ಬೆಂಗಳೂರು : ಕಳೆದ 50 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೇನೆ. 11 ಬಾರಿ ಸತತವಾಗಿ ಗೆದ್ದಿದ್ದೇನೆ. ಆದರೆ..ನನಗೆಷ್ಟು ನೋವಿರಬಾರದು ..?ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಮುಖ್ಯಮಂತ್ರಿ ಸ್ಥಾನ ಸಿಗದೇ ಇರುವ ಕುರಿತು ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪರೋಕ್ಷವಾಗಿ ನೋವು ಹೊರ ಹಾಕಿದರು.

ಬೀದರ್​​ ನ ಗಣೇಶ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಅಸಮಾಧಾನಗೊಂಡ ಸಚಿವ ಸ್ಥಾನ ವಂಚಿತರಿಗೆ ಕಿವಿ ಮಾತು ಹೇಳಿದರು.

ಶಾಸಕರಾದ ಈಶ್ವರ್ ಖಂಡ್ರೆ, ರಹಿಂ ಖಾನ್, ಬಿ. ನಾರಾಯಣರಾವ್ ಸಚಿವ ಸ್ಥಾನ ಸಿಗದಿದ್ದಕ್ಕೆ ನಿರಾಶರಾಗಿ ನೋವು ಮಾಡಿಕೊಳ್ಳಬಾರದು ಎಂದು ತಮ್ಮ ಅನುಭವ ಹಂಚಿಕೊಂಡರು.

”ಈವರೆಗೆ ಒಟ್ಟು 11 ಬಾರಿ ಗೆದ್ದಿದ್ದೇನೆ. ಇನ್ನೊಂದು ಬಾರಿ ಲೋಕಸಭೆಗೆ ಟ್ರೈ ಮಾಡುವೆ. ಏನಾಗುತ್ತದೋ ನೊಡೋಣ ”ಎಂದೂ ಇದೇ ವೇಳೆ ಹೇಳಿದ ಖರ್ಗೆ, ದೇಶದ ಸಂವಿಧಾನ ಬಚಾವೋ ಹೋರಾಟ ಮುಂದುವರಿಯಲಿ,ಲೋಕಸಭೆಯ ಚುನಾವಣೆಯ ಕಾಂಗ್ರೆಸ್ನ ಗುರಿಯೂ ಸಂವಿಧಾನ ಉಳಿಸುವುದೇ ಆಗಿದೆ ಎಂದು ತಿಳಿಸಿದರು.

Please follow and like us:
0
http://bp9news.com/wp-content/uploads/2018/06/kharge-1.gifhttp://bp9news.com/wp-content/uploads/2018/06/kharge-1-150x150.gifPolitical Bureauಪ್ರಮುಖರಾಜಕೀಯ11 times consecutive victory,50 years old,politics,should not be hurt! : Unhappy exit cost !!!ಬೆಂಗಳೂರು : ಕಳೆದ 50 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೇನೆ. 11 ಬಾರಿ ಸತತವಾಗಿ ಗೆದ್ದಿದ್ದೇನೆ. ಆದರೆ..ನನಗೆಷ್ಟು ನೋವಿರಬಾರದು ..?ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಮುಖ್ಯಮಂತ್ರಿ ಸ್ಥಾನ ಸಿಗದೇ ಇರುವ ಕುರಿತು ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪರೋಕ್ಷವಾಗಿ ನೋವು ಹೊರ ಹಾಕಿದರು. ಬೀದರ್​​ ನ ಗಣೇಶ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ್...Kannada News Portal