ಬೆಂಗಳೂರು : ಒಂದು ಹಳ್ಳಿಗೆ ನೀರು ಬಂದಿರಲ್ಲ. ಆಗ ಟ್ಯಾಂಕರ್​ ಮೂಲಕ ಆ ಹಳ್ಳಿಗೆ ನೀರು ಕಳುಹಿಸಲಾಗಿರುತ್ತೆ. ಈ ವಿಚಾರ ಅಲ್ಲಿನ ಪುಡಾರಿಗೆ, ಶಕ್ತಿವಂತನಿಗೆ ತಿಳಿಯುತ್ತದೆ. ಎಷ್ಟೋ ಸಮಯದಿಂದ ಬಿಂದಿಗೆ ಇಟ್ಟು ಸಾಲಿನಲ್ಲಿ ನಿಂತು ಕಾಯುತ್ತಿದ್ದ ಜನರನ್ನು ತಳ್ಳಿ, ಆ ವ್ಯಕ್ತಿ ತನ್ನ ಕೊಡವಿಟ್ಟು ನೀರು ತುಂಬಿಸಿಕೊಳ್ಳುತ್ತಾನೆ. ಇದು ಕಾಂಗ್ರೆಸ್​ ಸಂಸ್ಕೃತಿ. ದೇಶದ ರಾಜಕಾರಣದಲ್ಲಿಯೂ ಇದೇ ನಡೆಯುತ್ತಿದೆ. 2019ಕ್ಕೆ ನಾನೇ ಪಿಎಂ ಎಂದು ರಾಹುಲ್​ ಘೋಷಣೆ ಮಾಡಿಕೊಂಡಿದ್ದಾರೆ.

ಇದು ಅಹಂಕಾರದ ಪರಮಾವಧಿ ಅಲ್ವಾ. ಇದು ಪ್ರಜಾಪ್ರಭುತ್ವದ ಆಶಯವೇ ? ಮೈತ್ರಿ ಕೂಟ ಮಾಡಿ ಕೊಂಡಿದ್ದು ಈ ರೀತಿ ಏಕಪಕ್ಷೀಯವೂ ಅಲ್ಲದ ಏಕ ವ್ಯಕ್ತಿ ನಿರ್ಧಾರ ತೆಗೆದು ಕೊಳ್ಳುವುದು ಸರಿಯೇ. ಯಾವ ಈ ವ್ಯಕ್ತಿಗೆ ಮೈತ್ರಿ ಕೂಟದ ಬಗ್ಗೆ ಗೌರವ ಇಲ್ಲವೋ ಇಂತಹ ವ್ಯಕ್ತಿಯನ್ನು ಅಪ್ರಬುದ್ಧ ಎಂದು ಕರೆಯ ಬೇಕೋ ಬೇಡವೋ ನೀವೇ ಹೇಳಿ.

ಪ್ರಜಾಪ್ರಭುತ್ವವನ್ನು ನುಚ್ಚು ನೂರು ಮಾಡುತ್ತಿರುವ ಈ ಅಹಂಕಾರಿ ಕಾಂಗ್ರೆಸ್ಸಿಗರು ಹೃದಯ ವಿಲ್ಲದವರು, ದಲಿತರ ವಿರೋಧಿಗಳು, ಡೀಲ್​ ಪಕ್ಷದವರು. ಅಂದ್ರೆ ಅಕ್ರಮ ವ್ಯವಹಾರಸ್ತರ ಪಕ್ಷ.

ಈ ಡೀಲ್​ ಬಗ್ಗೆ ನಾನು ಹುಟ್ಟಿಸಿ ಕೊಂಡು ಹೇಳಿಲ್ಲ. ಸ್ವತಃ ಚಿಕ್ಕಬಳ್ಳಾಪುರದ ಸಂಸದರಾದ ವೀರಪ್ಪಮೋಯ್ಲಿ ಹೇಳಿದ ಮಾತು. ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಬರೆದು ಕೊಂಡಿದ್ದರು. ಕಾಂಗ್ರೆಸ್​ ಹಣ ತೊಂದರೆ ಇರುವುದರಿಂದ ಟಿಕೆಟ್ ಮಾರಾಟಕ್ಕೆ ಇಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮೋಯ್ಲಿ ಸಣ್ಣಪುಟ್ಟ ನಾಯಕರಲ್ಲ. ಕಾಂಗ್ರೆಸ್​ನ ಪ್ರಭಾವಿ ಮುಖಂಡರು. ದೆಹಲಿ ಅಂಗಳಕ್ಕೆ ತುಂಬ ಹತ್ತಿರದವರು. ಕಾಂಗ್ರೆಸ್​ನಲ್ಲಿ ಅನೇಕ ಹಿರಿಯ ನಾಯಕರುನ್ನು ಕಡೆಗಣಿಸಿದ್ದಾರೆ. ಅದರಲ್ಲೂ ಕರ್ನಾಟದ ನಾಯಕರ ಬಗ್ಗೆ ಹೇಳಲೇ ಬೇಕಾಗಿಲ್ಲ. ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ ಇವತ್ತಿನ ವೀರಪ್ಪ ಮೋಯ್ಲಿವರೆಗೂ ಅವಮಾನ ಮಾಡಿ ಸೈಡ್​ಲೈನ್​ ಮಾಡಲಾಗಿದೆ.

ಮೊಯ್ಲಿಜೀ ತಮ್ಮ ಮಹಾಕಾವ್ಯ ಬರೆಯಲು ಬಿಟ್ಟು ನಿಮ್ಮ ಬಾಯಿ ಮುಚ್ಚಿಸಿದರು. ಆದರೆ ಕರ್ನಾಟಕದ ಜನ ನಿಮ್ಮ ಅಭಿಮಾನಿಗಳು ಮಾತ್ರ ಕಾಂಗ್ರೆಸ್​ ನಿಮಗೆ ಮಾಡಿರುವ ಅನ್ಯಾಯವನ್ನು ಕ್ಷಮಿಸುವುದಿಲ್ಲ ಎಂದರು.

ನೋಟು ಅಪಮೌಲೀಕರಣದ ನಂತರ ಕಾಂಗ್ರೆಸ್​ ಪಕ್ಷದ ನಾಯಕರ ಮನೆಯಲ್ಲಿ ದೊರೆತ ಚಿನ್ನ ಹಣ ಲೆಕ್ಕವಿಲ್ಲ ಮತ್ತು ಸರ್ಕಾರಕ್ಕೂ ಲೆಕ್ಕಾ ಕೊಡದೆ ಬಚ್ಚಿಟ್ಟಿದ ಕಪ್ಪು ಹಣ. ಇತ್ತೀಚೆಗೆ ಅಧಿಕಾರಿಗಳಿಂದ ರೇಡ್​ನಲ್ಲಿ ಗುತ್ತಿಗೆದಾರರೂ ದೊರೆಯುತ್ತಿದ್ದಾರೆ. ಇವರು ಕಾಂಗ್ರೆಸ್​ ಬೇನಾಮಿಗಳು ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿ ಕೇಸ್​ ದಾಖಲು ಮಾಡಿದೆ ಎಂದರು.

ಇನ್ನು ಕೋಲಾರ ಇಂಗ್ಲೀಷ್​ನ ಕೆ ಯಿಂದ ಪ್ರಾರಂಭವಾಗುತ್ತದೆ. ಕೆ ಅಂದ್ರೆ ಕಿಂಗ್ ಎಂದು. ಹೌದು ಕೋಲಾರ ರಾಜನೇ. ಮಾವಿನ ಹಣ್ಣ, ​ಚಿನ್ನ , ಫ್ಯಾಬ್ರಿಕ್​, ಹಾಲು ಉತ್ಪಾದನೆಯಲ್ಲಿ ಈ ಕೋಲಾರ ರಾಜನಾಗಿದೆ. ರಾಜ್ಯದ ಅಭಿವೃದ್ಧಿಗೆ ಈ ಪ್ರದೇಶವೇ ಕಿಂಗ್​ ಎಂದ ಮೋದಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು. ನೀವು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯಲೆಂದೇ ನಾವು ಮಾರುಕಟ್ಟೆ ಮತ್ತು ದಾಸ್ತಾನುಗಳನ್ನು ನಿರ್ಮಾಣ ಮಾಡಿ ನಿಮಗೆ ಅನುವು ಮಾಡಿಕೊಡಲಾಗಿದೆ. ನಿಮಗೆ ಮೂಲಭೂತ ಸೌಕರ್ಯ ನೀಡಲು ಕೇಂದ್ರದ ಮೊದಲ ಆದ್ಯತೆ ನೀಡಲಾಗಿದೆ.

ತಂಪು ಪಾನೀಯಗಳನ್ನು ಕುಡಿಯುತ್ತಿರುತ್ತಾರೆ. ಆದರೆ ನಾನು ಕೆಲವರಿಗೆ ಹೇಳುತ್ತಿರುತ್ತೇನೆ. 5 ಪರ್ಸೆಂಟ್​ ಹೂಡಿಕೆ ಮಾಡಿ ನಮ್ಮ ರೈತರಿಗೆ ಸಹಾಯವಾಗುತ್ತದೆ ಎಂದು. ಮಹರಾಷ್ಟ್ರದಲ್ಲಿ ಕೊಕ್ಕೋಕೋಲಾ ಕಂಪನಿ ಜೊತೆ ಮಾತನಾಡಿ ಆ ಭಾಗದ ರೈತರು ಬೆಳೆದ ನೈಜ ಕಿತ್ತಲೆ ಬಳಸಲು ಹೇಳಿದೆವು,  ಅವರು  ತಮ್ಮ ಪಾನೀಯಗಳಲ್ಲಿ  ಬಳಸಲು ಪ್ರಾರಂಭಿಸಿದರು. ಆ ಭಾಗದ ರೈತರಿಗೆ ತಾವು ಬೆಳೆದ ಕಿತ್ತಲೆ ಬೆಳೆಗೆ ಸಾಕಷ್ಟು ಲಾಭ ದೊರೆತಿದೆ. ನಿಮಗೂ ಮುಂದಿನ ದಿನಗಳಲ್ಲಿ ಈ ಲಾಭ ದೊರೆಯುವಂತೆ ನಮ್ಮ ಸರ್ಕಾರ ಮಾಡುತ್ತದೆ ಎಂದು ಆಶ್ವಾಸನೆ ನೀಡಿದರು.

ಆದರೆ ನಿಮ್ಮ ಇಲ್ಲಿನ ಸಂಸದರಿಗೆ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬೇರೆ ನಾಯಕರು ಯಾರಾದರು ಬೆಳೆದರೆ ನನ್ನ ಕುರ್ಚಿಗೆ ತೊಂದರೆಯಾಗುತ್ತದೆ ಎಂದು ಯೋಚಿಸುವ ನಾಯಕರು ಇವರು. ಜನರ ಅಭಿವೃದ್ಧಿ ಇವರಿಗೆ ಅವಶ್ಯಕತೆ ಇಲ್ಲ. ಅವರ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಪಕ್ಷ ಮತ್ತುನಾಯಕರ ವಿರುದ್ಧ ಹರಿಹಾಯ್ದರು.

Please follow and like us:
0
http://bp9news.com/wp-content/uploads/2018/05/Narendra-Modi-in-Karnataka_BJP-twitter.jpghttp://bp9news.com/wp-content/uploads/2018/05/Narendra-Modi-in-Karnataka_BJP-twitter-150x150.jpgPolitical Bureauಕೋಲಾರಪ್ರಮುಖರಾಜಕೀಯRahul is proud to announce himself as PM !!! : Modiಬೆಂಗಳೂರು : ಒಂದು ಹಳ್ಳಿಗೆ ನೀರು ಬಂದಿರಲ್ಲ. ಆಗ ಟ್ಯಾಂಕರ್​ ಮೂಲಕ ಆ ಹಳ್ಳಿಗೆ ನೀರು ಕಳುಹಿಸಲಾಗಿರುತ್ತೆ. ಈ ವಿಚಾರ ಅಲ್ಲಿನ ಪುಡಾರಿಗೆ, ಶಕ್ತಿವಂತನಿಗೆ ತಿಳಿಯುತ್ತದೆ. ಎಷ್ಟೋ ಸಮಯದಿಂದ ಬಿಂದಿಗೆ ಇಟ್ಟು ಸಾಲಿನಲ್ಲಿ ನಿಂತು ಕಾಯುತ್ತಿದ್ದ ಜನರನ್ನು ತಳ್ಳಿ, ಆ ವ್ಯಕ್ತಿ ತನ್ನ ಕೊಡವಿಟ್ಟು ನೀರು ತುಂಬಿಸಿಕೊಳ್ಳುತ್ತಾನೆ. ಇದು ಕಾಂಗ್ರೆಸ್​ ಸಂಸ್ಕೃತಿ. ದೇಶದ ರಾಜಕಾರಣದಲ್ಲಿಯೂ ಇದೇ ನಡೆಯುತ್ತಿದೆ. 2019ಕ್ಕೆ ನಾನೇ ಪಿಎಂ ಎಂದು ರಾಹುಲ್​ ಘೋಷಣೆ ಮಾಡಿಕೊಂಡಿದ್ದಾರೆ. ಇದು ಅಹಂಕಾರದ...Kannada News Portal