ಬೆಂಗಳೂರು : ನನ್ನ ಬಗ್ಗೆ ಮಾತನಾಡುವುದು ಕಮ್ಮಿ ಮಾಡಿ, ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅಂತ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

ಅವರು ಇಂದು ರಾಜ್ಯದ ವಿಧಾನಸಭಾ ಚುನಾವಣೆಯ ಸಲುವಾಗಿ 8ನೇ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್‌ ಚುನಾವಣಾ ಪ್ರಚಾರವನ್ನು ಬೀದರ್ನ ಔರದ್ ನಲ್ಲಿ ನಡೆಸಿದರು. ಇದೇ ವೇಳೆ ಅವರು ಮಾತನಾಡಿ ಬಸವೇಶ್ವರರು ಹೇಳಿದಂತೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಾವು ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ನಿಂಧನೆ ಮಾಡಿಲ್ಲ ಅವರು, ನಮ್ಮ ಮೇಲೆ ವೈಯಕ್ತಿಕ ಆರೋಪ ಮಾಡ್ತಿದ್ದಾರೆ. ನಾವು ಅವರ ಮಟ್ಟಕ್ಕೆ ಹೋಗುವುದಿಲ್ಲ ಅಂತ ಹೇಳಿದರು.

ಇದೇ ವೇಳೆ ಅವರು ಮಾತನಾಡಿ ನರೇಂದ್ರ ಮೋದಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಾಲ್ಕು ಮಂತ್ರಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹ ವ್ಯಕ್ತಿಗಳನ್ನು ಆರಿಸಿ ಕಳುಹಿಸುತ್ತೀರಾ..? ಅಂತ ಪ್ರಶ್ನೆ ಮಾಡಿದರು.

ಭ್ರಷ್ಟಾಚಾರ ಬಗ್ಗೆ ಮಾತನಾಡುವ ಮೋದಿ ಅವರೇ ನಿಮ್ಮ ಪಕ್ಕದಲ್ಲಿ ಭ್ರಷ್ಟಾಚಾರ ಮಾಡಿದ ಬಿ.ಎಸ್ ವೈ ಸಿ.ಎಂ ಅಭ್ಯರ್ಥಿ ಏಕೆ ಮಾಡಿದ್ದಿರೀ, ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಅಕ್ಕ ಪಕ್ಕದ ವೇದಿಕೆಯಲ್ಲಿ ಇದ್ದಾರೆ ಅಂತ ಲೇವಡಿ ಮಾಡಿದರು.

ಮೋದಿ ನನ್ನ ಬಗ್ಗೆ ಏನೇ ದಾಳಿ ಹೇಳಿಕೆ ನೀಡಿದರು ಕೂಡ ನಾನು ತಲೆ ಕೆಡಿಸುಕೊಳ್ಳುವುದಿಲ್ಲ, ನಾನು ಭಾರತೀಯ. ನಮ್ಮ ದೇಶದ ಪ್ರಧಾನಿಯನ್ನು ಪ್ರಶ್ನೆ ಮಾಡುವುದು ನನ್ನ ಹಕ್ಕು ಎಂದಿದ್ದಾರೆ.
ಜಿಎಸ್‌ಟಿ ಟ್ಯಾಕ್ಸ್‌ ಮೂಲಕ ದೇಶದ ಜನರನ್ನು ಕೊಳ್ಳೆ ಹೊಡೆದಿದ್ದೀರಿ. ಶೋಲೆ ಸಿನಿಮಾದಲ್ಲಿ ಗಬ್ಬರ್‌ ಸಿಂಗ್‌ ಇರುವಂತೆ ಯಡಿಯೂರಪ್ಪ, ರೆಡ್ಡಿ ಸಹೋದರರು ಕೊಳ್ಳೆ ಹೊಡೆದಿದ್ದಾರೆ. ಇಂತಹವರನ್ನು ಆರಿಸಿ ಕಳುಹಿಸುತ್ತೀರಾ. ಇಂತಹವರು ಆರಿಸಿ ಬರುವುದು ರಾಜ್ಯದ ಜನರಿಗೆ ಬೇಕಾ ಎಂದು ಬಿದರ್​​ನ ಔರದುನಲ್ಲಿ ನಡೆದ ಕಾಂಗ್ರೆಸ್ಸ್ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದರು.

Please follow and like us:
0
http://bp9news.com/wp-content/uploads/2018/04/674377-rahulgandhipti-2.jpghttp://bp9news.com/wp-content/uploads/2018/04/674377-rahulgandhipti-2-150x150.jpgPolitical Bureauಪ್ರಮುಖಬೀದರ್ರಾಜಕೀಯRahul Gandhi Tang to Modi for less than talking about me  ಬೆಂಗಳೂರು : ನನ್ನ ಬಗ್ಗೆ ಮಾತನಾಡುವುದು ಕಮ್ಮಿ ಮಾಡಿ, ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅಂತ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ. ಅವರು ಇಂದು ರಾಜ್ಯದ ವಿಧಾನಸಭಾ ಚುನಾವಣೆಯ ಸಲುವಾಗಿ 8ನೇ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್‌ ಚುನಾವಣಾ ಪ್ರಚಾರವನ್ನು ಬೀದರ್ನ ಔರದ್ ನಲ್ಲಿ ನಡೆಸಿದರು. ಇದೇ ವೇಳೆ ಅವರು ಮಾತನಾಡಿ ಬಸವೇಶ್ವರರು ಹೇಳಿದಂತೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಾವು ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ...Kannada News Portal