ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ  ಅಧಿಕಾರಕ್ಕೆ  ಬಂದಿದೆ. ಜನರ   ನಿರೀಕ್ಷೆಗಳು ಬೇಕಾದಷ್ಟಿವೆ ಈ ಹಿನ್ನಲೆಯಲ್ಲಿ ಹೊಸ ಬಜೆಟ್ ಮಾಡಬೇಕಿದೆ. ಆದರೆ ಈ ಬಗ್ಗೆ ಸಮ್ಮಿಶ್ರ ಸರ್ಕಾರದಲ್ಲಿ ಅಪಸ್ವರ ಎದ್ದಿದ್ದು, ಏನು ಮಾಡಲಿ ಎಂದು ಸಿಎಂ ಕುಮಾರಸ್ವಾಮಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ನೇರವಾಗಿ ಕೇಳಿ, ನಂತರ  ಮುಂದುವರಿಯಲು  ನಿರ್ಧಾರ  ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಈಗ ಸಮನ್ವಯ  ಸಮಿತಿ ಅಧ್ಯಕ್ಷರಾಗಿದ್ದಾರೆ.  ಮೇಲಾಗಿ ಹೊಸ ಬಜೆಟ್  ಅಗತ್ಯವಿಲ್ಲ  ಬೇಕಾದರೆ ಪೂರಕ ಬಜೆಟ್ ಮಾಡಿಕೊಳ್ಳಲಿ  ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಆದರೆ ಪೂರಕ ಬಜೆಟ್‍ನಲ್ಲಿ ಹೇಳಬೇಕಾದ  ಕಾರ್ಯಕ್ರಮಗಳನ್ನು   ಹೇಳಲು, ಹಣ ಒದಗಿಸಲು ಆಗುವುದಿಲ್ಲ ಆದ್ದರಿಂದ ಹೊಸ ಬಜೆಟ್ ಮಾಡಲೇಬೇಕು  ಎಂದು ಹಠಕ್ಕೆ ಬಿದ್ದಿದ್ದಾರೆ.

ಈಗ ಈ ವಿಚಾರವನ್ನ ರಾಹುಲ್ ಗಾಂಧಿ ತನಕ ತೆಗೆದುಕೊಂಡು ಹೋಗಲು ಸಿಎಂ ನಿರ್ಧಾರ ಮಾಡಿದ್ದು,   ಅಲ್ಲಿಯೇ ಇತ್ಯರ್ಥಪಡಿಸಲಿಕೊಳ್ಳಲಿದ್ದಾರೆ  ಎನ್ನಲಾಗಿದೆ. ಕಡೆಗೂ ಕುಮಾರಸ್ವಾಮಿ ಕೈ ಮೇಲಾಗಿ ಹೊಸ ಬಜೆಟ್ ಜುಲೈ ಮೊದಲ ವಾರದಲ್ಲಿ ಮಂಡನೆಯಾಗಲಿದೆ ಎಂದು ಸಿಎಂ ಅಪ್ತ ಮೂಲಗಳು ಇದನ್ನು ಖಚಿತಪಡಿಸಿವೆ .

ಏನೆ ಆಗಲಿ ಇದು ಮೈತ್ರಿ ಕೂಟದಲ್ಲಿ ಮತ್ತಷ್ಟು ಕಂದಕ ಮೂಡಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನನಗೆ ಕಾಂಗ್ರೆಸ್‍ನಿಂದ ಯಾವುದೇ ಮುಜುಗರವಾಗುತ್ತಿಲ್ಲ ಬದಲಾಗಿ  ಮಾಧ್ಯಮ  ಮಿತ್ರರಿಂದ ಮುಜುಗರವಾಗುತ್ತಿದೆ ಎಂದು ಸಿಎಂ ಅಸಮಾಧಾನ ತೋಡಿಕೊಂಡಿರುವುದು ಇದಕ್ಕೆ ಹಿಡಿದ ಕನ್ನಡಿಯಾಗಿದೆ ಎನ್ನಲಾಗುತ್ತಿದೆ. ಇನ್ನು ಇದೆ 21 ರಿಂದ ಬಜೆಟ್‍ಗೆ ಸಿದ್ದರಾಗಿ, ಟಿಪ್ಪಣಿ ಮಂಡಿಸುವಂತೆ ಸಿಎಂ ಕಚೇರಿಯಿಂದ ಎಲ್ಲ ಪಧಾನ  ಕಾರ್ಯದರ್ಶಿಗಳು  ಮತ್ತು ಎಲ್ಲ ಸಚಿವರಿಗೆ ಸೂಚನೆ ಸಹ ಹೋಗಿದೆಯಂತೆ.

Please follow and like us:
0
http://bp9news.com/wp-content/uploads/2018/06/690709-rg121.jpghttp://bp9news.com/wp-content/uploads/2018/06/690709-rg121-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ  ಅಧಿಕಾರಕ್ಕೆ  ಬಂದಿದೆ. ಜನರ   ನಿರೀಕ್ಷೆಗಳು ಬೇಕಾದಷ್ಟಿವೆ ಈ ಹಿನ್ನಲೆಯಲ್ಲಿ ಹೊಸ ಬಜೆಟ್ ಮಾಡಬೇಕಿದೆ. ಆದರೆ ಈ ಬಗ್ಗೆ ಸಮ್ಮಿಶ್ರ ಸರ್ಕಾರದಲ್ಲಿ ಅಪಸ್ವರ ಎದ್ದಿದ್ದು, ಏನು ಮಾಡಲಿ ಎಂದು ಸಿಎಂ ಕುಮಾರಸ್ವಾಮಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ನೇರವಾಗಿ ಕೇಳಿ, ನಂತರ  ಮುಂದುವರಿಯಲು  ನಿರ್ಧಾರ  ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಈಗ ಸಮನ್ವಯ  ಸಮಿತಿ ಅಧ್ಯಕ್ಷರಾಗಿದ್ದಾರೆ.  ಮೇಲಾಗಿ ಹೊಸ ಬಜೆಟ್  ಅಗತ್ಯವಿಲ್ಲ  ಬೇಕಾದರೆ...Kannada News Portal