ನವದೆಹಲಿ : ಅಪ್ಪ ರಾಜೀವ್​ ಕಾಲದಿಂದಲೂ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರನ್ನು  ರಾಹುಲ್​ಗಾಂಧಿ ತಮ್ಮ ತಂಡದಿಂದ ಹೊರ ಹಾಕಿದ್ದಾರೆ.  ಅದಕ್ಕೆ  ಕಾರಣ ಪ್ರಣಬ್​ ಅವರು ನಾಗ್ಪುರದಲ್ಲಿ ನಡೆದ ಆರ್​ಎಸ್​ಎಸ್​ ಕೂಟದಲ್ಲಿ ಭಾಗಿಯಾಗಿದ್ದು.

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರನ್ನು ಕಾಂಗ್ರೆಸ್​ ನಾಯಕ ರಾಹುಲ್​ಗಾಂಧಿ ಅವರು ಕೈ ಬಿಟ್ಟಿದ್ದಾರೆ. ಅವರನ್ನು  ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಜೂನ್​ 13 ರಂದು ದೆಹಲಿಯಲ್ಲಿ ಇಫ್ತಾರ್​ ಕೂಟವನ್ನು  ಹಮ್ಮಿಕೊಳ್ಳಲಾಗಿದೆ. ಕೂಟಕ್ಕೆ ಅನೇಕ ಘಟಾನುಘಟಿಗಳು ಬರುತ್ತಿದ್ದಾರೆ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್​ ಅನ್ಸಾರಿ  ಹಾಗೂ ಆಪ್​ ಪ್ರಮುಖರು ಆದ ದಿಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರವರನ್ನೂ ಕೂಟಕ್ಕೆ ಆಹ್ವಾನಿಸಿಲ್ಲ.

ದೆಹಲಿ ತಾಜ್‌ ಪ್ಯಾಲೇಸ್‌ ಹೊಟೆಲ್‌ನಲ್ಲಿ ಅಂದು ಇಫ್ತಾರ್‌ ಕೂಟ ಆಯೋಜನೆಯಾಗಿದ್ದು, 2 ವರ್ಷಗಳ ಅಂತರದ ನಂತರ ಪಕ್ಷದ ವತಿಯಿಂದ ಕೂಟ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚೆಗೆ ಆರೆಸ್ಸೆಸ್‌ ಸಮಾರಂಭದಲ್ಲಿ ಭಾಗಿಯಾಗಿ, ಸಂಘದ ಸಂಸ್ಥಾಪಕ ಕೇಶವ ಹೆಡಗೇವಾರ್‌ ಅವರನ್ನು ‘ಭಾರತ ಮಾತೆಯ ಭವ್ಯ ಸುಪುತ್ರ ಎಂದು ಪ್ರಣಬ್‌ ಹೊಗಳಿದ್ದರು. ಇದರಿಂದ ರಾಹುಲ್‌ ಕಸಿವಿಸಿಕೊಂಡಂತಿದ್ದು, ಅವರನ್ನು ಆಹ್ವಾನಿಸಲ್ಲ ಎಂದು ಹೇಳಲಾಗಿದೆ.

 

Please follow and like us:
0
http://bp9news.com/wp-content/uploads/2018/06/RP.jpghttp://bp9news.com/wp-content/uploads/2018/06/RP-150x150.jpgBP9 Bureauಪ್ರಮುಖರಾಷ್ಟ್ರೀಯನವದೆಹಲಿ : ಅಪ್ಪ ರಾಜೀವ್​ ಕಾಲದಿಂದಲೂ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರನ್ನು  ರಾಹುಲ್​ಗಾಂಧಿ ತಮ್ಮ ತಂಡದಿಂದ ಹೊರ ಹಾಕಿದ್ದಾರೆ.  ಅದಕ್ಕೆ  ಕಾರಣ ಪ್ರಣಬ್​ ಅವರು ನಾಗ್ಪುರದಲ್ಲಿ ನಡೆದ ಆರ್​ಎಸ್​ಎಸ್​ ಕೂಟದಲ್ಲಿ ಭಾಗಿಯಾಗಿದ್ದು. ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರನ್ನು ಕಾಂಗ್ರೆಸ್​ ನಾಯಕ ರಾಹುಲ್​ಗಾಂಧಿ ಅವರು ಕೈ ಬಿಟ್ಟಿದ್ದಾರೆ. ಅವರನ್ನು  ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. var domain = (window.location != window.parent.location)? document.referrer :...Kannada News Portal