ಬೆಂಗಳೂರು :  ರಾಜ್ಯಪಾಲರ ನಿರ್ಧಾರ ಖಂಡಿಸಿ ಕಾಂಗ್ರೆಸ್​-ಜೆಡಿಎಸ್​ ಜಂಟಿಯಾಗಿ  ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡಸಿವೆ. ಪ್ರತಿಭಟನೆಯಲ್ಲಿ ಉಭಯ ಪಕ್ಷಗಳ ಶಾಸಕರು,  ಹಿರಿಯ ಮುಖಂಡರು, ಮಾಜಿ ಮಂತ್ರಿಗಳು, ಕಾರ್ಯಕರ್ತರು ನೆರೆದಿದ್ದು, ಕೇಂದ್ರ ಮಾಜಿ ಸಚಿವ ಗುಲಾಂ ನಬಿ ಆಜಾದ್​, ಮಲ್ಲಿಕಾರ್ಜುನ್​  ಖರ್ಗೆ,ಹೆಚ್​. ಡಿ ದೇವೇಗೌಡ, ಸಿದ್ದರಾಮಯ್ಯ,  ಡಾ. ಜಿ ಪರಮೇಶ್ವರ್​ ,  ಹೆಚ್​ ಡಿ. ಕುಮಾರಸ್ವಾಮಿ. ಡಿಕೆ ಶಿವಕುಮಾರ    ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭಿಸಿರುವ ಮುಖಂಡರು ರಾಜ್ಯಪಾಲರ ಸಂವಿಧಾನ ವಿರೋಧಿ ಧೋರಣೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನೆಗೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ  ರಾಜ್ಯಪಾಲರ ಈ ನಡೆಯ ವಿರುದ್ಧ ಈಗಾಗಲೇ ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಿದ್ದೇವೆ. ಆದರೆ  ಗೊತ್ತಿದ್ದೂ  ಕೂಡ ರಾಜ್ಯಪಾಲರು ಈ ರೀತಿಯ ಧೋರಣೆ ತಾಳಬಾರದಿತ್ತು.  ಬಹುಸಂಖ್ಯೆಯಲ್ಲಿರುವ ಕಾಂಗ್ರೆಸ್​ ಮತ್ತು ಜೆಡಿಎಸ್​ ಗೆ ಸರ್ಕಾರ ರಚಿಸುವ ಅವಕಾಶ ಕಲ್ಪಿಸಿಕೊಡಬೇಕಾಗಿತ್ತು. ಇದೇ  ಬಿಜೆಪಿ ಸರ್ಕಾರ ಮೇಘಾಲಯ, ನಾಗಲ್ಯಾಂಡ್​, ಗೋವಾಗಳಲ್ಲಿ ಅಲ್ಲಿನ ರಾಜ್ಯಪಾಲರು ಏನು ನಿಯಮ ಅನುಸರಿಸಿದ್ದಾರೋ ಅದೇ ನಿಯಮವನ್ನು ಇಲ್ಲಿ ಅನುಸರಿಸ ಬೇಕಿತ್ತು. ಆದರೆ ನಮ್ಮ ರಾಜ್ಯಪಾಲರು ಸಂವಿಧಾನಕ್ಕೆ ಗೌರವ ಕೊಟ್ಟಿಲ್ಲ, ಅದಕ್ಕಾಗಿ ನಾವು ಪ್ರತಿಭಟನೆ ಮೂಲಕ ನಮ್ಮ  ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ  ಮಾತನಾಡಿದ ಡಿ.ಕೆ.ಸುರೇಶ್​ , ಆನಂದ್​ ಸಿಂಗ್​ ಹೊರತೂ ಪಡಿಸಿ ಎಲ್ಲಾ ಶಾಸಕರು ನಮ್ಮ ಬಳಿ ಇದ್ದಾರೆ.  ಬಿಜೆಪಿಯ ನರೇಂದ್ರ  ಮೋದಿ ಬಳಿ ಆನಂದ್​  ಸಿಂಗ್​ ಹೋಗಿದ್ದಾರೆ. ಅವರನ್ನ  ನಾವು ಸಂಪರ್ಕಿಸಿದ  ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಇದರಲ್ಲಿ ಯಾವುದೇ ಅನುಮಾನವಿಲ್ಲವೆಂದು  ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/2018_5largeimg15_Tuesday_2018_222452801.jpghttp://bp9news.com/wp-content/uploads/2018/05/2018_5largeimg15_Tuesday_2018_222452801-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ರಾಜ್ಯಪಾಲರ ನಿರ್ಧಾರ ಖಂಡಿಸಿ ಕಾಂಗ್ರೆಸ್​-ಜೆಡಿಎಸ್​ ಜಂಟಿಯಾಗಿ  ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡಸಿವೆ. ಪ್ರತಿಭಟನೆಯಲ್ಲಿ ಉಭಯ ಪಕ್ಷಗಳ ಶಾಸಕರು,  ಹಿರಿಯ ಮುಖಂಡರು, ಮಾಜಿ ಮಂತ್ರಿಗಳು, ಕಾರ್ಯಕರ್ತರು ನೆರೆದಿದ್ದು, ಕೇಂದ್ರ ಮಾಜಿ ಸಚಿವ ಗುಲಾಂ ನಬಿ ಆಜಾದ್​, ಮಲ್ಲಿಕಾರ್ಜುನ್​  ಖರ್ಗೆ,ಹೆಚ್​. ಡಿ ದೇವೇಗೌಡ, ಸಿದ್ದರಾಮಯ್ಯ,  ಡಾ. ಜಿ ಪರಮೇಶ್ವರ್​ ,  ಹೆಚ್​ ಡಿ. ಕುಮಾರಸ್ವಾಮಿ. ಡಿಕೆ ಶಿವಕುಮಾರ    ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಬೆಳಗ್ಗೆ 10...Kannada News Portal