ಶೀರೂರು ಮಠ ಶ್ರೀಗಳ ನಿಗೂಢ ಸಾವು ಶಿಷ್ಯರಲ್ಲಿ, ಭಕ್ತಾದಿಗಳಲ್ಲಿ  ದು:ಖಮನೆಮಾಡಿದೆ. ಅವರ ಹಠಾತ್ ಸಾವಿನಿಂದಾಗಿ ಇಂದು ಮಠದಲ್ಲಿ ಕತ್ತಲಾವರಿಸಿದೆ, ಇದರ ನಡುವಯೇ ಶ್ರೀಗಳ ಮೇಲೆ ಸಾಕಷ್ಟು ವಿವಾದಗಳು ಆರೋಪಗಳು ಕೇಳಿಬರುತ್ತಿವೆ. ಉಡುಪಿ ಜಿಲ್ಲಾಧಿಕಾರಿ.ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಕುರಿತು ತನಿಖೆ ಆರಂಭಿಸುವಂತೆ ಆದೇಶವನ್ನು ನೀಡಿದ್ದಾರೆ. ಮೇಲ್ನೋಟಕ್ಕೆ  ಇವರ ಸಾವು ವಿಷ ಸೇವನೆಯಿಂದಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ತನಿಖೆ ಮುಗಿದ ನಂತರವಷ್ಟೇ ಸತ್ಯಾ ಬಯಲಿಗೆ ಬರಲು ಸಾಧ್ಯ. ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಿದ್ದಾಂತಗಳು, ವೈಚಾರಿಕ  ಚಿಂತನೆಗಳು, ಕ್ರಾಂತಿಕಾರಿ ಕೆಲಸಗಳು ಅವರ ಆಸಕ್ತಿಯ ಕ್ಷೇತ್ರಗಳ  ಈ ವೆಲ್ಲದರ ಕುರಿತಾಗಿ ಒಂದು ಸಣ್ಣವರದಿ.

ಪೋಜೆ, ಕೈಂಕರ್ಯ, ಪೀಠ, ಧರ್ಮದ ಮಾರ್ಗದರ್ಶನದ ನಡುವೆ, ಭಿನ್ನಾ ಆಸಕ್ತಿಗಳನ್ನು ಹೊಂದಿದ್ದ ಶ್ರೀಗಳು.

ಶ್ರೀಗಳು ಖ್ಯಾತ ಡ್ರಮ್ಮರ್ ಜೊತೆ  ಡ್ರಮ್ಸ್ ನುಡಿಸಿ ಸುದ್ದಿಯಾಗಿದ್ದರು

ಲಕ್ಷ್ಮೀವರ ತೀರ್ಥ ಸ್ವಾಮೀಗಳಿಗೆ ನೀರಿನಲ್ಲಿ ಯೋಗ ಮತ್ತು ಈಜಾಡುವ ಆಸಕ್ತಿ ಹೊಂದಿದ್ದರು. ಅವರು ವಿದೇಶಿಗರಿಗೆ ಯೋಗವನ್ನು ಕಲಿಸಿಕೊಟ್ಟ ಸ್ವಾಮಿ. ನೀರಲ್ಲಿ ಯೋಗ ಜಲಯೋಗದಿಲ್ಲಿ ಸಾಧನೆ ಮಾಡಿದ ಅಪರೂಪದ ಶ್ರೀಗಳಾಗಿದ್ದರು.

 

 

 

 

 

 

 

 

 

ಕ್ರಾಂತಿಕಾರಿ ಮತ್ತು ಸಮಾಜಿಕ ಕಾರ್ಯಗಳ ತಮ್ಮನ್ನು ತೊಡಗಿಸಿಕೊಂಡಿದ್ದರು.  ಲಕ್ಷ್ಮೀವರ ತೀರ್ಥರು ಎಲ್ಲಾ ಧರ್ಮದವವರು ಒಂದೇ, ಎಲ್ಲಾ ಜಾತಿ,ಮತ,ಕುಲದವರನ್ನು ಒಟ್ಟುಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಶ್ರೀಗಳು ಇದಕ್ಕೆ ಪೂರ್ವಕವಾಗಿ ಎಲ್ಲಾ ಧರ್ಮಾದರ್ಶಿಗಳನ್ನು ಆಹ್ವಾನಿಸಿ ಸರ್ವಧರ್ಮ ಈದ್ ಆಚರಿಸಿದ ಕ್ರಾಂತಿಕಾರಿ ಸ್ವಾಮಿಜಿಗಳು. ಮಡಿವಂತಿಕೆಯನ್ನು ಮರೆತು ಎಲ್ಲಾ ಧರ್ಮದ ಗುರುಗಳ ಜೊತೆ ವೇದಿಕೆಹಂಚಿಕೊಳ್ಳುವ ಮುಖಾಂತರ ಸಮಾಜಕ್ಕೆ ದೊಡ್ಡ ಸಂದೇಶವನ್ನು ರವಾನಿಸಿದ್ದರು.

 

 

 

ಗೋರಾಧನೆ : ಶ್ರೀಗಳು ಗೋರಕ್ಷಣೆ ಮತ್ತು  ಗೋಪೂಜೆಗಳಲ್ಲಿ ಹೆಚ್ಚು ಆಸಕ್ತಿಹೊಂದಿದ್ದರು. ಅವರು ಗೋವುಗಳಿಗೆ ಆಹಾರವನ್ನು ಅವರೆ ನೀಡುತಿದ್ದರು, ಗೋವುಗಳ ಅರೋಗ್ಯ, ಅಹಾರ ಮತ್ತು ಅವುಗಳ ಹಾರೈಕೆಗಳಲ್ಲಿ ಸಾಕಷ್ಟು ಸಮಯ ಕಳೆಯುತಿದ್ದರು.

ಮಠದ ಸುತ್ತಾ –ಮುತ್ತಾ ಅಕ್ರಮವಾಗಿ ತರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ನೆಲಸಮ ಮಾಡಿಸಿದ್ದರು.

ಶ್ರೀಗಳು ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದರು ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದದ್ದರು
ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು ಆದರೆ ಹಲವು ಕಾರಣಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

 

 

 

Please follow and like us:
0
http://bp9news.com/wp-content/uploads/2018/07/shiivamani-and-shiruru-swamiji-jugal-bandhi-.wmv.jpeghttp://bp9news.com/wp-content/uploads/2018/07/shiivamani-and-shiruru-swamiji-jugal-bandhi-.wmv-150x150.jpegBP9 Bureauಆಧ್ಯಾತ್ಮಉಡುಪಿಉಡುಪಿ ಶ್ರೀ ಕೃಷ್ಣ ಮಠಪ್ರಮುಖಸದ್ಗುರು    ಶೀರೂರು ಮಠ ಶ್ರೀಗಳ ನಿಗೂಢ ಸಾವು ಶಿಷ್ಯರಲ್ಲಿ, ಭಕ್ತಾದಿಗಳಲ್ಲಿ  ದು:ಖಮನೆಮಾಡಿದೆ. ಅವರ ಹಠಾತ್ ಸಾವಿನಿಂದಾಗಿ ಇಂದು ಮಠದಲ್ಲಿ ಕತ್ತಲಾವರಿಸಿದೆ, ಇದರ ನಡುವಯೇ ಶ್ರೀಗಳ ಮೇಲೆ ಸಾಕಷ್ಟು ವಿವಾದಗಳು ಆರೋಪಗಳು ಕೇಳಿಬರುತ್ತಿವೆ. ಉಡುಪಿ ಜಿಲ್ಲಾಧಿಕಾರಿ.ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಕುರಿತು ತನಿಖೆ ಆರಂಭಿಸುವಂತೆ ಆದೇಶವನ್ನು ನೀಡಿದ್ದಾರೆ. ಮೇಲ್ನೋಟಕ್ಕೆ  ಇವರ ಸಾವು ವಿಷ ಸೇವನೆಯಿಂದಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ತನಿಖೆ ಮುಗಿದ ನಂತರವಷ್ಟೇ ಸತ್ಯಾ ಬಯಲಿಗೆ ಬರಲು ಸಾಧ್ಯ....Kannada News Portal