ಬೆಂಗಳೂರು:  ಕಿರುತೆರೆಯಲ್ಲಿ ಮೋಸ್ಟ್  ಹ್ಯಾಂಡ್ಸಮ್​ ಅಂಡ್​ ಟ್ಯಾಲೆಂಟೆಡ್​ ಅಂತಾ  ಗುರುತಿಸಿಕೊಂಡಿರುವ ರಮಣ ಖ್ಯಾತಿಯ ನಟ ಸ್ಕಂದ ಅಶೋಕ್​ಗೆ ಸದ್ಯ ಕಂಕಣ ಭಾಗ್ಯ ಕೂಡಿ ಬಂದಿದೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಮಾಡೆಲ್​ ಶಿಕಾ ಪ್ರಸಾದ್​ರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನ ಸ್ಕಂದ ನಾಲ್ಕುವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದಾರಂತೆ. ಈಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು ಇದೇ ತಿಂಗಳ 30 ರಂದು ಇವರಿಬ್ಬರು ಹಸೆಮಣೆ ಏರಲಿದ್ದಾರೆ.

 ಸ್ಕಂದ ಅಶೋಕ್​ ರಾಧರಮಣ ಧಾರವಾಹಿಯಲ್ಲಿ ರಮಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಅಲ್ಲದೇ  ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಮಣ ಅಲಿಯಾಸ್​ ಸ್ಕಂದ ಅಶೋಕ್​ ತಮ್ಮ  ಬಹುಕಾಲದ ಗೆಳತಿಯನ್ನು ಕೈ ಹಿಡಿಯುತ್ತಿದ್ದಾರೆಂಬ ವಿಷಯ ಕೇಳಿ ಕೆಲ ಅಭಿಮಾನಿಗಳು ಬೇಸರದಲ್ಲಿದ್ದಾರಂತೆ.

ಟಾಪ್​  ರೇಟಿಂಗ್​ ಲೀಸ್ಟ್​ನಲ್ಲಿ ಸ್ಕಂದ ಅಶೊಕ್​ ಗೆ ಟಾಪ್​ ಸ್ಥಾನ. ತಮ್ಮ ಅಭಿನಯದ ಮೂಲಕವೇ  ಸಾಕಷ್ಠು ಅಭಿಮಾನಿಗಳು ಸೆಳೆದಿರುವ ರಮಣ ಆ ಪಾತ್ರದಲ್ಲೇ ಹೆಚ್ಚು ಮಹಿಳಾ ಫ್ಯಾನ್ಸ್​ ಅ ನ್ನು ಹೊಂದಿದ್ದಾರೆ. ನಟ  ಇನ್ನು ಸ್ಕಂದ ಅಶೋಕ್​ ಕನ್ನಡದ ಚಾರುಲತಾ ಸೇರಿದಂತೆ, ತಮಿಳು ಮತ್ತು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ  ಕಿರುತೆರೆಯ ಮೋಸ್ಟ್​ ಟಿಆರ್​ಪಿ ಸೀರಿಯಲ್​ ರಾಧರಮಣದಲ್ಲಿ ರಮಣ ಕ್ಯಾರೆಕ್ಟರ್​ನಲ್ಲಿ ಮಿಂಚುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/05/ashok.jpghttp://bp9news.com/wp-content/uploads/2018/05/ashok-150x150.jpgBP9 Bureauಪ್ರಮುಖಸಿನಿಮಾ ಬೆಂಗಳೂರು:  ಕಿರುತೆರೆಯಲ್ಲಿ ಮೋಸ್ಟ್  ಹ್ಯಾಂಡ್ಸಮ್​ ಅಂಡ್​ ಟ್ಯಾಲೆಂಟೆಡ್​ ಅಂತಾ  ಗುರುತಿಸಿಕೊಂಡಿರುವ ರಮಣ ಖ್ಯಾತಿಯ ನಟ ಸ್ಕಂದ ಅಶೋಕ್​ಗೆ ಸದ್ಯ ಕಂಕಣ ಭಾಗ್ಯ ಕೂಡಿ ಬಂದಿದೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಮಾಡೆಲ್​ ಶಿಕಾ ಪ್ರಸಾದ್​ರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನ ಸ್ಕಂದ ನಾಲ್ಕುವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದಾರಂತೆ. ಈಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು ಇದೇ ತಿಂಗಳ 30 ರಂದು ಇವರಿಬ್ಬರು ಹಸೆಮಣೆ ಏರಲಿದ್ದಾರೆ.  ಸ್ಕಂದ ಅಶೋಕ್​ ರಾಧರಮಣ...Kannada News Portal