ಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ರಾಜಕೀಯ ಸೇರಿದ ಮೇಲೆ ಅನೇಕ ಏಳು-ಬೀಳುಗಳನ್ನು ಕಂಡರು. ಪ್ರಜಾಕೀಯ ಮಾಡುತ್ತೀನಿ ಅಂತಾ ಹೊರಟು ‘ಕೆಪಿಜೆಪಿ’ ಸೇರಿ ಆ ನಂತರ ಹೊರ ಬಂದಿದ್ದು ಹಳೇ ವಿಚಾರ. ಸದ್ಯ ರಾಜಕೀಯವನ್ನು ತೊರೆದು ಸಿನಿ ಜರ್ನಿ ಆರಂಭಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ರಾಜಕೀಯ ಪದಕ್ಕೆ ಹೊಸ ಅರ್ಥ ಹುಡುಕಿದ್ದಾರೆ. ರಾಜಕೀಯ ಹೈಡ್ರಾಮ ತಣ್ಣಗಾಗುತ್ತಲೇ ಉಪ್ಪಿ ಮತ್ತೆ ಪ್ರಜಾಕೀಯದ ಸದ್ದು ಮಾಡುತ್ತಿದ್ದಾರೆ.

ಅಂದಹಾಗೆ ಬುದ್ಧಿವಂತ ಉಪೇಂದ್ರಪ್ರಜಾಕೀಯ  ಪಕ್ಷವನ್ನು ನೊಮದಣಿ ಮಾಡಿಸಿದ್ದಾರೆ. ಅವರ  ಪ್ರಕಾರ  ರಾಜಕೀಯ ಅಂದ್ರೆ ರಾ-ರಾಕ್ಷಸ, ಜ-ಜರಾಸಂಧ,  ಕೀ-ಕೀಚಕ, ಯ-ಯಮ ಎಂಬ ಅರ್ಥವನ್ನು ಕೊಡುತ್ತದೆ. ರಾಜಕೀಯ ಪದದದಲ್ಲಿನ ಅಕ್ಷರಗಳನ್ನು ತೆಗೆದುಕೊಂಡು ರಾಜಕೀಯ ನಡೆಸುತ್ತಿದ್ದಾರೆ. ಆದ್ದರಿಂದ ಉಪ್ಪಿ ರಾಜಕೀಯ ತೊಲಗಲಿ ಪ್ರಜಾಕೀಯ ಬರಲಿ ಎಂಬ  ಪೋಸ್ಟ್​ವೊಂದನ್ನು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಾರೆ  ಉಪೇಂದ್ರ ರಾಜಕೀಯ ಕನಸು ಇನ್ನು ಕಮರಲಿಲ್ಲ.  ಪಾಲಿಟಿಕ್ಸ್​ನಿಂದ ದೂರ ಸರಿದಿದ್ದಾರೆ ಉಪ್ಪಿ ಎನ್ನುತ್ತಿದ್ದವರಿಗೆ ಟ್ವಿಟ್ಟರ್​ ಮೂಲಕ ಉತ್ತರ ಕೊಡುತ್ತಿದ್ದಾರೆ. ರಾಜಕೀಯದ ನಡೆ ಬಗ್ಗೆ ಭಿನ್ನವಾಗಿ ಯೋಚಿಸ್ತಿರೋ ಉಪ್ಪಿ ಪ್ರಜಾಕೀಯದ ಮೂಲಕ, ಜನಸಾಮಾನ್ಯರಿಗೆ ಅಧಿಕಾರ, ಭ್ರಷ್ಟಾಚಾರ ಮುಕ್ತ, ಜನಪರ ಅಭಿವೃದ್ಧಿ,ಜನ ಕಾರ್ಯ ಮಾಡುವ ಯೋಜನೆಗಳು ಉಪೇಂದ್ರ  ಮನಸ್ಸಿನಲ್ಲಿವೆ. ಆದರೆ ಮುಂದೆ ಎಷ್ಟರಮಟ್ಟಿಗೆ ಉಪ್ಪಿ ಪ್ರಜಾಕೀಯದ ಕನಸು ನನಸಾಗುತ್ತೋ ಎಂದು ಕಾದು ನೋಡಬೇಕಿದೆ.

ಅವರು ಮಾಡಿರುವ ಪೋಸ್ಟ್​ ಮುಖಾಂತರ ರಾಜಕೀಯ ಮಾಡುತ್ತಿರುವ ನಾಯಕರ ಸಹವಾಸ ಬಿಡಿ, ಪ್ರಜಾಕೀಯ ಸೇರಿ ಎಂಬ ಮೆಸೇಜ್​  ಪಾಸ್​ ಆಗ್ತಿರೋದಂತೂ ಸತ್ಯ.

Please follow and like us:
0
http://bp9news.com/wp-content/uploads/2018/05/fIf_6b2U_400x400-1.jpghttp://bp9news.com/wp-content/uploads/2018/05/fIf_6b2U_400x400-1-150x150.jpgBP9 Bureauಪ್ರಮುಖಸಿನಿಮಾಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ರಾಜಕೀಯ ಸೇರಿದ ಮೇಲೆ ಅನೇಕ ಏಳು-ಬೀಳುಗಳನ್ನು ಕಂಡರು. ಪ್ರಜಾಕೀಯ ಮಾಡುತ್ತೀನಿ ಅಂತಾ ಹೊರಟು ‘ಕೆಪಿಜೆಪಿ’ ಸೇರಿ ಆ ನಂತರ ಹೊರ ಬಂದಿದ್ದು ಹಳೇ ವಿಚಾರ. ಸದ್ಯ ರಾಜಕೀಯವನ್ನು ತೊರೆದು ಸಿನಿ ಜರ್ನಿ ಆರಂಭಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ರಾಜಕೀಯ ಪದಕ್ಕೆ ಹೊಸ ಅರ್ಥ ಹುಡುಕಿದ್ದಾರೆ. ರಾಜಕೀಯ ಹೈಡ್ರಾಮ ತಣ್ಣಗಾಗುತ್ತಲೇ ಉಪ್ಪಿ ಮತ್ತೆ ಪ್ರಜಾಕೀಯದ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ಬುದ್ಧಿವಂತ ಉಪೇಂದ್ರಪ್ರಜಾಕೀಯ  ಪಕ್ಷವನ್ನು ನೊಮದಣಿ ಮಾಡಿಸಿದ್ದಾರೆ....Kannada News Portal