ಕಾಸ್ಟಿಂಗ್​ ಕೌಚ್​ ವಿರುದ್ಧ ತೆಲುಗು  ಇಂಡಸ್ಟ್ರಿಯಲ್ಲಿ ದಿನಕ್ಕೊಂದು ಹೊಸ ಸುದ್ದಿ ಹೊr ಬೀಳುತ್ತಲೇ ಇದೆ. ನಟಿ ಶ್ರೀ ರೆಡ್ಡಿ ಮಾಡಿದ ಪ್ರತಿಭಟನೆ ಇದೀಗ  ವರ್ಕ್​ಔಟ್​ ಆದಂತೆ ಕಾಣುತ್ತಿದೆ. ಕಾಸ್ಟಿಂಗ್​ ಕೌಚ್​ ತೆಲುಗಿನಲ್ಲಿ ಇಲ್ಲವೆನ್ನುತ್ತಿದ್ದವರು ಇದೀಗ  ಕಣ್ ಕಣ್​ ಬಿಡುವಂತಾಗಿದೆ. ಅಂದಹಾಗೇ  ಕಾಸ್ಟಿಂಗ್​ ಕೌಚ್​ ನಲ್ಲಿ ಭಾಗೀಯಾಗಿರುವ ದೊಡ್ಡ ದೊಡ್ಡ ಸ್ಟಾರ್​ಗಳ ಮುಖಗಳು ಬಯಲಾಗುತ್ತಿರುವುದು ಮಾತ್ರ ಶಾಕಿಂಗ್​…..

ಒಬ್ಬರ ನಂತರ ಒಬ್ಬೊಬ್ಬರ ಅಚ್ಚರಿಯ ಸಂಗತಿಗಳು  ಬಯಲಿಗೆ ಬರುತ್ತಿವೆ. ಅಂದಹಾಗೇ ನಟ ಶ್ರೀಕಾಂತ್​, ನಿರ್ಮಾಪಕನ ಮಗ ಅಭಿರಾಮ್​, ನಿರ್ಮಾಪಕ ಅಪ್ಪಾರಾವ್​, ನಿರ್ದೇಶಕ ಮಹೇಶ್​ ಕತ್ತಿ, ನಟ ರಾಜಶೇಖರ್​ ಹೀಗೆ ಇನ್ನಿತರ  ಅನೇಕರ  ಮೇಲೆ ಗಂಭೀರವಾದ ಆರೋಪಗಳು   ಕೇಳಿ  ಬರುತ್ತಿದ್ದು ಸದ್ಯ ತೆಲುಗಿನ ಬಿಗ್​ಸ್ಟಾರ್​ , ರಾಜಕಾರಣಿ ಪವನ್​ ಕಲ್ಯಾಣ್​ ಮೇಲೆ ಇದೀಗ ಬಿಗ್​  ನ್ಯೂಸ್​ ಒಂದು  ಕೇಳಿ ಬರುತ್ತಿದೆ.

ಪವನ್​ ಕಲ್ಯಾಣ್​ ಬಗ್ಗೆ  ನಟಿಯೊಬ್ಬರು ಶಾಕ್​  ಆಗುವಂತಹ ಆರೋಪವೊಂದನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೇ  ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಸಿನಿಮಾ ಮಾಡಿದ್ದೇ ಕಡಿಮೆ. ಅದರಲ್ಲೂ ಅವರ ಸಿನಿಮಾಗಳು ಯಶಸ್ಸು ಕಂಡಿದ್ದೇ ಕಡಿಮೆ.  ನಾವು ಅಂದುಕೊಂಡಂತೆ ಪವನ್​ಕಲ್ಯಾಣ್​ ಅಲ್ಲ, ಅವರ ಬಗ್ಗೆ  ನಾನು ಹೇಳ್ತೀನಿ  ಕೇಳಿ ಎಂದು ಅವರ ಬಗ್ಗೆ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.  ಪವನ್​ಕಲ್ಯಾಣ್​ ಬಂಗಾಳಿ ಹುಡುಗಿಯರಿಂದ ಮಸಾಜ್​ ಮಾಡಿಸಿಕೊಳ್ಳುತ್ತಾರೆ,  ನಾವಂದುಕೊಂಡಂತೆ ಅವರಿಲ್ಲ ಎಂದು ಹೇಳುವುದರ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ. ರಾಜಕಾರಣಿಯಾಗಿ ದುಡ್ಡು ಮಾಡಿದ್ದಾರೆ ಅಷ್ಟೆ, ಅಭಿಮಾನಿಗಳಿಗಾಗಿ ಅವರು ಏನು ಮಾಡಿದ್ದಾರೆ ಹೇಳಿ ಎಂದರು. ಅದೇ ಅಭಿಮಾನಿಗಳನ್ನು ಬಳಸಿಕೊಂಡು  ರಾಜಕೀಯ ಮಾಡುತ್ತಿದ್ದಾರೆ ಪವನ್​ ಕಲ್ಯಾಣ್​.

ಅಮರಾವತಿಯಲ್ಲಿ ಅದ್ಧೂರಿ ಮನೆ ಮಾಡಿಕೊಂಡಿದ್ದಾರೆ.  ಅವರು ಸಿನಿಮಾದಲ್ದಲಿನ್ನೆಲ್ಲಾ ಸಂಪಾದನೆ ಮಾಡಿಲ್ಲ, ದುಡ್ಡು ಮಾಡಿದ್ದು ರಾಜಕೀಯದಲ್ಲಿ ಶೋಕಿ ಮಾಡಿ  ಜೀವನ ಮಾಡುತ್ತಿದ್ದಾರೆ. ಜನರಿಂದ ಓಟು ಹಾಕಿಸಿಕೊಂಡು ಯಾವ ರಾಜಕೀಯ ಮಾಡುತ್ತಿದ್ದಾರೆ ಹೇಳಿ ಎಂದು ಆಕ್ರೋಶವ್ಯತಕ್ತಪಡಿಸಿದ್ದಾರೆ.

ಇನ್ನೂ ಮುಂದುವರಿದು ಮಾತನಾಡುತ್ತಾ ಶೃತಿ ತೆಲುಗಿನಲ್ಲಿ ಕೆಲ ಕುಟುಂಬಗಳಲ್ಲಿ  ಹೀರೋಗಳು ಆಗುವ ಯಾವ ಮುಖಲಕ್ಷಣವೂ ಇಲ್ಲ, ಆದರೆ ಅವರೆಲ್ಲಾ ಹೀರೋಗಳು ಆಗಿ ಮೆರೆಯುತ್ತಿದ್ದಾರೆ.  ಅಲ್ಲು ಅರವಿಂದ್​, ಸುರೇಶಬಾಬು ಇನ್ನತರರ ಕುಟುಂಬದವರೇ ಹೀರೋಗಳು ಎಂದು ಬಹಿರಂಗವಾಗಿ ಹೇಳಿದ್ದಾರೆ. ಮುಖನಾ.? ಮೂವತ್ತು ನಾಲವತ್ತು ಸರಿ ಸರ್ಜರಿ ಮಾಡಿಕೊಂಡ್ರು ಹೀರೋ ರೀತಿ ಇಲ್ಲ. ಒಬ್ಬನಾದರೂ ಹೈಟ್ ಇದ್ದಾರ.? ಆದ್ರೂ, ಅವರ ಮಕ್ಕಳೇ ಹೀರೋಗಳು. ಬೇರೆ ಯಾರೂ ಅವಕಾಶ ಸಿಗಲ್ಲ ಎಂದು ತಮ್ಮ ಆಕ್ರೋಶವನ್ನ ಶ್ರುತಿ ಹೊರಹಾಕಿದ್ದಾರೆ.

ಕೋತಿಗಳೆಲ್ಲವೂ ಹೀರೋ, ನಾವು ಹೀರೋಯಿನ್ ಆಗಲ್ಲ.! ಕೋತಿಗಳಂತಿರುವ ಮಕ್ಕಳೆಲ್ಲ ಹೀರೋಗಳು ಆಗ್ತಾರೆ. ಆದ್ರೆ, ತೆಲುಗು ಹುಡುಗಿಯರು ಮಾತ್ರ ನಾಯಕಿ ಆಗಬಾರದು. ಇಲ್ಲಿ ಎಲ್ಲವೂ ಅರಿಯಿಲ್ಲ. ಜನಗಳಿಗೆ ಗೊತ್ತಾಗಿದೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಏನು, ಅಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಅರಿವಾಗಿದೆ ಎಂದು ತಮ್ಮ ನೋವನ್ನ ತೋಡಿಕೊಂಡರು.


ಒಟ್ಟಾರೆ ಕಾಸ್ಟಿಂಗ್​ ಕೌಚ್​ ಹಗರಣದಲ್ಲಿ ಅನೇಕ ಸ್ಟಾರ್​ ಹೆಸರುಗಳು ಬಯಲಾಗುತ್ತಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಭಾರೀ ಸುದ್ದಿಯಲ್ಲಿರುವ ಟಾಲಿವುಡ್​ ಕಾಸ್ಟಿಂಗ್​ ಭೂತ ಎಲ್ಲಿಗೆ  ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/04/collage-1-20-1024x768.jpghttp://bp9news.com/wp-content/uploads/2018/04/collage-1-20-150x150.jpgBP9 Bureauಸಿನಿಮಾಕಾಸ್ಟಿಂಗ್​ ಕೌಚ್​ ವಿರುದ್ಧ ತೆಲುಗು  ಇಂಡಸ್ಟ್ರಿಯಲ್ಲಿ ದಿನಕ್ಕೊಂದು ಹೊಸ ಸುದ್ದಿ ಹೊr ಬೀಳುತ್ತಲೇ ಇದೆ. ನಟಿ ಶ್ರೀ ರೆಡ್ಡಿ ಮಾಡಿದ ಪ್ರತಿಭಟನೆ ಇದೀಗ  ವರ್ಕ್​ಔಟ್​ ಆದಂತೆ ಕಾಣುತ್ತಿದೆ. ಕಾಸ್ಟಿಂಗ್​ ಕೌಚ್​ ತೆಲುಗಿನಲ್ಲಿ ಇಲ್ಲವೆನ್ನುತ್ತಿದ್ದವರು ಇದೀಗ  ಕಣ್ ಕಣ್​ ಬಿಡುವಂತಾಗಿದೆ. ಅಂದಹಾಗೇ  ಕಾಸ್ಟಿಂಗ್​ ಕೌಚ್​ ನಲ್ಲಿ ಭಾಗೀಯಾಗಿರುವ ದೊಡ್ಡ ದೊಡ್ಡ ಸ್ಟಾರ್​ಗಳ ಮುಖಗಳು ಬಯಲಾಗುತ್ತಿರುವುದು ಮಾತ್ರ ಶಾಕಿಂಗ್​..... ಒಬ್ಬರ ನಂತರ ಒಬ್ಬೊಬ್ಬರ ಅಚ್ಚರಿಯ ಸಂಗತಿಗಳು  ಬಯಲಿಗೆ ಬರುತ್ತಿವೆ. ಅಂದಹಾಗೇ ನಟ ಶ್ರೀಕಾಂತ್​,...Kannada News Portal