ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಫ್ತಾರ್‌ ಕೂಟಕ್ಕೆ ಭೇಟಿ ನೀಡಿದ್ದು, ಇದೀಗ ಬಾರಿ ಸದ್ದು ಮಾಡುತ್ತಿದೆ. ಈ ಸದ್ದು ಸುದ್ದಿಯಾಗಿರುವುದು ಇಫ್ತಾರ್‌ ಕೂಟದಲ್ಲಿ ಯಾವೆಲ್ಲ ಗಣ್ಯಾತಿಗಣ್ಯರು ಭಾಗವಹಿಸಿದರು ಎಂಬ ಕಾರಣಕ್ಕಲ್ಲ; ಬದಲು ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್‌ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‌ಗಳಲ್ಲಿ ಅದನ್ನು ತೆಗೆದ ಕಾರಣಕ್ಕೆ !

ಹೌದು, ರಾಹುಲ್‌ ಗಾಂಧಿ ಫೋಟೋ ಫೋಸ್ ಕೊಟ್ಟು ತಕ್ಷಣ ಬಿಳಿ ಟೋಪಿಯನ್ನು ತೆಗೆದಿದ್ದಾರೆ. ಇದಕ್ಕೆ ಬಿಜೆಪಿ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದು ಇದು ಕೇವಲ ಫೊಟೋ ಪ್ರಚಾರದ ಗಿಮಿಕ್ ಗಾಗಿ ಅವರು ಇಫ್ತಾರ್‌ ಕೂಟಕ್ಕೆ ಭೇಟಿ ನೀಡಿದ್ದರೇ ಹೊರತು ಬಾಂದವ್ಯದಿಂದ ಅಲ್ಲಾ. ರಾಹುಲ್‌ ಗಾಂಧಿ ಅವರ ಇಫ್ತಾರ್‌ ಪಾರ್ಟಿ ಕೇವಲ ಒಂದು ನಾಟಕ; ಮುಸ್ಲಿಮರನ್ನು ಸಂಪ್ರೀತಗೊಳಿಸುವ ತಂತ್ರ; ಕೇವಲ ಒಂದು ರಾಜಕೀಯ ಸ್ಟಂಟ್‌ ಎಂದು ಬಿಜೆಪಿ ಟೀಕಿಸಿದೆ.

ಮುಸ್ಲಿಂ ಬೆಂಬಲಿಗನೋರ್ವ ಒತ್ತಾಯದಿಂದ ರಾಹುಲ್‌ ತಲೆಗೆ ಬಿಳಿ ಕ್ಯಾಪ್‌ ತೊಡಿಸುವುದು; ಕ್ಯಾಪ್‌ ತೊಟ್ಟಕೊಂಡ ಕೇವಲ 10 ಸೆಕೆಂಡ್‌ಗಳಲ್ಲಿ ರಾಹುಲ್‌ ಅದನ್ನು ತೆಗೆದಿರಿಸುವುದು – ಎಲ್ಲವೂ ವಿಡಿಯೋದಲ್ಲಿ ಚಿತ್ರಿತವಾಗಿದ್ದು ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ಮುಸ್ಲಿಂ ಧಾರ್ಮಿಕ ಅಸ್ಮಿತೆಯಾಗಿರುವ ಬಿಳಿ ಕ್ಯಾಪನ್ನು ಧರಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ರಾಹುಲ್‌ ಅದನ್ನು ತೆಗೆದಿರುವುದು ಮುಸ್ಲಿಂ ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಹೇಳಲಾಗಿದೆ.

ಅಂದ ಹಾಗೆ ರಾಹುಲ್‌ ಗಾಂಧಿ ಅವರು ಕಳೆದ ವರ್ಷ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕದಲ್ಲಿ ಏರ್ಪಡಿಸಲಾಗಿರುವ ಮೊದಲ ಇಫ್ತಾರ್‌ ಕೂಟ ಇದಾಗಿದೆ. ರಾಹುಲ್‌ ಗಾಂಧಿ ಅವರ ಇಫ್ತಾರ್‌ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಹಿತ ಹಲವು ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/06/rahul-skull-cap-700.jpghttp://bp9news.com/wp-content/uploads/2018/06/rahul-skull-cap-700-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯRahul Gandhi's Iftar Conference is a Drama !!! : White hat with just 10 seconds ???ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಫ್ತಾರ್‌ ಕೂಟಕ್ಕೆ ಭೇಟಿ ನೀಡಿದ್ದು, ಇದೀಗ ಬಾರಿ ಸದ್ದು ಮಾಡುತ್ತಿದೆ. ಈ ಸದ್ದು ಸುದ್ದಿಯಾಗಿರುವುದು ಇಫ್ತಾರ್‌ ಕೂಟದಲ್ಲಿ ಯಾವೆಲ್ಲ ಗಣ್ಯಾತಿಗಣ್ಯರು ಭಾಗವಹಿಸಿದರು ಎಂಬ ಕಾರಣಕ್ಕಲ್ಲ; ಬದಲು ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್‌ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‌ಗಳಲ್ಲಿ ಅದನ್ನು ತೆಗೆದ ಕಾರಣಕ್ಕೆ ! ಹೌದು, ರಾಹುಲ್‌ ಗಾಂಧಿ ಫೋಟೋ ಫೋಸ್ ಕೊಟ್ಟು...Kannada News Portal