ಬೆಂಗಳೂರು : ರೈತರಿಗಾಗಿಯೇ ಜೀವನ ಮುಡುಪಿಟ್ಟಿರುವ ಬಿಎಸ್​ ಯಡಿಯೂರಪ್ಪ ಅವರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಸ್ವಚ್ಚ, ಭ್ರಷ್ಟಚಾರ ಮುಕ್ತ ಆಡಳಿತ ಅನುಷ್ಠಾನವಾಗ ಬೇಕು. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ. ಕಾಂಗ್ರೆಸ್​ ಮುಕ್ತ ಭಾರತ ಅಭಿವೃದ್ಧಿಯ ಭಾರತ ಎಂದು ಬಿಸಿಲನಾಡು ಕಲಬುರ್ಗಿಯಲ್ಲಿ ಬಿಜೆಪಿ ಪರ ಬೃಹತ್ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರು ಸರ್ಕಾರದ ವಿರುದ್ಧ ಗುಡುಗಿ ಬಿಜೆಪಿಗೆ ಅಧಿಕಾರ ನೀಡಿ ಎಂದು ಕರೆ ನೀಡಿದ್ದಾರೆ.

ನಾವು ತೊಗರಿ ಬೆಳೆಗಾರರಿಗೆ ನಿರ್ಧಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿದ್ದೇವೆ. ರೈತರು ಬೆಳೆಯಲು ಖರ್ಚು ಮಾಡಿದ ಹಣಕ್ಕಿಂತ ಒಂದೂವರೆ ಪಟ್ಟು ಹೆಚ್ಚು ರೈತರಿಗೆ ಹಣ ಸಿಗಬೇಕು.  ರೈತರ ಜಮೀನಿಗೆ ಸಿಗಬೇಕಾದಷ್ಟು ನೀರು ಸಿಕ್ಕರೇ ರೈತರು ಭೂಮಿಯಿಂದ ಚಿನ್ನವನ್ನು ಬೆಳೆಯುತ್ತಾರೆ. ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಿಂದ ರಾಜ್ಯದ 14 ಲಕ್ಷ ರೈತರಿಗೆ ಅನುಕೂಲವಾಗಿದೆ. ಕರ್ನಾಟಕದ ಸಂಸದರು ಮತ್ತಷ್ಟು ರೈತರಿಗೆ ಫಸಲ್ ಭೀಮಾ ಯೋಜನೆ ತಲುಪುವಂತೆ ಮತ್ತು ಆ ಯೋಜನೆಯ ಮಹತ್ವವನ್ನು ಅರಿವಿಗೆ ತರಬೇಕು ಎಂದಿದ್ದಾರೆ.

ಇನ್ನು ನಾವು ಅಧಿಕಾರಕ್ಕೆ ಬಂದ ನಂತರ 40 ವರ್ಷದಿಂದ ತ್ರಿಶಂಕು ಸ್ಥಿತಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಹೆಕ್ಕಿತೆಗೆದಿದ್ದೇವೆ. ಈ ಯೋಜನೆಯ ಬಗ್ಗೆ ಆಯೋಗಗಳು ಹಿಂದಿನ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರದಿಂದ NDA ಸರ್ಕಾರದವರೆಗೂ ಆ ಶಿಫಾರಸ್ಸುಗಳನ್ನು ಏಕೆ ಜಾರಿ ಮಾಡಲಿಲ್ಲ. ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲ ಅಂದ್ರೆ ಸುಮ್ಮನಾದರೂ ಇರಿ. ಏಕೆ ಅಭಿವೃದ್ಧಿ ಮಾಡುತ್ತಿರುವವರ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಿಕೊಂಡು ಓಡಾಡುತ್ತಿದ್ದೀರಿ ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ದಲಿತರ ಹೆಸರಲ್ಲಿ ಕಾಂಗ್ರೆಸ್​ ಮತ ಕೇಳುತ್ತಿದೆ. ಆದರೆ ಖರ್ಗೆ ಅವರನ್ನು ಮಾತ್ರ ಸಿಎಂ ಮಾಡುತ್ತಿಲ್ಲ. ಕಳೆದ ಬಾರಿ ಗುಪ್ತ ಮತದಾನದ ಹೆಸರಿನಲ್ಲಿ ಖರ್ಗೆ ಹೆಸರನ್ನು ಪಕ್ಕಕ್ಕೆ ಸರಿಸಲಾಗಿತ್ತು. ದಲಿತರ ಅಭಿವೃದ್ಧಿ ಮಾಡುವುದಾಗಿ ವೋಟು ಕೇಳಿರುವ ಕಾಂಗ್ರೆಸ್ ಇದುವರೆವಿಗೂ ದಲಿತರ ಉದ್ಧಾರ ಮಾಡಿದ್ದಾರಾ..? ಎಂದು ಪ್ರಶ್ನಿಸಿದರ ಅವರು, ಬಿದರ್​ನಲ್ಲಿ ದಲಿತ ಯುವತಿಯ ಮೇಲೆ ದೌರ್ಜನ್ಯ ನಡೆದ ವಿಚಾರದ ಬಗ್ಗೆ ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ ಸಂಬಂಧಪಟ್ಟವರಿಗೆ ಮಾತ್ರ ನ್ಯಾಯ ದೊರೆತಿಲ್ಲ ಎಂದು ವಿಷಾಧಿಸಿದರು. ಇದರ ಜೊತೆಗೆ ಖರ್ಗೆ ಮತ್ತು ಅವರ ಕುಟುಂಬದ ಆಸ್ತಿ ಬಗ್ಗೆ ನಿಮಗೆ ಮಾಹಿತಿ ಇದೆಯೇ ಎಂದು ಮೋದಿ ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದಲಿತರು ಮತ್ತಷ್ಟು ಗೌರವದೊಂದಿಗೆ ಜೀವನ ನಡೆಸಲು, ಕಾನೂನಿಗೆ ಮತ್ತಷ್ಟು ಬಲ ತಂದಿದ್ದೇವೆ. ಕಾನೂನು ವ್ಯವಸ್ಥೆಯಲ್ಲಿ ಮತ್ತಷ್ಟು ವೇಗವನ್ನೂ ತಂದಿದ್ದೇವೆ. 1857 ರಿಂದ 1947ರ ವರೆಗೆ  ಸ್ವಾತಂತ್ರ ಹೋರಾಟದಲ್ಲಿ ಬುಡಗಟ್ಟು ಜನಾಂಗದ ಹೋರಾಟ ಮಹತ್ವವಾದುದು. ಆದರೆ ಆ ಸಮುದಾಯಕ್ಕೆ ಕಾಂಗ್ರೆಸ್ಸಿನ ಕೊಡುಗೆ ಏನು ಎಂದು ಕಿಡಿಕಾರಿದರು.

ಇದರೊಂದಿಗೆ ಕಲಬುರ್ಗಿಯಲ್ಲಿ ಇಂದು ನಡೆದ ಬಿಜೆಪಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿ ನನ್ನ ಪ್ರೀತಿಯ ಕನ್ನಡಿಗರೇ ನಿಮಗೆಲ್ಲ ನನ್ನ ನಮಸ್ಕಾರಗಳು ಎಂದರು. ಭಾಷಣದ ಅಂತ್ಯದಲ್ಲಿಯೂ ಕನ್ನಡದಲ್ಲಿಯೇ ಸ್ವಚ್ಚ ಭ್ರಷ್ಟ ಮುಕ್ತ ಆಡಳಿತ ಮಾಡಲು ಅವಕಾಶ ನೀಡಿ.  ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯನ್ನು ಮೊಳಗಿಸಿದರು.

ಸೈನಿಕರನ್ನು ಗೂಂಡಾ ಎಂದು ಕರೆದಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಓಟು ಹಾಕುತ್ತೀರಾ: 

ನೆಹರು ಅವರು ಕರ್ನಾಟಕದ ವೀರಪುತ್ರ ಫೀಲ್ಡ್‌ ಫಾರ್ಷಲ್ ಕಾರಿಯಪ್ಪ ಅವರನ್ನು ಗೂಂಡಾ ಎಂದು ಕರೆದಿದ್ದರು, ಅಂತಹ ಪಕ್ಷದವರಿಗೆ ನೀವು ಓಟು ಹಾಕುತ್ತೀರಾ? ಎಂದು ಮೋದಿ ಪ್ರಶ್ನಿಸಿದರು.ಕನೆಹರು ಸೇರಿದಂತೆ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಈ ವರೆಗೂ ಸೈನಿಕರಿಗೆ ಗೌರವ ಸಲ್ಲಿಸಿಯೇ ಇಲ್ಲ ಎಂದರು.

ಕಲ್ಬುರ್ಗಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಲ್ಲಳು ನಿರಾಕರಿಸಿದ್ದರು, ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು.ಅಂಥಾ ಪಟೇಲರನ್ನು ಕೂಡಾ ಕಾಂಗ್ರೆಸ್ ನೆನೆಸಿಕೊಳ್ಳುವ ಕೆಲಸ ಮಾಡಲಿಲ್ಲ ಅಂತಹವರಿಗೆ ಮತ ಹಾಕುತ್ತೀರಾ ಎಂದರು.

Please follow and like us:
0
http://bp9news.com/wp-content/uploads/2018/04/Modi-380-Reuters.jpghttp://bp9news.com/wp-content/uploads/2018/04/Modi-380-Reuters-150x150.jpgPolitical Bureauಕಲಬುರ್ಗಿಪ್ರಮುಖರಾಜಕೀಯPrime Minister Narendra Modi on air pollutionಬೆಂಗಳೂರು : ರೈತರಿಗಾಗಿಯೇ ಜೀವನ ಮುಡುಪಿಟ್ಟಿರುವ ಬಿಎಸ್​ ಯಡಿಯೂರಪ್ಪ ಅವರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಸ್ವಚ್ಚ, ಭ್ರಷ್ಟಚಾರ ಮುಕ್ತ ಆಡಳಿತ ಅನುಷ್ಠಾನವಾಗ ಬೇಕು. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ. ಕಾಂಗ್ರೆಸ್​ ಮುಕ್ತ ಭಾರತ ಅಭಿವೃದ್ಧಿಯ ಭಾರತ ಎಂದು ಬಿಸಿಲನಾಡು ಕಲಬುರ್ಗಿಯಲ್ಲಿ ಬಿಜೆಪಿ ಪರ ಬೃಹತ್ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರು ಸರ್ಕಾರದ ವಿರುದ್ಧ ಗುಡುಗಿ ಬಿಜೆಪಿಗೆ ಅಧಿಕಾರ ನೀಡಿ ಎಂದು ಕರೆ ನೀಡಿದ್ದಾರೆ. ನಾವು ತೊಗರಿ ಬೆಳೆಗಾರರಿಗೆ ನಿರ್ಧಿಷ್ಟ...Kannada News Portal