ನವದೆಹಲಿ : ವಾಸ್ತು ತಜ್ಞರ ಸಲಹೆಯ ಮೇರೆಗೆ ನವೀಕರಣಗೊಂಡ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಶುಕ್ರವಾರ ತೆರಳಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಸಂಬಂಧಿಕರೊಂದಿಗೆ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ನೆರವೇರಿಸಿದರು.

10 ತಿಂಗಳಿಂದ ಸರ್ಕಾರಿ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದ್ದುದರಿಂದ, ಕರ್ನಾಟಕ ಭವನದಲ್ಲೇ ದೇವೇಗೌಡರು ವಾಸ್ತವ್ಯ ಹೂಡಿದ್ದರು. ಬಂಗಲೆಯ ಮುಖ್ಯ ಬಾಗಿಲು, ದೇವರ ಮನೆ, ಅಡುಗೆ ಮನೆ, ಮಲಗುವ ಕೊಠಡಿ, ಅತಿಥಿಗಳ ಕೊಠಡಿ ಸೇರಿದಂತೆ ಬಹುತೇಕ ಕೊಠಡಿಗಳ ಬಾಗಿಲು, ಕಿಟಕಿಗಳನ್ನು ಬೇರೆಡೆ ಜೋಡಿಸುವಂತೆ ವಾಸ್ತುತಜ್ಞರು ಸೂಚಿಸಿದ್ದರಿಂದ ನವೀಕರಣ ಮಾಡಲಾಗಿತ್ತು.

ತ್ರಿತೀಯರಂಗದ ಸಾರಥ್ಯ ವಹಿಸಿಕೊಳ್ಳುವುದರ ಹೊಸ್ತಿಲಲ್ಲಿ ನಿಂತಿರುವ ಮಾಜಿ ಪ್ರಧಾನಿ ದೇವೇಗೌಡರು, ಇದೀಗ ತಮ್ಮ ದೆಹಲಿ ನಿವಾಸವನ್ನು ವಾಸ್ತುಪ್ರಕರಾ ಮರು ನಿರ್ಮಾಣ ಮಾಡಿ ಹೋಮ ಹವನ ಮಾಡಿರುವುದು ರಾಜಕೀಯಕ್ಕೆ ತಳುಕು ಹಾಕಿಕೊಂಡಿದೆ ಎನ್ನಲಾಗುತ್ತಿದೆ.

Please follow and like us:
0
http://bp9news.com/wp-content/uploads/2018/10/devegowda.jpghttp://bp9news.com/wp-content/uploads/2018/10/devegowda-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯPrime Minister Agatha Deve Gowda again ??? Home in Delhi residenceನವದೆಹಲಿ : ವಾಸ್ತು ತಜ್ಞರ ಸಲಹೆಯ ಮೇರೆಗೆ ನವೀಕರಣಗೊಂಡ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಶುಕ್ರವಾರ ತೆರಳಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಸಂಬಂಧಿಕರೊಂದಿಗೆ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ನೆರವೇರಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal