ಬೆಂಗಳೂರು : ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಹಣದಾಸೆಗಾಗಿ ಅಮಾಯಕರ ಮೇಲೆ ಇಲ್ಲ ಸಲ್ಲದ ಕಳ್ಳತನ ಪ್ರಕರಣದಲ್ಲಿ ಸಿಲುಕಿಸುವ ಸಂಚು ಮಾಡಿ ಹಣ ಮತ್ತು ಒಡವೆಗಳನ್ನು ಕಸಿದು ದೌರ್ಜನ್ಯ ನಡೆಸ್ತಿದ್ದಾರೆಂದು ಮಳವಳ್ಳಿ ಪೊಲೀಸರಿಂದ ದೌಜನ್ಯಕೊಳಗಾದ ಮಂಡ್ಯ ಮಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರನೋರ್ವ ಸಿ.ಎಂ. ಹಾಗೂ ಸರ್ಕಾರದ ಕಾರ್ಯದರ್ಶಿ ಸೇರಿದಂತೆ ಗೃಹ ಇಲಾಖೆಯ IG , DG ಮತ್ತು ಎಸ್ಪಿ ಗೆ ದಾಖಲೆ ಸಮೇತ ದೂರು ನೀಡಿದ್ದಾರೆ.

ಮಳವಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ಸಬ್ ಇನ್ಸ್ಪೆಕ್ಟರ್ ಸಿದ್ದರಾಜು, ಪೇದೆ ಅಂಜನಮೂರ್ತಿ ಮತ್ತು ಜೀಪ್ ಚಾಲಕ ಮಹೇಶ್ ವಿರುದ್ಧ ದೂರು ಮಿಮ್ಸ್ ನ ಗುತ್ತಿಗೆ ನೌಕರ ಶರತ್ ದೂರು ನೀಡಿದ್ದಾರೆ. ಏಪ್ರಿಲ್ ೫ ರಂದು ನನ್ನ ಪರಿಚಯಸ್ಥ ನಾಗಿರೋ ಸತೀಶ್ ಎಂಬ ವ್ಯಕ್ತಿ ಮೂಲಕ ನನ್ನನ್ನು ಮಳವಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದು ಸತೀಶ್ ಕಳ್ಳತನ ಮಾಡಿದ್ದ ೩೦ ಗ್ರಾಂ ಒಡವೆಗಳನ್ನು ನಿನಗೆ ನೀಡಿದ್ದಾನೆ ಕೊಡುವಂತೆ ಧಮಕಿ ಹಾಕಿದ್ದಾರೆ. ಅಲ್ಲದೇ ನೀನು ಕೊಡದಿದ್ರೆ ನಿನ್ನ ಮಾನ ಹರಾಜು ಹಾಕಲು ಸ್ಲೇಟ್ ಹಿಡಿಸಿ ನಿನ್ನನು ಈ ಪ್ರಕರಣದಲ್ಲಿ ಸಿಲುಕಿಸುವುದಾಗಿ ಎದುರಿಸಿದ್ದಾರೆ.

ಮಾನ ಮರ್ಯಾದೆಗಾಗಿ ಪೊಲೀಸರ ಭಯಕ್ಕೆ ನಾನು ಎದರಿ ಕೊಡುವುದಾಗಿ ಹೇಳಿ ಮನೆಗೆ ಬಂದಿದೆ. ಮನೆಯಲ್ಲಿ ಪೊಲೀಸ್ರು ಕೂಡ ನನ್ನ ಜೊತೆಯಲ್ಲಿ ನಮ್ಮ ಮನೆಗೆ ಬಂದಿದ್ರು. ಬರುವಾಗ ನಿಮ್ಮ ಮನೆಗೆ ನೀನು ಯಾವುದೋ ಪ್ರಕರಣದಲ್ಲಿ ಜಾಮೀನಾಗಿದ್ದೆ ಅದಕ್ಕಾಗಿ ನಾನು ಅವ್ರಿಗೆ ಹಣ ಕೊಡಬೇಕಾಗಿದೆ ಎಂದು ಹೇಳುವಂತೆ ತಾಖೀತು ಮಾಡಿದ್ದಾರೆ. ನಂತರ ಮನೆಯಲ್ಲಿ ಅತ್ತು ಕರೆದು ನಾನು ಇರೋ ವಿಷಯ ತಿಳಿಸಿದಾಗ ಮನೆಯವರು ಮಾನ ಮರ್ಯಾದೆಗಾಗಿ ಮನೆಯಲ್ಲಿ 20 ಸಾವಿರ ನೀಡಿದರು. ಚಿನ್ನ ಇಲ್ಲ, ಸ್ವಲ್ಪ ಸಮಯ ಕೋಡಿ ಎಂದು ಕೇಳಿದ್ದಕ್ಕೆ, ಈಗಲೇ ಬೇಕು. ಕೊಡದಿದ್ದರೆ ಕೇಸ್ ನಲ್ಲಿ ಫಿಟ್ ಮಾಡೋದಾಗಿ ಎದರಿಸಿದ್ದರಿಂದ ಕೊನೆಗೆ ಪತ್ನಿ ತಾಳಿಯನ್ನು ಬಿಚ್ಚಿ ಕೊಟ್ಟಿದ್ದಾರೆ. ಮನೆಯಲ್ಲಿ ನಡೆದ ಈ ಎಲ್ಲಾ ದೃಶ್ಯ ವನ್ನು ರಹಸ್ಯವಾಗಿ ಚಿತ್ರಿಕರಿಸಿದ ಮನೆಯವರು ಇದೀಗ ನ್ಯಾಯಕ್ಕಾಗಿ ಮಾಧ್ಯಮದವರ ಮೊರೆ ಹೋಗಿದ್ದಾರೆ.

ಪೊಲೀಸ್ರು ಅಮಾಯಕರ ಮೇಲೆ ಈ ರೀತಿ ದಬ್ಬಾಳಿಕೆ ಮಾಡಿ ರೌಡಿಗಳಂತೆ ವಸೂಲಿ ಮಾಡ್ತಿರೋ ಬಗ್ಗೆ ಸಿ.ಎಂ. ಸೇರಿ ಸರ್ಕಾರದ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ದೆ ಈ ಕುರಿತು ಉನ್ನತ ತನಿಖೆ ಮಾಡುವಂತೆ ಒತ್ತಾಯಿಸಿ ದೌರ್ಜನ್ಯ ಮಾಡಿರುವ ಪೊಲೀಸರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಅಲ್ದೆ ಶರತ್ ತನಗೆ ಜೀವ ಭಯವಿರೋ ಬಗ್ಗೆ ಕೂಡ ಹೇಳಿಕೊಂಡಿದ್ದು , ತನಗೆ ಏನೇ ಆದ್ರು ಪೊಲೀಸ್ ಇಲಾಖೆಯೇ ಕಾರಣ ಅಂತಾ ದೂರು ಉಲ್ಲೇಖ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/BP1.jpghttp://bp9news.com/wp-content/uploads/2018/05/BP1-150x150.jpgPolitical Bureauಪ್ರಮುಖಮಂಡ್ಯರಾಜಕೀಯPolice get rid of girls : This is a Khaki robber ???ಬೆಂಗಳೂರು : ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಹಣದಾಸೆಗಾಗಿ ಅಮಾಯಕರ ಮೇಲೆ ಇಲ್ಲ ಸಲ್ಲದ ಕಳ್ಳತನ ಪ್ರಕರಣದಲ್ಲಿ ಸಿಲುಕಿಸುವ ಸಂಚು ಮಾಡಿ ಹಣ ಮತ್ತು ಒಡವೆಗಳನ್ನು ಕಸಿದು ದೌರ್ಜನ್ಯ ನಡೆಸ್ತಿದ್ದಾರೆಂದು ಮಳವಳ್ಳಿ ಪೊಲೀಸರಿಂದ ದೌಜನ್ಯಕೊಳಗಾದ ಮಂಡ್ಯ ಮಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರನೋರ್ವ ಸಿ.ಎಂ. ಹಾಗೂ ಸರ್ಕಾರದ ಕಾರ್ಯದರ್ಶಿ ಸೇರಿದಂತೆ ಗೃಹ ಇಲಾಖೆಯ IG , DG ಮತ್ತು ಎಸ್ಪಿ ಗೆ ದಾಖಲೆ...Kannada News Portal