ಸ್ಯಾಂಡಲ್​ವುಡ್​ ನಟಿ, ಸ್ವೀಟಿ ರಾಧಿಕಾ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ನಟಿಯಾಗಿದ್ದಾರೆ. ಮತ್ತೆ ಚಂದನವನದಲ್ಲಿ ಭರವಸೆ ನಾಯಕಿಯಾಗಿ ಬೆಳೆಯುತ್ತಿದ್ದಾರೆ. ರಾಧಿಕಾ ಮೊದಲಿಗಿಂತ ಮತ್ತಷ್ಟೂ ಕಂಗೊಳಿಸ್ತಾ ಇದ್ದಾರೆ. ಅದೇ ಗ್ಲಾಮರ್​ ಲುಕ್​ನಲ್ಲಿ ಪಡ್ಡೆ ಹುಡುಗರ ಹಾರ್ಟ್​ ಗೆ ಲಗ್ಗೆ ಇಡೋಕೆ ಬರುತ್ತಿದ್ದಾರೆ. ಈಗಾಗಲೇ  ಜ್ಯುವೆಲ್ಸ್​ ಆಫ್​ ಇಂಡಿಯಾ  ಬ್ರ್ಯಾಂಡ್​ ಅಂಬಾಸಿಡರ್​ ಆಗಿ ನೇಮಕವಾಗಿರೋ ರಾಧಿಕಾ ಕೈ ತುಂಬಾ  ಸಿನಿಮಾ ಪ್ರಾಜೆಕ್ಟ್​ ಗಳಿವೆ.

ಅಲ್ಲಾ ರೀ, ರಾಧಿಕಾಗೆ ಮಗಳಿದ್ದಾಳೆ ಅಂತಾ ಯಾರು  ಹೇಳಿದ್ದೂ….!!! ಹಾಂ.. ನಿಜ ರಾಧಿಕಾ ನೋಡಿದ್ರೆ ಯಾರ್​ ಬೇಕಾದ್ರೂ ಹೀಗೆ ಹೇಳ್ತಾರೆ. ಯಾಕಂದ್ರೆ ರಾಧಿಕಾ ಈಗ ನೋಡೋಕೆ ಸುರ ಸುಂದರಿಯಾಗಿದ್ದಾರೆ. ಒಬ್ಬ ಮಗುವಿನ ತಾಯಿಯಾಗಿದ್ದರೂ, ಈಗಿನ ಹೀರೋಯಿನ್​ಗಳನ್ನು ನಾಚಿಸುವಂತಹ ಬ್ಯೂಟಿ ಅವರಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಧಿಕಾ ಫೋಟೋಗಳದ್ದೇ ಅಬ್ಬರ. ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿವೆ ಗ್ಲಾಮರ್​ ಬ್ಯೂಟಿಯ ಚಿತ್ರಪಟಗಳು. ರಾಧಿಕಾ ಅವರು ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಉಡುಪನ್ನು ಧರಿಸಿರುವ ರಾಧಿಕಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಫಿಟ್ನೆಸ್ ಬಗ್ಗೆ ಗಮನ ಹರಿಸುವ ರಾಧಿಕಾ ಇನ್ನೂ ತೆಳ್ಳಗೆ ಆಗಿದ್ದಾರೆ.  15 ವರ್ಷಗಳ ಹಿಂದೆ ಇದ್ದಾಗ ಹೇಗಿದ್ದಿರೋ ಈಗಲೂ ಹಾಗೆಯೇ ಇದ್ದೀರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಅವರು  ಹೇಳುವ ಪ್ರಕಾರ, ನಾನು ಯಾವಾಗಲೂ ಪಾಸಿಟೀವ್ ಆಗಿ ಇರುತ್ತೇನೆ. ನಾನು ಯಾವುದೇ ವಿಚಾರಕ್ಕೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಒತ್ತಡ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾನು ಅದನ್ನು 5-10 ಮಿನಿಟ್ ತೆಗೆದುಕೊಳ್ಳುತ್ತೇನೆ. ನಂತರ ಅದನ್ನು ಮರೆತು ನನ್ನ ಕೆಲಸದ ಕಡೆ ಗಮನ ಕೊಡುತ್ತೇನೆ. ಯಾವಾಗಲೂ ಸಿನಿಮಾ, ಕುಟುಂಬ ಎಂದು ಬ್ಯುಸಿಯಾಗಿರುತ್ತೇನೆ. ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದರು.

ಸದ್ಯಕ್ಕೆ ರಾಧಿಕಾ `ಭೈರಾದೇವಿ’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮೂರು ಭಾಷೆಯಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ಈ ತಿಂಗಳು ಸಂಪೂರ್ಣ ಶೂಟಿಂಗ್ ಮುಗಿಯುತ್ತದೆ ಎಂದು ಹೇಳಿದ್ದರು. ಜೊತೆಗೆ ರಾಜೇಂದ್ರ ಪೊನ್ನಪ್ಪ, ಹಾಗೂ ದಮಯಂತಿ ಸಿನಿಮಾದಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.

Please follow and like us:
0
http://bp9news.com/wp-content/uploads/2018/09/64260254.jpghttp://bp9news.com/wp-content/uploads/2018/09/64260254-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ ನಟಿ, ಸ್ವೀಟಿ ರಾಧಿಕಾ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ನಟಿಯಾಗಿದ್ದಾರೆ. ಮತ್ತೆ ಚಂದನವನದಲ್ಲಿ ಭರವಸೆ ನಾಯಕಿಯಾಗಿ ಬೆಳೆಯುತ್ತಿದ್ದಾರೆ. ರಾಧಿಕಾ ಮೊದಲಿಗಿಂತ ಮತ್ತಷ್ಟೂ ಕಂಗೊಳಿಸ್ತಾ ಇದ್ದಾರೆ. ಅದೇ ಗ್ಲಾಮರ್​ ಲುಕ್​ನಲ್ಲಿ ಪಡ್ಡೆ ಹುಡುಗರ ಹಾರ್ಟ್​ ಗೆ ಲಗ್ಗೆ ಇಡೋಕೆ ಬರುತ್ತಿದ್ದಾರೆ. ಈಗಾಗಲೇ  ಜ್ಯುವೆಲ್ಸ್​ ಆಫ್​ ಇಂಡಿಯಾ  ಬ್ರ್ಯಾಂಡ್​ ಅಂಬಾಸಿಡರ್​ ಆಗಿ ನೇಮಕವಾಗಿರೋ ರಾಧಿಕಾ ಕೈ ತುಂಬಾ  ಸಿನಿಮಾ ಪ್ರಾಜೆಕ್ಟ್​ ಗಳಿವೆ. ಅಲ್ಲಾ ರೀ, ರಾಧಿಕಾಗೆ ಮಗಳಿದ್ದಾಳೆ ಅಂತಾ ಯಾರು  ಹೇಳಿದ್ದೂ....!!! ಹಾಂ.....Kannada News Portal