ನಟ ರಕ್ಷಿತ್​ ಶೆಟ್ಟಿ ರಿಯಾಕ್ಟ್  ಮಾಡಿದ್ದಾರೆ. ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ರಶ್ಮಿಕಾ ಆಗಲೀ, ರಕ್ಷಿತ್​ ಶೆಟ್ಟಿಯಾಗಲೀ ಯಾರೂ ಮಾಧ್ಯಮಗಳ  ಮುಂದೆ  ಬಂದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ.  ಕೆಲ ದಿನಗಳಿಂದಷ್ಟೇ ಸೋಶಿಯಲ್​ ಮಿಡಿಯಾದಿಂದ ದೂರ ಉಳಿದಿದ್ದ ಸಿಂಪಲ್​ ಸ್ಟಾರ್​, ಅದೇ ಸೋಶಿಯಲ್​ ಮಿಡಿಯಾ ಮೂಲಕ ಲವ್​ ಬ್ರೇಕ್​ಅಪ್​ ಸುದ್ದಿ ಬಗ್ಗೆ ಮಾತನಾಡಿದ್ದಾರೆ.

ಗೌರವಾನ್ವಿತ ಜನರೇ,

ಬೇರೆ ಸಂಗತಿಗಳತ್ತ ಗಮನಹರಿಸಲು ನಾನು ಸೋಶಿಯಲ್​ ಮಿಡಿಯಾದಿಂದ ದೂರ ಸರಿಯುತ್ತಿರುವುದಾಗಿ ನಾನು ಘೋಷಿಸಿದ್ದೆ. ಆದರೆ ಕೆಲ ಸಂಗತಿಗಳ ಬಗ್ಗೆ ಸ್ಪಷ್ಟಪಡಿಸಲು ನಾನು ಮತ್ತೆ ಬರಬೇಕಾಯ್ತು. ಕಳೆದೆರಡು ದಿನಗಳಲ್ಲಿ ಘೋಷಿಸಿದ್ದೆ. ಆದರೆ ಕೆಲ ಸಂಗತಿಗಳ ಬಗ್ಗೆ ಸ್ಪಷ್ಟಪಡಿಸಲು ನಾನು ಮತ್ತೆ ಬರಬೇಕಾಯ್ತು. ಕಳೆದೆರಡು ದಿನಗಳಲ್ಲಿ ಹರಡುತ್ತಿರುವಸುದ್ದಿ ಲಿಟರಲಿ ಒಬ್ಬ ವ್ಯಕ್ತಿ ಯಾವುದನ್ನು ಪ್ರೀತಿಸಿದ್ದನೊ, ಯಾವುದಕ್ಕಾಗಿ ಬದುಕಿದ್ದನೋ ಅದನ್ನೇ  ದೋಚಿದಂತೆ ಆಯ್ತು. ನೀವೆಲ್ಲಾ ರಶ್ಮಿಕಾ ಬಗ್ಗೆ ನಿಮ್ಮದೇ ಆದ ಅಭಿಪ್ರಾಯಗಳನ್ನು  ಸೃಷ್ಟಿಸಿಕೊಂಡಿದ್ದೀರಿ. ನಾನು ನಿಮ್ಮಲ್ಲಿ ಯಾರನ್ನೂ ಇದಕ್ಕಾಗಿ ದೂಷಿಸಲ್ಲ, ಯಾಕಂದ್ರೆ ಅದನ್ನು ಆ ರೀತಿ ತೋರಿಸಲಾಯ್ತು. ನಾವು ಏನನ್ನೂ ನೋಡುತ್ತೇವೆಯೋ,  ಯಾವುದನ್ನೂ ಕೇಳುತ್ತೇವೆಯೋ ಅದನ್ನ ಸಹಜವಾಗಿ ಎಲ್ಲರೂ ನಂಬುತ್ತಾರೆ. ಆದರೆ, ಕೇಳಿದ್ದೆಲ್ಲಾ ಸತ್ಯವಾಗಿರಬೇಕಿಲ್ಲ. ಇನ್ನೊಂದು ಮಗ್ಗುಲಿನಿಂದ ನಾವ್ಯಾರೂ ಯೋಚಿಸದೇ ತೀರ್ಮಾನಕ್ಕೆ ಹೆಚ್ಚಿನ ಸಮಯ ನಾವು ಬಂದು ಬಿಡುತ್ತೇವೆ. ನಾನು ರಶ್ಮಿಕಾಳನ್ನು ಎರಡು ವರ್ಷಗಳಿಂದ ಬಲ್ಲೆ. ಮತ್ತೆ ನಿಮ್ಮೆಲ್ಲರಿಗಿಂತ ಹೆಚ್ಚಾಗಿ ನಾನು ಅವಳನ್ನು ಅರ್ಥ ಮಾಡಿಕೊಂಡಿದ್ದೇನೆ. ಇಲ್ಲಿ ಹಲವು ಸಂಗತಿಗಳು ಆಟವಾಡುತ್ತಿವೆ. ದಯವಿಟ್ಟು ಆಕೆಯನ್ನು ಜಡ್ಜ್​ ಮಾಡುವುದನ್ನು ಬಿಡಿ. ದಯವಿಟ್ಟು ಆಕೆಗೆ ಶಾಂತಿಯಿಂದ ಇರಲು ಬಿಡಿ.  ಎಲ್ಲಾ ವಿಷಯಗಳೂ ಆದಷ್ಟು ಬೇಗ ನಿರ್ಧಾರವಾಗಲಿವೆ ಎಂದು ನಾನು ನಂಬಿದ್ದೇನೆ.  ಮತ್ತು ನಿಮ್ಮೆಲ್ಲರಿಗೆ ಸತ್ಯ ಸಂಗತಿ ಮನವರಿಕೆಯಾಗಲಿದೆ.

ದಯವಿಟ್ಟು ಯಾವುದೇ ಮಾಧ್ಯಮದ ಸುದ್ದಿಯನ್ನು ನಂಬಬೇಡಿ. ಯಾಕಂದ್ರೆ ಅವರ್ಯಾರಿಗೂ ನನ್ನಿಂದಾಗಲೀ, ರಶ್ಮಿಕಾಳಿಂದಾಗಲೀ  ನೇರ ಮಾಹಿತಿ ಇಲ್ಲ. ಅವರಿಗೆಹೇಗೋ ಬೇಕೋ ಹಾಗೇ ಸುದ್ದಿಯನ್ನು ಮಾಡ್ತಾ ಇದ್ದಾರೆ. ಸತ್ಯ ಸಂಗತಿ ಗೊತ್ತಾಗುವವರೆಗೂ ನಾನು ಈ ಪೇಜನ್ನು ಜೀವಂತವಾಗಿಡುತ್ತೇನೆ. ಆದರೆ ನಾನು ಸೋಶಿಯಲ್​ ಮಿಡಿಯಾದಿಂದ ದೂರವಾಗೋಕೆ ಕಾರಣ ಈ ವಿಚಾರವಲ್ಲ. ಈಗ ಸೋಶಿಯಲ್​ ಮಿಡಿಯಾ ಚಟವಾಗುತ್ತಿದೆ. ಅದಕ್ಕಾಗಿ ಇದರಿಂದ ದೂರವಾಗೋಕೆ ನಾನು ದೂರವಾಗ್ತಿದ್ದೀನಿ  ಅಷ್ಟೆ.

 

Please follow and like us:
0
http://bp9news.com/wp-content/uploads/2018/09/54475709.jpghttp://bp9news.com/wp-content/uploads/2018/09/54475709-150x150.jpgBP9 Bureauಸಿನಿಮಾನಟ ರಕ್ಷಿತ್​ ಶೆಟ್ಟಿ ರಿಯಾಕ್ಟ್  ಮಾಡಿದ್ದಾರೆ. ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ರಶ್ಮಿಕಾ ಆಗಲೀ, ರಕ್ಷಿತ್​ ಶೆಟ್ಟಿಯಾಗಲೀ ಯಾರೂ ಮಾಧ್ಯಮಗಳ  ಮುಂದೆ  ಬಂದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ.  ಕೆಲ ದಿನಗಳಿಂದಷ್ಟೇ ಸೋಶಿಯಲ್​ ಮಿಡಿಯಾದಿಂದ ದೂರ ಉಳಿದಿದ್ದ ಸಿಂಪಲ್​ ಸ್ಟಾರ್​, ಅದೇ ಸೋಶಿಯಲ್​ ಮಿಡಿಯಾ ಮೂಲಕ ಲವ್​ ಬ್ರೇಕ್​ಅಪ್​ ಸುದ್ದಿ ಬಗ್ಗೆ ಮಾತನಾಡಿದ್ದಾರೆ. ಗೌರವಾನ್ವಿತ ಜನರೇ, ಬೇರೆ ಸಂಗತಿಗಳತ್ತ ಗಮನಹರಿಸಲು ನಾನು ಸೋಶಿಯಲ್​ ಮಿಡಿಯಾದಿಂದ ದೂರ...Kannada News Portal