ಬೆಂಗಳೂರು: ಸರ್ಕಾರ ಟೇಕಾಫ್ ಆಗುವ ಮೊದಲೆ ಹಲವಾರು ಹೊಸ ಸಮಸ್ಯೆಗಳು ಸಿಎಂ ಕುಮಾರಸ್ವಾಮಿ ಅವರ ಎದುರಿಗಿದೆ. ಕಾಂಗ್ರೆಸ್ ಪಕ್ಷದ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ಒಂದು ಕಡೆಯಾದರೆ ಮತ್ತೊಂದು ಕಡೆ ಜೆಡಿಎಸ್ ಸಮಸ್ಯೆಗಳನ್ನೂ  ನಿಬಾಯಿಸಬೇಕಿದೆ. ದಿನಕಳೆದಂತೆ ಸಿಎಂ ಮನೆಯಲ್ಲೆ ರಾಜಕೀಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಕುಮಾರಸ್ವಾಮಿ ರಾಮನಗರ,ಚನ್ನಪಟ್ಟಣದಿಂದ ಗೆಲುವು ಸಾಧಿಸಿದ್ದು, ಅದರಲ್ಲಿ ಚನ್ನಪಟ್ಟಣ ಉಳಿಸಿಕೊಂಡು, ರಾಮನಗರವನ್ನ ಬಿಟ್ಟಿದ್ದಾರೆ. ಆದ್ದರಿಂದ ಈಗ ರಾಮನಗರಕ್ಕೆ ಚುನಾವಣೆ ನಡೆಯಲಿದೆ. ಈಗ ರಾಮನಗರ ಕ್ಷೇತ್ರದಿಂದ  ರೇವಣ್ಣ  ಅವರ ಪುತ್ರ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯಲು ಸಿದ್ದರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕುಮಾರಸ್ವಾಮಿ ಅವರನ್ನು ಮತ್ತೆ ಚಿಂತೆಗೀಡುಮಾಡಿದೆ.

ರಾಮನಗರ ಕ್ಷೇತ್ರದಿಂದ  ವಿಧಾನಸಭೆ ಪ್ರವೇಶಕ್ಕೆ ಪ್ರಜ್ವಲ್ ಪಟ್ಟುಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ  ಅನಿತಾ ಕುಮಾರಸ್ವಾಮಿ ಅವರಿಗೆ ಕ್ಷೇತ್ರ ದೊರೆಯಲಿದೆ ಎಂಬ ನಿರೀಕ್ಷೆ ಹುಸಿಯಾಗುವ  ಲಕ್ಷಣವಿದೆ. ನಿಜಕ್ಕೂ ಇದು ಕೇವಲ ಕುಮಾರಸ್ವಾಮಿ  ಅವರಿಗೆ ಮಾತ್ರವಲ್ಲ ದೇವೇಗೌಡರಿಗೂ ಸವಾಲಾಗಿದೆ. ಇದನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ರಾಮನಗರ ವಿಷಯ ಗೌಡರ ಕುಟುಂಬದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯವನ್ನು ಕಾಡುತ್ತಿದೆ. ಈ ನಡುವೆ ಅಂಬರೀಶ್ ಅವರಿಗೆ ಕ್ಷೇತ್ರ  ಬಿಟ್ಟುಕೊಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಆದರೆ ಕೌಟುಂಬಿಕ ಘಟನಾವಳಿಗಳು ಅವಕಾಶ  ಮಾಡಿಕೊಡಲಿದೆಯೇ  ಎಂಬುದು ಪಕ್ಷದ ನಾಯಕರನ್ನೂ  ಕಾಡುತ್ತಿರು ಪ್ರಶ್ನೆ.

 

Please follow and like us:
0
http://bp9news.com/wp-content/uploads/2018/06/collage-19.jpghttp://bp9news.com/wp-content/uploads/2018/06/collage-19-150x150.jpgBP9 Bureauಪ್ರಮುಖರಾಜಕೀಯರಾಮನಗರಬೆಂಗಳೂರು: ಸರ್ಕಾರ ಟೇಕಾಫ್ ಆಗುವ ಮೊದಲೆ ಹಲವಾರು ಹೊಸ ಸಮಸ್ಯೆಗಳು ಸಿಎಂ ಕುಮಾರಸ್ವಾಮಿ ಅವರ ಎದುರಿಗಿದೆ. ಕಾಂಗ್ರೆಸ್ ಪಕ್ಷದ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ಒಂದು ಕಡೆಯಾದರೆ ಮತ್ತೊಂದು ಕಡೆ ಜೆಡಿಎಸ್ ಸಮಸ್ಯೆಗಳನ್ನೂ  ನಿಬಾಯಿಸಬೇಕಿದೆ. ದಿನಕಳೆದಂತೆ ಸಿಎಂ ಮನೆಯಲ್ಲೆ ರಾಜಕೀಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕುಮಾರಸ್ವಾಮಿ ರಾಮನಗರ,ಚನ್ನಪಟ್ಟಣದಿಂದ ಗೆಲುವು ಸಾಧಿಸಿದ್ದು, ಅದರಲ್ಲಿ ಚನ್ನಪಟ್ಟಣ ಉಳಿಸಿಕೊಂಡು, ರಾಮನಗರವನ್ನ ಬಿಟ್ಟಿದ್ದಾರೆ. ಆದ್ದರಿಂದ ಈಗ ರಾಮನಗರಕ್ಕೆ ಚುನಾವಣೆ ನಡೆಯಲಿದೆ. ಈಗ ರಾಮನಗರ ಕ್ಷೇತ್ರದಿಂದ  ರೇವಣ್ಣ  ಅವರ ಪುತ್ರ ಪ್ರಜ್ವಲ್...Kannada News Portal