ಸ್ಯಾಂಡಲ್​ವುಡ್​ನಲ್ಲಿ ಕಿಚ್ಚ ಸುದೀಪ್​  ಸಿಕ್ಕಾಪಟ್ಟೆ  ಬ್ಯುಸಿ ಇದ್ದರೂ ಮನೆಯವರೊಟ್ಟಿಗೆ ಪ್ರವಾಸ ಹೋಗುವುದೆಂದರೆ ಅವರಿಗೆ ಬಲು ಇಷ್ಟವಂತೆ. ಈ ನಡುವೆ  ಸುದೀಪ್​ ಮಡದಿ ಮಾಧ್ಯಮದವರಿಗೆ ಸುದ್ದಿಯಾಗುತ್ತಿದ್ದಾರೆ. ಪ್ರಿಯಾ ಸುದೀಪ್​ ಕೆಲ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ.  ಇನ್ನು  ಸುದೀಪ್​ಗೆ ಹೊಸ ಕಾರು, ಬೈಕ್​, ತೆಗೆದುಕೊಳ್ಳುವ ಕ್ರೇಜ್​ ಇರುವಂತೆ ಮಡದಿ ಪ್ರಿಯಾಗೂ ಒಳ್ಳೊಳ್ಳೆ ಹವ್ಯಾಸಗಳಿವೆ ಎಂದು ಹೇಳುತ್ತಾರೆ ಕಿಚ್ಚ.  ಸುದೀಪ್​ ಮಡದಿ  ಪ್ರಿಯಾ ಸುದೀಪ್​ಗೆ  ಪ್ರವಾಸ ಮಾಡುವುದೆಂದರೆ ಇಷ್ಟ. ಅದರಲ್ಲಿಯೂ ಅಡ್ವೆಂಚರ್ಸ್​ ಪ್ರವಾಸ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ  ಹೇಳಿ. ಈ ಬಗ್ಗೆ ಪ್ರಿಯಾ ಸುದೀಪ್​ ತಮ್ಮ  ಟ್ವಿಟ್ಟರ್​ನಲ್ಲಿ ಅಪ್ಟೇಟ್​ ಮಾಡಿದ್ದಾರೆ. ಸುದ್ದಿ, ಮತ್ತು ಚಿತ್ರಗಳೇ ತಿಳಿಸುತ್ತವೆ ಪ್ರಿಯಾಗೆ ಈ ರೀತಿ ಪ್ರವಾಸ, ಟ್ರಕ್ಕಿಂಗ್ ಎಂದರೆ ಎಷ್ಟು ಇಷ್ಟ ಅಂತ​.

ಸಮ್ಮರ್​ ಹಾಲಿಡೇಸ್ ಗಾಗಿ ಸುದೀಪ್​  ತಮ್ಮ ಫ್ಯಾಮಿಲಿ ಜೊತೆ ಮಲೆಷಿಯಾ ಹೋಗಿ ಬಂದಿದ್ದು ನಮಗೆ  ಗೊತ್ತೇ ಇದೆ. ಟ್ರಕ್ಕಿಂಗ್ ಮಾಡಿದ ಅನುಭವ ಹಾಗೂ ಮೇಘಾಲಯದ ಸುಂದರ ತಾಣಗಳ ಬಗ್ಗೆ ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡದ್ದಾರೆ. ಅಲ್ಲದೇ ಈ ರೀತಿ ಹೋಗುವುದೆಂದರೆ ಕ್ರೇಜ್​ ಅಂತೆ ಪ್ರಿಯಾಗೆ.

ಕೆಲವು ದಿನಗಳ ಹಿಂದೆ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಹಿಮಾಲಯಕ್ಕೆ ಪ್ರವಾಸ ಹೋಗಿ ಬಂದಿದ್ದರು. ಒಟ್ಟಾರೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುತ್ತಾರೆ ಅದರಂತೆ ಪ್ರಿಯಾ ಸುದೀಪ್ ಜಗತ್ತಿನ ಸುಂದರ ತಾಣಗಳನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/DYjX8dOV4AA71Ub.jpghttp://bp9news.com/wp-content/uploads/2018/05/DYjX8dOV4AA71Ub-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನಲ್ಲಿ ಕಿಚ್ಚ ಸುದೀಪ್​  ಸಿಕ್ಕಾಪಟ್ಟೆ  ಬ್ಯುಸಿ ಇದ್ದರೂ ಮನೆಯವರೊಟ್ಟಿಗೆ ಪ್ರವಾಸ ಹೋಗುವುದೆಂದರೆ ಅವರಿಗೆ ಬಲು ಇಷ್ಟವಂತೆ. ಈ ನಡುವೆ  ಸುದೀಪ್​ ಮಡದಿ ಮಾಧ್ಯಮದವರಿಗೆ ಸುದ್ದಿಯಾಗುತ್ತಿದ್ದಾರೆ. ಪ್ರಿಯಾ ಸುದೀಪ್​ ಕೆಲ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ.  ಇನ್ನು  ಸುದೀಪ್​ಗೆ ಹೊಸ ಕಾರು, ಬೈಕ್​, ತೆಗೆದುಕೊಳ್ಳುವ ಕ್ರೇಜ್​ ಇರುವಂತೆ ಮಡದಿ ಪ್ರಿಯಾಗೂ ಒಳ್ಳೊಳ್ಳೆ ಹವ್ಯಾಸಗಳಿವೆ ಎಂದು ಹೇಳುತ್ತಾರೆ ಕಿಚ್ಚ.  ಸುದೀಪ್​ ಮಡದಿ  ಪ್ರಿಯಾ ಸುದೀಪ್​ಗೆ  ಪ್ರವಾಸ ಮಾಡುವುದೆಂದರೆ ಇಷ್ಟ. ಅದರಲ್ಲಿಯೂ ಅಡ್ವೆಂಚರ್ಸ್​ ಪ್ರವಾಸ ಮಾಡುವುದೆಂದರೆ...Kannada News Portal