ಬೆಂಗಳೂರು:ರಜನಿ ಹಾಗೂ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಶಂಕರ್ ನಿರ್ದೇಶನದ  ‘2.0’ ಚಿತ್ರ ಯಾವಾಗ  ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರೊಂದಿಗೆ ರಜನಿ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಅದೇನು ಅಂದ್ರೆ, ಆಗಸ್ಟ್ 15 ಕ್ಕೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತೆ ಅನ್ನೋ ಕ್ಲೂ ಒಂದು ಸಿಕ್ಕಿದೆ.
ಈ ಕ್ಲೂ ಕೊಟ್ಟಿರುವುದು ಬೇರಾರೂ ಅಲ್ಲ, ಆ ಸಿನಿಮಾದ ಸೌಂಡ್ ಎಂಜಿನಿಯರ್ ರೆಸೂಲ್ ಪೂಕುಟ್ಟಿ, ಅಭಿಮಾನಿಯೊಬ್ಬರು ರೆಸೂಲ್ ಪೂಕುಟ್ಟಿ ಅವರ ಟ್ವಿಟರ್ ಖಾತೆಯಲ್ಲಿ ಸಿನಿಮಾ ಟ್ರೇಲರ್ ರಿಲೀಸ್ ಯಾವಾಗ ಹೇಳಿ ಹೇಳಿ ಎಂದು ಒತ್ತಾಯ ಮಾಡಿದಾಗ, ರೆಸೂಲ್ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಯಾವಾಗ ಹೇಳಿ ಎಂದು ಪ್ರಶ್ನೆಗೆ ಪ್ರಶ್ನೆ ಹಾಕಿ ಕುತೂಹಲ ಮೂಡಿಸಿದ್ದಾರೆ. ಅಲ್ಲಿಗೆ ಅಭಿಮಾನಿಗಳಿಗೆ ಆಗಸ್ಟ್ 15 ಕ್ಕೆ ರಜನಿ -ಅಕ್ಕಿ ಕಾಂಬಿನೇಷನ್ ನ ‘2.0’ ಸಿನಿಮಾದ ‘ಟ್ರೇಲರ್ ರಿಲೀಸ್ ಆಗೋದು ಗ್ಯಾರಂಟಿ ಅಂದುಕೊಂಡಿದ್ದಾರೆ.  ಚಿತ್ರ ಇದೇ ವರ್ಷ ನವೆಂಬರ್ 29ರಂದು ರಿಲೀಸ್ ಆಗಲಿದೆ.
ಅಂದಹಾಗೆ, ಈ ಚಿತ್ರದಲ್ಲಿ ರಜನಿ ಆಂಡ್ರೋ ಹ್ಯೂಮನಾಯ್ಡ್ ಚಿಟ್ಟೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎದುರಾಳಿಯಾಗಿ ಅಕ್ಷಯ್ ಕುಮಾರ್ ಡಾ.ರಿಚರ್ಡ್ ಎಂಬ ಹುಚ್ಚು ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದಾರೆ. ಬ್ರಿಟಿಷ್ ನಟಿ ಕಮ್ ಮಾಡಲ್ ಆಮಿ ಜಾಕ್ಷನ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ಸೌಂಡ್ ಎಂಜಿನಿಯರ್ ಹೀಗೆ ಟ್ರೈಲರ್ ರಿಲೀಸ್ ಡೇಟ್ ಬಗ್ಗೆ ಬಾಯಿಬಿಟ್ಟಿದ್ರೂ ಅಧಿಕೃತವಾಗಿ ಘೋಷಣೆಯಾದ್ಮೇಲೆ ಪಕ್ಕಾ ಆಗಲಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲು ಅತೀ ದುಬಾರಿ ವೆಚ್ಚದಲ್ಲಿ ಅಂದ್ರೆ ಸುಮಾರು 400 ಕೋಟಿ ರೂಪಾಯಿಗೂ ಮೀರಿ ನಿರ್ಮಾಣವಾಗ್ತಿದೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/07/2.0.jpghttp://bp9news.com/wp-content/uploads/2018/07/2.0-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರಮೈಸೂರುಸಿನಿಮಾಬೆಂಗಳೂರು:ರಜನಿ ಹಾಗೂ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಶಂಕರ್ ನಿರ್ದೇಶನದ  ‘2.0’ ಚಿತ್ರ ಯಾವಾಗ  ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರೊಂದಿಗೆ ರಜನಿ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಅದೇನು ಅಂದ್ರೆ, ಆಗಸ್ಟ್ 15 ಕ್ಕೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತೆ ಅನ್ನೋ ಕ್ಲೂ ಒಂದು ಸಿಕ್ಕಿದೆ. var domain = (window.location != window.parent.location)? document.referrer...Kannada News Portal