ಪುದುಚೆರಿ: ಕೆರೈಕಲ್​ ಜಿಲ್ಲೆಯ ಸೆತುರಾ ಗ್ರಾಮದ ಕಿಂಡರ್​ ಗಾರ್ಟನ್​ ಖಾಸಗಿ ಶಾಲೆಯ ಬಾಲಕಿಯೊಬ್ಬಳ ಮೇಲೆ 42 ವರ್ಷದ ಕಾಮಾಂಧ ಮುಖ್ಯೋಪಾಧ್ಯಾಪಕ ಅತ್ಯಾಚಾರವೆಸಗಿದ್ದಾನೆ. ಹುಡುಗಿಯ ಮೇಲೆ ದೌರ್ಜನ್ಯವೆಸಗಿರುವ ಮುಖ್ಯೋಪಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪಿಕ್ಕಿರಿಸ್ವಾಮಿ, ಸೆತುರಾ ಗ್ರಾಮದ ಶಾಲೆಯಲ್ಲಿ ಮುಖ್ಯೋಪಾಧ್ಯಾಪಕನಾಗಿದ್ದಾನೆ. ಹುಡುಗಿಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಪಿಕ್ಕಿರಿಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆ. 18ರಂದು ಸಾಯಂಕಾಲ ಶಾಲೆಯಿಂದ ಮನೆಗೆ ಬಂದ ಮಗಳು ಬಹಳ ಬಳಲಿದ್ದಳು. ಕಾರನವೇನು ಎಂದು ಎಂದು ಕೇಳಿದ ತಂದೆ-ತಾಯಿಗೆ ಮಗಳು ನಡೆದ ಘಟನೆಯನ್ನು ತಿಳಿಸಿದ್ದಾಳೆ. ನಂತರ ಪೋಷಕರು ಶಾಲೆಯ ಆಡಳಿತ ಮಂಡಳಿಯವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ. ಆದರೆ ಶಾಲೆಯ ಆಡಳಿತ ಮಂಡಳಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನೊಂದ ಪೋಷಕರು ಪಿಕ್ಕಿರಿಸ್ವಾಮಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ನಡೆಯಲು ಶಾಲೆಯ ಆಡಳಿತ ಮಂಡಳಿಯವರು ಕಾರಣರಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆರೋಪಿ ಪಿಕ್ಕಿರಿಸ್ವಾಮಿ ಮತ್ತು ಆಡಳಿತ ಮಂಡಳಿಯವರನ್ನು ಬಂಧಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಗ್ರಾಮದ ವಿವಿಧ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರು ಪ್ರತಿಭಟನೆ ನಡೆಸಿದ್ದು, ಆರೋಪಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಕೆರೈಕಲ್​ ಜಿಲ್ಲೆಯ ಪೊಲೀಸ್​ ಸೂಪರಿಡೆಂಟ್​ ಮಾರಿಮುತ್ತು ಮತ್ತು ಇತರರು ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2017/08/Girl-burns-herself-due-to-sexual-harassment-at-work-place.jpghttp://bp9news.com/wp-content/uploads/2017/08/Girl-burns-herself-due-to-sexual-harassment-at-work-place-150x150.jpgBP9ತಂತ್ರಜ್ಞಾನChief of Police,complained to police,Pikiriswami,Puducherry,raped by girlಪುದುಚೆರಿ: ಕೆರೈಕಲ್​ ಜಿಲ್ಲೆಯ ಸೆತುರಾ ಗ್ರಾಮದ ಕಿಂಡರ್​ ಗಾರ್ಟನ್​ ಖಾಸಗಿ ಶಾಲೆಯ ಬಾಲಕಿಯೊಬ್ಬಳ ಮೇಲೆ 42 ವರ್ಷದ ಕಾಮಾಂಧ ಮುಖ್ಯೋಪಾಧ್ಯಾಪಕ ಅತ್ಯಾಚಾರವೆಸಗಿದ್ದಾನೆ. ಹುಡುಗಿಯ ಮೇಲೆ ದೌರ್ಜನ್ಯವೆಸಗಿರುವ ಮುಖ್ಯೋಪಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಿಕ್ಕಿರಿಸ್ವಾಮಿ, ಸೆತುರಾ ಗ್ರಾಮದ ಶಾಲೆಯಲ್ಲಿ ಮುಖ್ಯೋಪಾಧ್ಯಾಪಕನಾಗಿದ್ದಾನೆ. ಹುಡುಗಿಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಪಿಕ್ಕಿರಿಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ. 18ರಂದು ಸಾಯಂಕಾಲ ಶಾಲೆಯಿಂದ ಮನೆಗೆ ಬಂದ ಮಗಳು ಬಹಳ ಬಳಲಿದ್ದಳು. ಕಾರನವೇನು ಎಂದು ಎಂದು ಕೇಳಿದ ತಂದೆ-ತಾಯಿಗೆ ಮಗಳು...Kannada News Portal