ಟೈಮ್​ಪಾಸ್​: ಪೊಲೀಸರೆಂದರೆ ಕೆಟ್ಟವರು ಎನ್ನುವ ಭಾವನೆ ಇಂತಹ ಪೊಲೀಸರಿಂದಲೇ ಇರುವುದು ಎಂದರೆ ತಪ್ಪಲ್ಲ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಿರುವವರನ್ನು ಕೂಡ ಬಿಡದೆ ಅವರಿಂದ ಹಣ ಪೀಕುವ ಇಂತಹ ಪೊಲೀಸರಿಗೆ ಏನು ಹೇಳಬೇಕು ಎನ್ನುವುದೇ ಅರ್ಥವಾಗುವುದಿಲ್ಲ.

ಉತ್ತರ ಭಾರತದಲ್ಲಿ ನಡೆದಿರುವ ಈ ಘಟನೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಒಬ್ಬ ವೃದ್ದೆ ರಸ್ತೆಬದಿಯಲ್ಲಿ ಭಿಕ್ಷೆ ಬೇಡಿಕೊಂಡು ಕುಳಿತಿದ್ದರೆ ಅವರ ಬಳಿಗೆ ಬಂದ ಪೊಲೀಸ್​ ಆಕೆ ಹಣ ಕೊಡುವವರೆಗೂ ಬಿಡುವುದಿಲ್ಲ. ಹಣ ಇಲ್ಲ ಎಂದು ಆ ವೃದ್ದೆ ಪೊಲೀಸ್​ನ ಕಾಲು ಮುಟ್ಟಿ ಬೇಡಿಕೊಂಡರೂ ಕನಿಕರ ತೋರದ ಪೊಲೀಸ್​ ಆಕೆಯ ಬಳಿ ಹಣವನ್ನ ಕಿತ್ತುಕೊಂಡು ಹೋಗುವ ದೃಶ್ಯ ಮನಕಲಕುತ್ತದೆ.

ಎಲ್ಲ ಪೊಲೀಸರು ಹೀಗೆಯೇ ಇರುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಆದರೆ ಇಲಾಖೆಯಲ್ಲಿ ಇಂತಹ ಕೆಲವು ಪೊಲೀಸರು ಮಾಡುವ ಕೆಲಸಕ್ಕೆ ಇಡೀ ಇಲಾಖೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇನ್ನು ಈ ಘಟನೆ ನಡೆದಿರುವುದು ಉತ್ತರ ಭಾರತದಲ್ಲಿ ಆದರೆ ಎಲ್ಲಿ ಎನ್ನುವ ಮಾಹಿತಿ ಇಲ್ಲ.

Please follow and like us:
0
http://bp9news.com/wp-content/uploads/2018/04/aaaa.jpghttp://bp9news.com/wp-content/uploads/2018/04/aaaa-150x150.jpgBP9 Bureauಟೈಮ್ ಪಾಸ್ಟೈಮ್​ಪಾಸ್​: ಪೊಲೀಸರೆಂದರೆ ಕೆಟ್ಟವರು ಎನ್ನುವ ಭಾವನೆ ಇಂತಹ ಪೊಲೀಸರಿಂದಲೇ ಇರುವುದು ಎಂದರೆ ತಪ್ಪಲ್ಲ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಿರುವವರನ್ನು ಕೂಡ ಬಿಡದೆ ಅವರಿಂದ ಹಣ ಪೀಕುವ ಇಂತಹ ಪೊಲೀಸರಿಗೆ ಏನು ಹೇಳಬೇಕು ಎನ್ನುವುದೇ ಅರ್ಥವಾಗುವುದಿಲ್ಲ. ಉತ್ತರ ಭಾರತದಲ್ಲಿ ನಡೆದಿರುವ ಈ ಘಟನೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಒಬ್ಬ ವೃದ್ದೆ ರಸ್ತೆಬದಿಯಲ್ಲಿ ಭಿಕ್ಷೆ ಬೇಡಿಕೊಂಡು ಕುಳಿತಿದ್ದರೆ ಅವರ ಬಳಿಗೆ ಬಂದ ಪೊಲೀಸ್​ ಆಕೆ ಹಣ ಕೊಡುವವರೆಗೂ ಬಿಡುವುದಿಲ್ಲ. ಹಣ...Kannada News Portal