ಮೈಸೂರು : ಬಡ್ತಿ ಮೀಸಲಾತಿ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣೆಗೆ ಒತ್ತಾಯಿಸಿ ಜೂ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಬಡ್ತಿ ಮೀಸಲಾತಿ ನಿಟ್ಟಿನಲ್ಲಿ ಸರ್ಕಾರ 2017ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯು ರದ್ದಾಗಿರುವಂತೆ ಬಿಂಬಿಸಲಾಗಿದ್ದು, ಅದರಂತೆ ಜೇಷ್ಠತೆ ಪಟ್ಟಿ ಪರಿಷ್ಕರಿಸಬೇಕೆಂದು ಕಳೆದ ಏಪ್ರಿಲ್ ನಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ವಿರೋಧಿಸಿ ಕೆಲವೊಂದು ಅಧಿಕಾರಿಗಳು ದಲಿತ ನೌಕರರಿಗೆ ಹಿಂಬಡ್ತಿ ನೀಡಲು ಮುಂದಾಗಿರುವುದು ಖಂಡನೀಯವೆಂದರು.

ಕಲಂ 77ರಡಿ ಬಡ್ತಿ ಮೀಸಲಾತಿ ತಿದ್ದುಪಡಿ ತಂದು ‘ಡಿ’ ಗ್ರೂಪ್ ನಿಂದ ಸರ್ಕಾರದ ಕಾರ್ಯದರ್ಶಿವರೆಗೂ ವಿಸ್ತರಿಸಬೇಕು, ಈ ನಿಟ್ಟಿನಲ್ಲಿ ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ಕಳಿಸಬೇಕು. ದೌರ್ಜನ್ಯ ತಡೆ ಕಾಯ್ದೆಯನ್ನು ಸಂವಿದಾನ ತಿದ್ದುಪಡಿ 117ರಡಿ ಲೋಕಸಭೆಯಲ್ಲಿ ಅಂಗೀಕರಿಸಬೇಕು, ದಲಿತ ವಿರೋಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ರಾಜ್ಯ ರಾಜಧಾನಿ ನಡೆಸುತ್ತಿರುವ ರ್ಯಾಲಿಯಲ್ಲಿ ಪ್ರತಿ ಜಿಲ್ಲೆಯಿಂದಲೂ 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದು ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.ನಾಯಕ ಸಮಾಜದ ದ್ಯಾವಪ್ಪ ನಾಯಕ, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲಿಯೂರು ಸೋಮಯ್ಯ ಗೋಷ್ಠಿಯಲ್ಲಿ ಇದ್ದರು.

 

Please follow and like us:
0
http://bp9news.com/wp-content/uploads/2018/06/jeshtathe-patti-dyavappa-nayaka.jpghttp://bp9news.com/wp-content/uploads/2018/06/jeshtathe-patti-dyavappa-nayaka-150x150.jpgBP9 Bureauಪ್ರಮುಖಮೈಸೂರು : ಬಡ್ತಿ ಮೀಸಲಾತಿ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣೆಗೆ ಒತ್ತಾಯಿಸಿ ಜೂ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಬಡ್ತಿ ಮೀಸಲಾತಿ ನಿಟ್ಟಿನಲ್ಲಿ...Kannada News Portal