ಮಂಡ್ಯ:ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜೂಜುಕೋರನೊಬ್ಬ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಇಲ್ಲಿನ ಚಿಕ್ಕೇಗೌಡನದೊಡ್ಡಿ ಗ್ರಾಮದ ಮಧು ಎಂಬಾತನೇ ಪ್ರಾಣ ಕಳೆದುಕೊಂಡಿರುವ ವ್ಯಕ್ತಿ. ಈತ ಚಿಕ್ಕೇಗೌಡನ ದೊಡ್ಡಿಯ ಹೊರವಲಯದಲ್ಲಿ ರಾತ್ರಿಯಿಂದ ಜೂಜಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ಮಾಹಿತಿ ಬಂದ ತಕ್ಷಣ ಡಿಸಿಆರ್ ಬಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ್ದಾನೆ. ನಾಲೆಯಲ್ಲಿ ನೀರು ತುಂಬಿದ್ದರಿಂದ ನೀರು ಕುಡಿದು ಸಾವನ್ನಪ್ಪಿದ್ದಾನೆ. ಮೃತ ಮಧು ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಶವ ಹತ್ತಿರದಲ್ಲಿಯೇ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/ಜೂಜು-ಅಡ್ಡೆ-ಮೇಲೆ-ಪೊಲೀಸರ-ದಾಳಿ.jpghttp://bp9news.com/wp-content/uploads/2018/06/ಜೂಜು-ಅಡ್ಡೆ-ಮೇಲೆ-ಪೊಲೀಸರ-ದಾಳಿ-150x150.jpgBP9 Bureauಪ್ರಮುಖಮಂಡ್ಯpolice-raid-on-cards-playing-gangಮಂಡ್ಯ:ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜೂಜುಕೋರನೊಬ್ಬ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇಲ್ಲಿನ ಚಿಕ್ಕೇಗೌಡನದೊಡ್ಡಿ ಗ್ರಾಮದ ಮಧು ಎಂಬಾತನೇ ಪ್ರಾಣ ಕಳೆದುಕೊಂಡಿರುವ ವ್ಯಕ್ತಿ. ಈತ ಚಿಕ್ಕೇಗೌಡನ ದೊಡ್ಡಿಯ ಹೊರವಲಯದಲ್ಲಿ ರಾತ್ರಿಯಿಂದ ಜೂಜಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ಮಾಹಿತಿ ಬಂದ ತಕ್ಷಣ ಡಿಸಿಆರ್ ಬಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ್ದಾನೆ. ನಾಲೆಯಲ್ಲಿ ನೀರು ತುಂಬಿದ್ದರಿಂದ ನೀರು ಕುಡಿದು...Kannada News Portal