ಬೆಂಗಳೂರು: ನಶಿಸುತ್ತಿರುವ ನದಿಗಳನ್ನು ಉಳಿಸುವ ಉದ್ದೇಶದಿಂದ ಈಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಆರಂಭಿಸಿರುವ ನದಿಗಳನ್ನು ರಕ್ಷಿಸಿ ಅಭಿಯಾನ (Rally for Rivers) ಇಂದು ಬೆಂಗಳೂರಿನಲ್ಲಿ ನಡೆಯಲಿದೆ.

Rally for Rivers ಅಭಿಯಾನದ ಸಲುವಾಗಿ ನಗರದ ಅರಮನೆ ಮೈದಾನದಲ್ಲಿ ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ ಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ, ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ನಟ ಪುನೀತ್ ರಾಜಕುಮಾರ್ ಹಾಗೂ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ.

 

ದೇಶದ 16 ರಾಜ್ಯಗಳ ಮೂಲಕ ಸಂಚರಿಸಲಿರುವ ಈ ಅಭಿಯಾನ ಕೊಯಮುತ್ತೂರಿನಲ್ಲಿ ಇದೇ ತಿಂಗಳ 3ರಂದು ಚಾಲನೆ ನೀಡಲಾಗಿತ್ತು.

ಮದುರೈ, ಕನ್ಯಾಕುಮಾರಿ, ತಿರುವನಂತಪುರ, ತಿರುಚಿನಾಪಳ್ಳಿ, ಪುದುಚೇರಿ ಮಾರ್ಗವಾಗಿ ಸಾಗಿಬಂದ ಅಭಿಯಾನ ಬೆಂಗಳೂರಿನ ಮೂಲಕ ಚೆನ್ನೈ ತಲುಪಲಿದೆ. ಅಕ್ಟೋಬರ್ 2ರಂದು ನವದೆಹಲಿಯಲ್ಲಿ Rally for Rivers ಕೊನೆಗೊಳ್ಳಲಿದೆ.

ಸಾರ್ವಜನಿಕರು 8000980009 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಬಹುದು’ ಎಂದು ಈಶಾ ಫೌಂಡೇಷನ್ ತಿಳಿಸಿದೆ.

 

Please follow and like us:
0
http://bp9news.com/wp-content/uploads/2017/09/maxresdefault-1024x576.jpghttp://bp9news.com/wp-content/uploads/2017/09/maxresdefault-150x150.jpgBP9 Bureauಪ್ರಮುಖಸದ್ಗುರುಬೆಂಗಳೂರು: ನಶಿಸುತ್ತಿರುವ ನದಿಗಳನ್ನು ಉಳಿಸುವ ಉದ್ದೇಶದಿಂದ ಈಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಆರಂಭಿಸಿರುವ ನದಿಗಳನ್ನು ರಕ್ಷಿಸಿ ಅಭಿಯಾನ (Rally for Rivers) ಇಂದು ಬೆಂಗಳೂರಿನಲ್ಲಿ ನಡೆಯಲಿದೆ. Rally for Rivers ಅಭಿಯಾನದ ಸಲುವಾಗಿ ನಗರದ ಅರಮನೆ ಮೈದಾನದಲ್ಲಿ ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ ಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ, ರಾಜ್ಯದ ಜಲ ಸಂಪನ್ಮೂಲ...Kannada News Portal