ಸಿನಿಟಾಕ್​ :   ರಾಜ್ಯ ವಿಧಾನ  ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಹೊಸ ಸರ್ಕಾರ ರಚನೆ ಅತಂತ್ರವಾಗಿದೆ. ಇನ್ನು ಬಿಜೆಪಿಯನ್ನು ಟೀಕಿಸುತ್ತಿದ್ದ  ಪ್ರಕಾಶ್​ ರೈ  ಚುನಾವಚಣೆಯ ದಿನ  ಹತ್ತಿರ ಬರುತ್ತಿದ್ದಂತೆ ಕಾಣೆಯಾಗಿಬಿಟ್ಟಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಫಲಿತಾಂಶದಲ್ಲಿ ಸಿಂಗಲ್​ ಲಾರ್ಜೆಸ್ಟ್​ ಪಕ್ಷವಾಗಿ ಬಿಜೆಪಿ ಗೆಲುವು ಪಡೆದುಕೊಂಡಿದೆ.  ಈ ಸಮಯದಲ್ಲಿ ಪ್ರಕಾಶ್​  ರೈ ಎಲ್ಲೋ ತಲೆ ಮರೆಸಿಕೊಂಡಿದ್ದಾರೆ ಎಂದವರಿಗೆ  ಇದೀಗ ಪ್ರಕಾಶ್​ ರೈ  ಟ್ವಿಟ್ಟರ್​ ಮೂಲಕ ನಾನು ಎಲ್ಲೂ ಹೋಗಿಲ್ಲ, ರೈ ಇಲ್ಲಿದ್ದಾರೆ ಎಂದು   ಹೇಳುತ್ತಿದ್ದಾರೆ.

ಮೋದಿಯನ್ನು, ಬಿಜೆಪಿಯನ್ನು ಕಾಲೆಳೆಯುತ್ತಿದ್ದ  ರೈ ಟ್ವೀಟ್​ ಮೂಲಕ  ಟಾಂಗ್​ ಕೊಟ್ಟಿದ್ದಾರೆ. ಅವರ ಟ್ವೀಟ್​ ನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ  ಸರ್ಕಾರ ರಚಿಸಲು ಆಗಲ್ಲ, ಇನ್ನು ಆಟ ಮುಗಿದಿಲ್ಲ. ಅಷ್ಟೇ ಅಲ್ಲದೇ ಮುಂದಿನ ದಿನದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನ ಕಾದು ನೋಡಿ ಎಂದು ಕಿಡಿಕಾರಿದ್ದಾರೆ.

” ಕರ್ನಾಟಕ ಚುನಾವಣೆ ನೋಡುತ್ತಿದ್ದೇನೆ…, ಬಿಜೆಪಿಯ ಆಟ, ಹಣ ಬಲ, ತೋಳು ಬಲದಿಂದ ಅಧಿಕಾರ ಹಿಡಿಯಲು ಹೋದ್ರಿ. ಆದ್ರೆ, ಸರ್ಕಾರ ನಡೆಸಲು ಬೇಕಾದ ಬಹುಮತ ನಿಮಗೆ ಸಿಗಲಿಲ್ಲ. ಈಗ ಎರಡು ಪಕ್ಷಗಳು ಒಟ್ಟಿಗೆ ಬಂದಿವೆ. ಪ್ರೀತಿಯ ನಾಗರೀಕರೇ ಆಟ ಇನ್ನು ಮುಗಿದಿಲ್ಲ” ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಕುದುರೆ ವ್ಯಾಪರ ನೋಡುವುದು ಮಾತ್ರ ಬಾಕಿ ”ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ರಾಜ್ಯಪಾಲರಿಗೆ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯಪಾಲರು ಕೂಡ ಅವಕಾಶ ಕೊಟ್ಟಿದ್ದಾರೆ. (ಅಭ್ಯರ್ಥಿಗಳನ್ನ ಸೆರೆಹಿಡಿಯಲು ಚಾಣಕ್ಯ ಬರ್ತಿದ್ದಾರೆ) ಚಾಣಕ್ಯನ ಪ್ರತಿಭೆಯನ್ನ ವರ್ಣಿಸಲು ಕೆಲವು ಮಾಧ್ಯಮಗಳು ಸಿದ್ಧವಾಗಿದೆ. ಇನ್ನು ಪ್ರಜೆಗಳಿಗೆ ‘ಕುದುರೆ ವ್ಯಾಪರ’ ನೋಡುವುದು ಮಾತ್ರ ಕೆಲಸ ಎಂದು ಪ್ರಕಾಶ್ ರೈ  ಹೇಳಿದ್ದರೆ.


‘ಈ ನಾಚಿಕೇಡಿನ ರಾಜಕೀಯ ನಾಟಕವನ್ನ ನೋಡಿ, ನಾನೀಗ ಕೈಗೊಂಡಿರುವ ತೀರ್ಮಾನವೇನೆಂದರೆ, ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಪರವಾಗಿ ನಾನು ‘justasking’ ಎಂದು ಪ್ರಶ್ನಿಸಲು ಮುಂದಾಗುತ್ತೇನೆ. ಇದೇ ವೇಳೆ ಜೋಕರ್ ಗಳ ನಿಜಬಣ್ಣ ಬಯಲಾಗಲಿದೆ. ನೋಡುತ್ತಾ ಖುಷಿಪಡಿ” ಎಂದು ತಿಳಿಸಿದ್ದಾರೆ.

ಪ್ರಕಾಶ್ ರೈ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನ ಬೆಂಬಿಲಿಸಿದ್ದರು. ಆದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಹಿನ್ನೆಡೆ ಅನುಭವಿಸಿದೆ. ಹೀಗಿದ್ದರೂ, ಜೆಡಿಎಸ್ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಯಶಸ್ವಿಯಾಗುತ್ತಾ.? ಅಥವಾ ಬಿಜೆಪಿಯ ಗೇಮ್ ಪ್ಲ್ಯಾನ್ ಗೆ ಮೈತ್ರಿ ಉಡೀಸ್ ಆಗುತ್ತಾ.? ಇದೆಲ್ಲರ ಜೊತೆಗೆ ರೈ ಮುಂದಿನ ನಡೆ ಹೇಗಿರುತ್ತೆ ಎಂಬುದು ಕೂಡ ಭಾರಿ ಕುತೂಹಲ ಮೂಡಿಸಿದೆ.

”ನೀವು ಎಚ್ಚರವಾಗದೇ, justasking ಎಂದು ಪ್ರತಿ ರಾಜಕಾರಣಿಗಳನ್ನ ಮತ್ತು ರಾಜಕೀಯ ಪಕ್ಷಗಳನ್ನ ಕೇಳದಿದ್ದರೆ ನಿಮ್ಮ ಜನಾದೇಶಕ್ಕೆ ಬೆಲೆ ಇಲ್ಲದಂತಾಗುತ್ತೆ. ಆಮೇಲೆ ನಾವು ಪ್ರಜೆಗಳಾಗಿರುವ ಬದಲು ಕೇವಲ ವೀಕ್ಷಕರಾಗಿ ಮಾತ್ರ ಉಳಿಯುತ್ತೇವೆ”

Please follow and like us:
0
http://bp9news.com/wp-content/uploads/2018/05/prakash_raj.jpghttp://bp9news.com/wp-content/uploads/2018/05/prakash_raj-150x150.jpgBP9 Bureauಪ್ರಮುಖರಾಜಕೀಯಸಿನಿಮಾಸಿನಿಟಾಕ್​ :   ರಾಜ್ಯ ವಿಧಾನ  ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಹೊಸ ಸರ್ಕಾರ ರಚನೆ ಅತಂತ್ರವಾಗಿದೆ. ಇನ್ನು ಬಿಜೆಪಿಯನ್ನು ಟೀಕಿಸುತ್ತಿದ್ದ  ಪ್ರಕಾಶ್​ ರೈ  ಚುನಾವಚಣೆಯ ದಿನ  ಹತ್ತಿರ ಬರುತ್ತಿದ್ದಂತೆ ಕಾಣೆಯಾಗಿಬಿಟ್ಟಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಫಲಿತಾಂಶದಲ್ಲಿ ಸಿಂಗಲ್​ ಲಾರ್ಜೆಸ್ಟ್​ ಪಕ್ಷವಾಗಿ ಬಿಜೆಪಿ ಗೆಲುವು ಪಡೆದುಕೊಂಡಿದೆ.  ಈ ಸಮಯದಲ್ಲಿ ಪ್ರಕಾಶ್​  ರೈ ಎಲ್ಲೋ ತಲೆ ಮರೆಸಿಕೊಂಡಿದ್ದಾರೆ ಎಂದವರಿಗೆ  ಇದೀಗ ಪ್ರಕಾಶ್​ ರೈ  ಟ್ವಿಟ್ಟರ್​ ಮೂಲಕ ನಾನು ಎಲ್ಲೂ...Kannada News Portal