಾಗೂ ಗಾರ್ಡನ್ನಲ್ಲಿ ಬೆಳೆಯಬಹುದಾದ ಹಲವಾರು ಸಸಿಗಳನ್ನ ಇಲ್ಲಿ ಗ್ರಾಹಕರಿಗೆ ಮಾರಲಾಗ್ತಿದೆ.

ಒಟ್ಟಿನಲ್ಲಿ ಈ ಸಸ್ಯ ಸಂತೆಯಲ್ಲಿ 52 ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ತೋಟಗಾರಿಕೆ ಇಲಾಖೆ ಮಾರಾಟ ಮಾಡ್ತಿದೆ. ಕಳೆದ ವರ್ಷ ಸಸ್ಯ ಸಂತಗೆ ಸಖತ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಇದೀಗ ಈ ವರ್ಷವೂ ಸಸ್ಯ ಸಂತೆಯನ್ನ ಆಯೋಜಿಸಿ ತೋಟಗಾರಿಕೆ ಇಲಾಖೆ ಜಿಲ್ಲೆಯ ಜನರ ವಿಶ್ವಾಸವನ್ನುಗಳಿಸಿದೆ.

Please follow and like us:
0
http://bp9news.com/wp-content/uploads/2018/06/Plant-Breeding-Farmer-and-Consumer-Connection-Bridge-Karnatakada-Miditha.jpeghttp://bp9news.com/wp-content/uploads/2018/06/Plant-Breeding-Farmer-and-Consumer-Connection-Bridge-Karnatakada-Miditha-150x150.jpegPolitical Bureauಕೃಷಿಕೊಪ್ಪಳಪ್ರಮುಖPlant Breeding: Farmer and Consumer Connection Bridge !!!ಬೆಂಗಳೂರು : ಬರದ ನಾಡು ಕೊಪ್ಪಳದಲ್ಲಿ ಸದಾ ಒಂದಿಲ್ಲೊಂದು ಕೃಷಿ ಸಂಬಂಧಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಮೂಲಕ ರೈತರ ಹಾಗೂ ಗ್ರಾಹಕರ ನಡುವಿನ ಸಂಪರ್ಕ ಸೇತುವೆಯಾಗಿರೋ ತೋಟಗಾರಿಕೆ ಇಲಾಖೆ ಇದೀಗ ಮತ್ತೊಂದು ಕಾರ್ಯಕ್ರಮದ ಮೂಲಕ ಜನರನ್ನ ತನ್ನತ್ತ ಸೆಳೆಯುತ್ತಿದೆ.  ಕಲರ್-ಕಲರ್ ಹೂಗಳು, ಮತ್ತೊಂದೆಡೆ ವಿವಿಧ ಬಗೆಯ ಹಣ್ಣಿನ ಗಿಡಗಳು, ಸ್ವಲ್ಪ ಮುಂದೆ ಬಂದ್ರೆ, ತರಕಾರಿ ಸಸಿಗಳು, ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಕೊಪ್ಪಳದಲ್ಲಿ. ಅಷ್ಟಕ್ಕೂ ಈ ಎಲ್ಲಾ ಸಸಿಗಳನ್ನ ನೋಡುವ...Kannada News Portal