ಬೆಂಗಳೂರು : ಹುಬ್ಬಳ್ಳಿಯಲ್ಲಿ ಪೊಲೀಸ್ ಪೇದೆಯೋರ್ವ ರಾಜ್ಯ ಸರ್ಕಾರ ವಿರುದ್ಧದ ಫೋಸ್ಟ್ ಅನ್ನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎಂ ಎನ್ ನಾಗರಾಜ್ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಸೇವೆಯಲ್ಲಿದ್ದವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ ಹಾಗೂ ಧರ್ಮದ ಪರ ಹಾಗೂ ವಿರುದ್ಧ ಕೆಲಸ ಮಾಡಬಾರದು. ಆದರೆ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನ್ ಎಂಬಾತ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಫೋಸ್ಟ್ ಶೇರ್ ಮಾಡಿದ ಪರಿಣಾಮ ಅಮಾನತುಗೊಂಡಿದ್ದಾರೆ.

ಇನ್ನು ‘ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ’ ಎಂಬ ಪೋಸ್ಟ್ ಶೇರ್ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿಗೆ ಅವಮಾನ ಮಾಡಿದ್ದಾನೆ. ಮುಖ್ಯಮಂತ್ರಿಗಳೇ 18 ದಿನ ಕಳೆದ್ರು ಸಾಲ ಮನ್ನಾ ಮಾಡಿಲ್ಲ, ರಾಜೀನಾಮೆ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ್ದು ಅಲ್ಲದೆ ಕಾಂಗ್ರೆಸ್- ಜೆಡಿಎಸ್ ವಿರುದ್ಧ ಅಪಪ್ರಚಾರದ ಪೋಸ್ಟ್ ಶೇರ್ ಮಾಡಿದ್ದು, ಪೇದೆಯ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Please follow and like us:
0
http://bp9news.com/wp-content/uploads/2018/06/kumarswami-2-1.jpghttp://bp9news.com/wp-content/uploads/2018/06/kumarswami-2-1-150x150.jpgPolitical Bureauಪ್ರಮುಖರಾಜಕೀಯPosted in Face Book Against CM !!! : Pardon suspension !!!ಬೆಂಗಳೂರು : ಹುಬ್ಬಳ್ಳಿಯಲ್ಲಿ ಪೊಲೀಸ್ ಪೇದೆಯೋರ್ವ ರಾಜ್ಯ ಸರ್ಕಾರ ವಿರುದ್ಧದ ಫೋಸ್ಟ್ ಅನ್ನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎಂ ಎನ್ ನಾಗರಾಜ್ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ ಹಾಗೂ ಧರ್ಮದ ಪರ ಹಾಗೂ ವಿರುದ್ಧ ಕೆಲಸ ಮಾಡಬಾರದು. ಆದರೆ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನ್...Kannada News Portal