ಬೆಂಗಳೂರು: ಶತಮಾನದ ಮತ್ತೊಂದು ಮದುವೆಗೆ ಜಗತ್ತು ಸಾಕ್ಷಿಯಾಗಲಿದೆ. ಪ್ರಿನ್ಸ್ ಹ್ಯಾರಿ ಹಾಗೂ ಮೆಘನ್ ಮಾರ್ಕಲೆರ ಅದ್ಧೂರಿ  ವಿವಾಹ ನಾಳೆ ನಡೆಯಲಿದೆ. ಲಂಡನ್‌ನ ಥೇಮ್ಸ್‌ ನದಿಯ  ಪಶ್ಚಿಮ ಭಾಗದಲ್ಲಿರೋ ಸೆಂಟ್ ಜಾರ್ಜ್ ಚಾಪೆಲ್‌ನ  ವಿಂಡ್ಸರ್‌ ಕ್ಯಾಸೆಲ್‌ನಲ್ಲಿ ವಿವಾಹ  ಮಹೋತ್ಸವ ಹಮ್ಮಿಕೊಳ್ಳಲಾಗಿದೆ.  ಈ ಅರಮನೆ ಪ್ರಪಂಚದ ಅತ್ಯಂತ ಪುರಾತನ ಮತ್ತು ಅತಿದೊಡ್ಡ ಪಾರಂಪರಿಕ ಅರಮನೆ.  ಅಲ್ಲದೆ  ಅರಮತೆ ಮತ್ತೊಂದು ವಿಶೇಷತೆಯಿಂದ ಕೂಡಿದೆ. ಮಹಾರಾಣಿಯ ತಂದೆ-ತಾಯಿ ಹಾಗೂ ಸಹೋದರಿಯ ಮಾರ್ಗರೇಟ್‌ರ ಚಿತಾಭಸ್ಮವನ್ನು ಇದೇ ಅರಮನೆಯಲ್ಲಿ ಇಡಲಾಗಿದೆ.

ರಾಯಲ್‌ ವೆಡ್ಡಿಂಗ್‌ನ ಜವಾಬ್ದಾರಿಯನ್ನು ಬಂಕಿಗ್‌  ಹ್ಯಾಮ್‌ ಪ್ಯಾಲೆಸ್‌ನ  ಲಾರ್ಡ್‌ ಚೇಂಬರ್ಲೆನ್ಸ್ ಕಚೇರಿ ವಹಿಸಿಕೊಂಡಿದೆ.  ಆದ್ರೆ ಮೇಘನ್‌ ಮತ್ತು ಹ್ಯಾರಿ ಶೋನ ಲೀಡ್‌ ಮಾಡಲಿದ್ದಾರೆ. ಚರ್ಚ್‌ ಸರ್ವೀಸ್‌, ಮ್ಯೂಸಿಕ್‌,ಫ್ಲವರ್ಸ್‌, ಡೆಕಾರೇಷನ್‌, ಮತ್ತು ರಿಸ್ಯೆಪ್ಶನ್‌ ಖರ್ಚನ್ನು  ರಾಯಲ್‌ ಪ್ಯಾಮಿಲಿ ಪೇ ಮಾಡಲಿದೆ.  ಎಕ್ಸ್‌ಪರ್ಟ್‌ ಪ್ರಕಾರ ಈ ಮದುವೆ 9 ಕೋಟಿ ವೆಚ್ಚದ್ದಾಗಿದೆ. ವಿಂಡ್ಸರ್ ಡೀನ್ ಮತ್ತು ಡೇವಿಡ್‌, ಕ್ಯಾಂಟರ್‌ಬರಿ,  ಅರ್ಚಬಿಷಪ್‌ ಜಸ್ಟಿನ್‌ ವೆಲ್‌ ಬೈ  ಜೊತೆ ಎಪಿಸ್‌ ಕೋಪಲ್ ಚರ್ಚ್‌ನಲ್ಲಿ  ಮದುವೆ ಕಾರ್ಯ ನಿರ್ವಹಿಸಲಿದ್ದಾರೆ. ಎಪಿಸ್ಕೋಪಲ್‌ ಚರ್ಚ್‌ ಮುಖ್ಯಸ್ಥ ಮೈಕೆಲ್‌ ಬ್ರೂಸ್‌ ಕರ್ರಿ ಮದುವೆಯ  ಪ್ರಮಾಣ ಭೋದಿಸಲಿದ್ದಾರೆ.

Please follow and like us:
0
http://bp9news.com/wp-content/uploads/2018/05/stream_img.jpghttp://bp9news.com/wp-content/uploads/2018/05/stream_img-150x150.jpgBP9 Bureauಪ್ರಮುಖಬೆಂಗಳೂರು: ಶತಮಾನದ ಮತ್ತೊಂದು ಮದುವೆಗೆ ಜಗತ್ತು ಸಾಕ್ಷಿಯಾಗಲಿದೆ. ಪ್ರಿನ್ಸ್ ಹ್ಯಾರಿ ಹಾಗೂ ಮೆಘನ್ ಮಾರ್ಕಲೆರ ಅದ್ಧೂರಿ  ವಿವಾಹ ನಾಳೆ ನಡೆಯಲಿದೆ. ಲಂಡನ್‌ನ ಥೇಮ್ಸ್‌ ನದಿಯ  ಪಶ್ಚಿಮ ಭಾಗದಲ್ಲಿರೋ ಸೆಂಟ್ ಜಾರ್ಜ್ ಚಾಪೆಲ್‌ನ  ವಿಂಡ್ಸರ್‌ ಕ್ಯಾಸೆಲ್‌ನಲ್ಲಿ ವಿವಾಹ  ಮಹೋತ್ಸವ ಹಮ್ಮಿಕೊಳ್ಳಲಾಗಿದೆ.  ಈ ಅರಮನೆ ಪ್ರಪಂಚದ ಅತ್ಯಂತ ಪುರಾತನ ಮತ್ತು ಅತಿದೊಡ್ಡ ಪಾರಂಪರಿಕ ಅರಮನೆ.  ಅಲ್ಲದೆ  ಅರಮತೆ ಮತ್ತೊಂದು ವಿಶೇಷತೆಯಿಂದ ಕೂಡಿದೆ. ಮಹಾರಾಣಿಯ ತಂದೆ-ತಾಯಿ ಹಾಗೂ ಸಹೋದರಿಯ ಮಾರ್ಗರೇಟ್‌ರ ಚಿತಾಭಸ್ಮವನ್ನು ಇದೇ...Kannada News Portal