ಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಲಿವೆ. ಬಿಜೆಪಿಯವರ ಸುಳ್ಳು ಪ್ರಚಾರಗಳು ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲ್ಲಲಿದೆ.

ರಾಹುಲ್​​ ಗಾಂಧಿ ಪ್ರಧಾನಿಯಾಗುವ ಮುನ್ಸೂಚನೆ ಇದೆ. ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಚುನಾವಣೆ ವೇಳೆ ಕೊಟ್ಟ ಯಾವ ಭರವಸೆ ಈಡೇರಿಸದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಜನರನ್ನು ವಿಭಜಿಸುವ ಮತ್ತು ದಾರಿ ತಪ್ಪಿಸುವ ಸಂಘ ಪರಿವಾರ ಮತ್ತು ಬಿಜೆಪಿಯ ಪ್ರಯತ್ನ ವಿಫಲಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪೆಟ್ರೋಲ್-ಡೀಸಲ್ ತೆರಿಗೆ ಇಳಿಸಬೇಕು :

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್​ನಲ್ಲಿ ಪೆಟ್ರೋಲ್-ಡೀಸಲ್ ಮೇಲೆ ಶೇ.2ರಷ್ಟು ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಇದು ಹೊರೆಯಾಗಲಿದೆ. ಹಾಗಾಗಿ ಶೇ.2ರಷ್ಟು ತೆರಿಗೆ ಹಚ್ಚಳ ಹಿಂಪಡೆದು ಈ ಮೊದಲಿನಂತೆ ಶೇ.32 ರಲ್ಲೇ ಮುಂದುವರೆಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ.

ಕೇಂದ್ರ ಸರ್ಕಾರ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ 9 ಬಾರಿ ಇಂಧನ ಬೆಲೆ ಏರಿಕೆ ಮಾಡಿದೆ. ಇದು ಜನರಿಗೆ ಹೊರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅನ್ನಭಾಗ್ಯ ಯೋಜನೆಯಡಿ ನಮ್ಮ ಸರ್ಕಾರ ನೀಡುತ್ತಿದ್ದ 7 ಕೆಜಿ ಅಕ್ಕಿ ಪೈಕಿ 2 ಕೆಜಿ ಕಡಿತ ಮಾಡಿರುವುದನ್ನು ಸಿದ್ದರಾಮಯ್ಯ ಗುರುವಾರ ನಡೆದ ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ವಿರೋಧಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/dc-Cover-seu4npoj24oj1kl91u5fj16h41-20160226074446.Medi_.jpeghttp://bp9news.com/wp-content/uploads/2018/07/dc-Cover-seu4npoj24oj1kl91u5fj16h41-20160226074446.Medi_-150x150.jpegPolitical Bureauಪ್ರಮುಖರಾಜಕೀಯRahul Gandhi to be Prime Minister of India : Siddaramaiahಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಲಿವೆ. ಬಿಜೆಪಿಯವರ ಸುಳ್ಳು ಪ್ರಚಾರಗಳು ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲ್ಲಲಿದೆ. ರಾಹುಲ್​​ ಗಾಂಧಿ ಪ್ರಧಾನಿಯಾಗುವ ಮುನ್ಸೂಚನೆ ಇದೆ. ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಚುನಾವಣೆ ವೇಳೆ ಕೊಟ್ಟ ಯಾವ ಭರವಸೆ ಈಡೇರಿಸದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಜನರನ್ನು ವಿಭಜಿಸುವ ಮತ್ತು ದಾರಿ ತಪ್ಪಿಸುವ ಸಂಘ...Kannada News Portal