ಪವರ್​ ಸ್ಟಾರ್​  ಪುನೀತ್​ ರಾಜ್​ಕುಮಾರ್​ ಕನ್ನಡ  ಪಾಲಿಗೆ ರಾಜಕುಮಾರ. ಸ್ಯಾಂಡಲ್​ವುಡ್​ನಲ್ಲಿ ಪವರ್​ ಸ್ಟಾರ್​  ಸಿನಿಮಾಗಳು ಅಂದ್ರೆ ಅದು ಶತದಿನ ಕಾಣೋದಂತೂ ನಿಜ ಎನ್ನುವ ಮಾತುಗಳಿವೆ. ಅಪ್ಪು ಒಬ್ಬ  ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಯಾಂಡಲ್​ವುಡ್​ನಲ್ಲಿ ಕಮಾಲ್​ ಮಾಡಿದ ಪವರ್​ಸ್ಟಾರ್​ ಇದೀಗ ಟಾಲಿವುಡ್​ ಸ್ಟಾರ್​ ಆಗಿದ್ದಾರೆ.  ರಾಜ್​ ಕುವರ ಅಪ್ಪು ಕನ್ನಡ  ಬಿಟ್ಟು  ಬೇರೆ ಯಾವ ಭಾಷೆಯಲ್ಲೂ  ನಟಿಸಿಲ್ಲ. ರಾಜ್​ ಆದಿಯಾಗಿ  ಶಿವಣ್ಣ, ಪುನೀತ್​, ರಾಘಣ್ಣ ಇದೂವರೆಗೂ ಕನ್ನಡ ಹೊರತಾಗಿ ಯಾವ ಭಾಷೆಯಲ್ಲೂ ನಟಿಸಿಲ್ಲ. ರಾಜ್​ ಬದುಕಿದ್ದಾಗ್ಲೂ ಇದೇ ಹೇಳುತ್ತಿದ್ದರು, ನನ್ನ ಉಸಿರು, ನನ್ನ ನಟನೆ ಎರಡೂ ಕನ್ನಡಕ್ಕೆ ಸೀಮಿತವಾಗಿವೆ ಎಂದು, ಅದೆಷ್ಟೋ ಬೇರೆ ಭಾಷೆಯಿಂದ ಸಿನಿಮಾ ಆಫರ್​ಗಳು ಬಂದ್ರೂ ರಾಜ್​ ಮಾತ್ರ ಹೋಗಲಿಲ್ಲ.  ಅದಕ್ಕಾಗಿಯೇ ಇಮದಿಗೂ ಎಂದೆಂದಿಗೂ ಡಾ. ರಾಜ್​ ರನ್ನು ಕನ್ನಡದ ನಟ ಸಾರ್ವಭೌಮ ಅಂತಾನೇ ಕರೆಯುತ್ತಾರೆ. ಆದರೆ ಅಪ್ಪು ಸಿನಿಮಾಗಳು ಟಾಲಿವುಡ್​ಗೆ ಡಬ್​ ಆಗುತ್ತಿವೆಯೇ ವಿನಹ ಪವರ್​ ಸ್ಟಾರ್​ ಮಾತ್ರ  ಬೇರೆ ಭಾಷೆಗಳಲ್ಲಿ ಇದೂವರೆಗೂ ನಟಿಸಿಲ್ಲ. ಆದರೆ ಇದೇನಿದು ಇದ್ದಕ್ಕಿದ್ದಂಗೆ  ಪವರ್​ಸ್ಟಾರ್​ ಟಾಲಿವುಡ್​ನತ್ತ ಪ್ರಯಾಣ ಮಾಡ್ತಿರೋದು ಅಂತಾ ಗಾಬರಿಗೊಂಡಿದ್ದೀರಾ…?

 ಇದೀಗ ಅಪ್ಪು ಟಾಲಿವುಡ್​ಗೆ ಎಂಟ್ರಿಕೊಡ್ತಿದ್ದಾರಾ ಅಂತಾ ಪ್ರಶ್ನಿಸುತ್ತಿದ್ದಾರೆ ಅಭಿಮಾನಿಗಳು. ಅಂದ  ಹಾಗೇ  ಕನ್ನಡಿಗರಿಗೋಸ್ಕರ ಟಾಲಿವುಡ್​  ಗೆ ಎಂಟ್ರಿ  ಆಗ್ತಿದ್ದಾರೆ.  ಅಪ್ಪುಗೆ   ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಫ್ಯಾನ್​ ಇದ್ದಾರೆ.ಕರ್ನಾಟಕದಲ್ಲಿ ಅಲ್ಲದೇ ಟಾಲಿವುಡ್​ನಲ್ಲಿ ಪವರ್​ ಹವಾ ಕಾಣಿಸಿಕೊಳ್ಳೋದಿಕ್ಕೆ  ಆರಂಭವಾಗ್ತಿದೆ. ಸ್ವಲ್ಪ ತಡೀರಿ, ಕನ್ನಡಾಭಿಮಾನಿ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​, ಟಾಲಿವುಡ್​ಗೆ ಎಂಟ್ರಿಯಾಗ್ತರೋದು ಇದಕ್ಕಾಗಿ.

ಪವರ್ ಸ್ಟಾರ್​ ಪುನೀತ್​​ ಅಲ್ಲಿ ನಟಿಸ್ತಾ ಇಲ್ಲ, ಹಾಡ್ತಾ ಇಲ್ಲ ಬದಲಾಗಿ ಅವರ ಆಡಿಯೋ ಕಂಪನಿ ಪಿ ಆರ್​ ಕೆ  ಆಡಿಯೋ ಎಂಎಂಸಿಹೆಚ್​ ಸಿನಿಮಾದ ಹಾಡುಗಳ ಮೂಲಕ ಟಾಲಿವುಡ್​ ಆಡಿಯೋ ಮಾರ್ಕೆಟಿಂಗ್​ ಎಂಟ್ರಿ ಕೊಡ್ತಾ ಇದೆ.

ಮುಸ್ಸಂಜೆ ಮಹೇಶ್​  ಆ್ಯಕ್ಷನ್​ ಕಟ್​ ಹೇಳ್ತಾ  ಇರೋ ಎಂಎಂಸಿಎಚ್​ ತೆಲುಗಿನಲ್ಲಿ  ರಿಯಲ್​ ದಂಡುಪಾಳ್ಯಂ ಹೆಸರಿನಲ್ಲಿ ಡಬ್​ ಆಗಿ ರಿಲೀಸ್​ ಆಗ್ತಾ ಇದೆ. ಈ ಚಿತ್ರದ ಡಬ್​ ಹಾಡುಗಳು ಹಾಗೂ ಟ್ರೈಲರ್​ನಲ್ಲೂ ಕೂಡ ಪುನೀತ್​ ರಾಜ್​ಕುಮಾರ್ ​ಅವರ ಪಿಆರ್​ಕೆ ಆಡಿಯೋ ಕಂಪನಿ ರಿಲೀಸ್​ ಮಾಡ್ತಾ ಇದೆ. ಸದ್ಯ ಆಡಿಯೋ ಕಂಪನಿ ಟಾಲಿವುಡ್​ಗೆ ಎಂಟ್ರಿ ಕೊಡ್ತಾ ಇರೋದು ರಾಜ್​ ಅವರ  ಹೆಗ್ಗಳಿಕೆ.

Please follow and like us:
0
http://bp9news.com/wp-content/uploads/2018/06/dc-Cover-8v4tardd7mamak9e9fi2b2s950-20160915123720.Medi_-3.jpeghttp://bp9news.com/wp-content/uploads/2018/06/dc-Cover-8v4tardd7mamak9e9fi2b2s950-20160915123720.Medi_-3-150x150.jpegBP9 Bureauಸಿನಿಮಾಪವರ್​ ಸ್ಟಾರ್​  ಪುನೀತ್​ ರಾಜ್​ಕುಮಾರ್​ ಕನ್ನಡ  ಪಾಲಿಗೆ ರಾಜಕುಮಾರ. ಸ್ಯಾಂಡಲ್​ವುಡ್​ನಲ್ಲಿ ಪವರ್​ ಸ್ಟಾರ್​  ಸಿನಿಮಾಗಳು ಅಂದ್ರೆ ಅದು ಶತದಿನ ಕಾಣೋದಂತೂ ನಿಜ ಎನ್ನುವ ಮಾತುಗಳಿವೆ. ಅಪ್ಪು ಒಬ್ಬ  ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಯಾಂಡಲ್​ವುಡ್​ನಲ್ಲಿ ಕಮಾಲ್​ ಮಾಡಿದ ಪವರ್​ಸ್ಟಾರ್​ ಇದೀಗ ಟಾಲಿವುಡ್​ ಸ್ಟಾರ್​ ಆಗಿದ್ದಾರೆ.  ರಾಜ್​ ಕುವರ ಅಪ್ಪು ಕನ್ನಡ  ಬಿಟ್ಟು  ಬೇರೆ ಯಾವ ಭಾಷೆಯಲ್ಲೂ  ನಟಿಸಿಲ್ಲ. ರಾಜ್​ ಆದಿಯಾಗಿ  ಶಿವಣ್ಣ, ಪುನೀತ್​, ರಾಘಣ್ಣ ಇದೂವರೆಗೂ ಕನ್ನಡ...Kannada News Portal