ಬೆಂಗಳೂರು: ರಾಜಕೀಯ  ಟೆನ್ಶನ್​ ಕಡಿಮೆ ಆದ್ರೂ  ಪ್ರಥಮ್​   ಮಾತನಾಡುವುದನ್ನು ಮಾತ್ರ ಬಿಡುವುದಿಲ್ಲ.  ಎಂ ಎಲ್​ ಎ ಆಗಿರುವ ಒಳ್ಳೆ ಹುಡುಗ ಪ್ರಥಮ್​  ಮೈಕ್​ ಹಿಡಿದು ಮಾತನಾಡುತ್ತಿದ್ದಾರೆ ಎಲ್ಲಿ ಗೊತ್ತಾ…?

ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಬಗ್ಗೆ  ಪ್ರತೀ ದಿನ ನೂರಾರು ಸೆಲೆಬ್ರಿಟಿಗಳು, ಗಣ್ಯರು ಒಂದಿಲ್ಲೊಂದು ಕಮೆಂಟ್​ ಮಾಡುತ್ತಲೇ ಇದ್ದಾರೆ.   ಆದರೆ ಬಿಗ್​ಬಾಸ್​ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್​ ಮಾತ್ರ ಗಾಂಧೀನಗರದಲೆಲ್ಲಾ ನಾನು MLA ಅಂತಾ ಹೇಳ್ಕೊಂಡು  ತಿರುಗ್ತಾ ಇದ್ದಾರೆ. ಅಂದಹಾಗೇ ಇವರಿಗೇನಪ್ಪಾ  ಆಯ್ತು..? ರಾಜ್ಯದಲ್ಲಿನ ಎಂಎಲ್​ಎ ಗಳಿಗೂ ನಮ್ಮ ಬಿಗ್​ಬಾಸ್​ ಪ್ರಥಮ್ಗೂ ಸಂಬಂಧ ಏನಾದ್ರೂ ಇದ್ಯಾ ಅಂತ ಯೋಚಿಸ್ತಿದ್ದೀರಾ…?

ಪ್ರಥಮ್​ ಎಂಎಲ್​ಎ ಆಗಿರೋದಂತೂ ನಿಜ. ಆದರೆ ರಾಜ್ಯ ರಾಜಕಾರಣದಲ್ಲಿ ಅಲ್ಲ. ಬದಲಾಗಿ ಚಂದನವನದಲ್ಲಿ. ಮೈಕ್​ ಹಿಡಿದು ಭಾಷಣ ಮಾಡುತ್ತಾ  ಜನರನ್ನ ರಂಜಿಸೋದಕಕ್ಕೆ ಆರಂಭ ಮಾಡ್ತಿದ್ದಾರಂತೆ ಪ್ರಥಮ್​. ನಾನೇ ಎಂಎಲ್​ಎ ಅನ್ನೋ ಹವಾ ಗಾಂಧಿನಗರದಲ್ಲಿ ಜೋರಾಗುತ್ತಿದೆ. ಕನ್​ಫ್ಯೂಸ್​ ಆಗದೇ ಸುದ್ದಿ ಓದಿ.

ಪ್ರಥಮ್ ಅಭಿನಯಿಸುತ್ತಿರುವ ಸಿನಿಮಾ ಹೆಸರು ಎಂಎಲ್‍ಎ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಂಎಲ್‍ಎ ಚಿತ್ರ ತನ್ನದೇ ಚಾಪನ್ನು ಸಿನಿ ಅಂಗಳದಲ್ಲಿ ಹುಟ್ಟುಹಾಕಿದೆ. ಭಾಗಶಃ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಸ್ಯ ಕಥೆಯನ್ನು ಹೊಂದಿರುವ ಎಂಎಲ್‍ಎ(ಮದರ್ ಪ್ರಾಮೀಸ್ ಲೆಕ್ಕಕ್ಕಿಲ್ಲದ ಆಸಾಮಿ) ಚೆನ್ನಾಗಿ ಮೂಡಿಬಂದಿದೆ ಅಂತಾ ಚಿತ್ರತಂಡ ತಿಳಿಸಿದೆ. ಸಾಮಾನ್ಯ ಹುಡುಗನ ತುಂಟಾಟ, ಚೇಷ್ಠೆಗಳು ಎಲ್ಲವನ್ನು ಹೊತ್ತುಕೊಂಡು ಎಂಎಲ್‍ಎ ರೂಪದಲ್ಲಿ ಪ್ರಥಮ್ ಚಿತ್ರದಲ್ಲಿ ಕಾಣಸಿಗುತ್ತಾರೆ. ಎಂಎಲ್‍ಎ ಆಗಬೇಕಾದವನು ಏನು ಆಗುತ್ತಾನೆ ಎಂಬುವುದು ಚಿತ್ರದ ತಿರುಳು. ಸ್ಪರ್ಶ ಖ್ಯಾತಿಯ ರೇಖಾ ಸಹ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಆಡಿಯೋ ಹಕ್ಕುಗಳನ್ನು PRK ಸ್ಟುಡಿಯೋ ಖರೀದಿಸಿದೆ. ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ಬಂಡವಾಳ ಹಾಕಿದ್ರೆ, ಆರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಕೃಷ್ಣ ಸಾರಥಿ ಛಾಯಾಗ್ರಹಣವನ್ನ ಹೊಂದಿದ್ದು, ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/pratham2-14-1505379876.jpghttp://bp9news.com/wp-content/uploads/2018/05/pratham2-14-1505379876-150x150.jpgBP9 Bureauಸಿನಿಮಾಬೆಂಗಳೂರು: ರಾಜಕೀಯ  ಟೆನ್ಶನ್​ ಕಡಿಮೆ ಆದ್ರೂ  ಪ್ರಥಮ್​   ಮಾತನಾಡುವುದನ್ನು ಮಾತ್ರ ಬಿಡುವುದಿಲ್ಲ.  ಎಂ ಎಲ್​ ಎ ಆಗಿರುವ ಒಳ್ಳೆ ಹುಡುಗ ಪ್ರಥಮ್​  ಮೈಕ್​ ಹಿಡಿದು ಮಾತನಾಡುತ್ತಿದ್ದಾರೆ ಎಲ್ಲಿ ಗೊತ್ತಾ...? ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಬಗ್ಗೆ  ಪ್ರತೀ ದಿನ ನೂರಾರು ಸೆಲೆಬ್ರಿಟಿಗಳು, ಗಣ್ಯರು ಒಂದಿಲ್ಲೊಂದು ಕಮೆಂಟ್​ ಮಾಡುತ್ತಲೇ ಇದ್ದಾರೆ.   ಆದರೆ ಬಿಗ್​ಬಾಸ್​ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್​ ಮಾತ್ರ ಗಾಂಧೀನಗರದಲೆಲ್ಲಾ ನಾನು MLA ಅಂತಾ ಹೇಳ್ಕೊಂಡು  ತಿರುಗ್ತಾ ಇದ್ದಾರೆ. ಅಂದಹಾಗೇ...Kannada News Portal