ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಕಠುವಾ ಹಾಗೂ ಸಾಂಬಾ ವಲಯಗಳಲ್ಲಿ ಪಾಕಿಸ್ತಾನಿ ಪಡೆ ನಡೆಸಿದ ಶೆಲ್‌ ದಾಳಿಗೆ ಬುಧವಾರ ಐವರು ನಾಗರಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ.  ರಮ್ಜಾನ್‌ ಕದನ ವಿರಾಮ ಘೋಷಣೆ ನಡುವೆಯೂ ಕಳೆದ 9 ದಿನಗಳಿಂದ ಪಾಕಿಸ್ತಾನ ಸತತ ಶೆಲ್‌ ದಾಳಿ ಮುಂದುವರಿಸಿದ್ದು, ಭಾರತವೂ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ.

ಬುಧವಾರ ಬೆಳಿಗ್ಗೆ 9 ಗಂಟೆ ವೇಳೆ ಸಾಂಬಾದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಪಡೆ ನಾಗರಿಕ ಪ್ರದೇಶಗಳ ಜತೆಗೆ ಕಠುವಾ, ಹಿರಾನಗರ ವಲಯಗಳಲ್ಲಿ ಹೆಚ್ಚು ಶೆಲ್‌ ದಾಳಿ ಹಾಗೂ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರು ನಾಗರಿಕರ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಮುಂಜಾನೆ ಆರ್‌.ಎಸ್‌. ಪುರ, ಅರ್ನಿಯಾ,ಬಿಷ್ನಾದಲ್ಲಿ ನಡೆಸಲಾದ ಶೆಲ್‌ ದಾಳಿಯಲ್ಲಿ ಒಟ್ಟು ಇಬ್ಬರು ಬಲಿಯಾಗಿದ್ದಾರೆ. ದಾಳಿಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

ಶೆಲ್‌ ದಾಳಿ ಮುಂದುವರೆದ ಹಿನ್ನೆಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ. ನಿರಾಶ್ರಿತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿಕೊಡಲಾಗಿದೆ. ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗ್ರೆನೇಡ್‌ ದಾಳಿ: 10 ಜನರಿಗೆ ಗಾಯ :

ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಗೋರಿವನ್‌ ಚೌಕ್‌ ಬಳಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರರು ಎಸೆದ ಗ್ರೆನೇಡ್‌ ಜನಸಂದಣಿ ಪ್ರದೇಶದಲ್ಲಿ ಸ್ಫೋಟಿಸಿದ್ದು, ನಾಗರಿಕರು ಗಾಯಗೊಂಡಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಘಟನೆ ನಡೆದ ಸ್ಥಳವನ್ನು ಸುತ್ತುವರಿದು ಉಗ್ರರಿಗಾಗಿ ಶೋಧ ನಡೆಸಿದವಾದರೂ, ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Please follow and like us:
0
http://bp9news.com/wp-content/uploads/2018/05/ES-image-2.jpghttp://bp9news.com/wp-content/uploads/2018/05/ES-image-2-150x150.jpgPolitical Bureauತಂತ್ರಜ್ಞಾನಪ್ರಮುಖರಾಜಕೀಯರಾಷ್ಟ್ರೀಯPoor Pakistani Panther in the border !!! : 5 civilians killedಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಕಠುವಾ ಹಾಗೂ ಸಾಂಬಾ ವಲಯಗಳಲ್ಲಿ ಪಾಕಿಸ್ತಾನಿ ಪಡೆ ನಡೆಸಿದ ಶೆಲ್‌ ದಾಳಿಗೆ ಬುಧವಾರ ಐವರು ನಾಗರಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ.  ರಮ್ಜಾನ್‌ ಕದನ ವಿರಾಮ ಘೋಷಣೆ ನಡುವೆಯೂ ಕಳೆದ 9 ದಿನಗಳಿಂದ ಪಾಕಿಸ್ತಾನ ಸತತ ಶೆಲ್‌ ದಾಳಿ ಮುಂದುವರಿಸಿದ್ದು, ಭಾರತವೂ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. ಬುಧವಾರ ಬೆಳಿಗ್ಗೆ 9 ಗಂಟೆ ವೇಳೆ ಸಾಂಬಾದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. 6 ಮಂದಿ...Kannada News Portal